ಇರಾಕ್ ಕೋವಿಡ್‌ ಆಸ್ಪತ್ರೆಯಲ್ಲಿ ಆಕ್ಸಿಜನ್ ಟ್ಯಾಂಕ್ ಸ್ಪೋಟ ; ಬೆಂಕಿ ದುರಂತಕ್ಕೆ 54 ಮಂದಿ ಸಾವು!

13-07-21 12:51 pm       Headline Karnataka News Network   ದೇಶ - ವಿದೇಶ

ಇರಾಕ್ ಪ್ರದೇಶದಲ್ಲಿ ಇರುವ ಕೊರೊನಾವೈರಸ್ ಆಸ್ಪತ್ರೆಯ ವಾರ್ಡಿನಲ್ಲಿ ಸಂಭವಿಸಿರುವ ಅಗ್ನಿ ಅವಘಡದಲ್ಲಿ 54 ಮಂದಿ ಪ್ರಾಣ ಬಿಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಬಾಗ್ದಾದ್, ಜುಲೈ 13: ದಕ್ಷಿಣ ಇರಾಕ್ ಪ್ರದೇಶದಲ್ಲಿ ಇರುವ ಕೊರೊನಾವೈರಸ್ ಆಸ್ಪತ್ರೆಯ ವಾರ್ಡಿನಲ್ಲಿ ಸಂಭವಿಸಿರುವ ಅಗ್ನಿ ಅವಘಡದಲ್ಲಿ 54 ಮಂದಿ ಪ್ರಾಣ ಬಿಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ದಕ್ಷಿಣದ ನಾಸಿರಿಯಾ ನಗರದ ಅಲ್-ಹುಸೇನ್ ಆಸ್ಪತ್ರೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಮೃತಪಟ್ಟವರ ಮೈಯಲ್ಲಿ ತೀವ್ರವಾದ ಸುಟ್ಟ ಗಾಯಗಳಾಗಿವೆ. 54 ಮಂದಿ ಮೃತಪಟ್ಟಿದ್ದು, ಇನ್ನೂ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

3 ತಿಂಗಳ ಹಿಂದೆಯಷ್ಟೇ ಹೊಸ ವಾರ್ಡ್:

ಕಳೆದ ಮೂರು ತಿಂಗಳ ಹಿಂದೆಯಷ್ಟೇ ತೆರೆಯಲಾದ ಹೊಸ ವಾರ್ಡ್‌ನಲ್ಲಿ 70 ಹಾಸಿಗೆಗಳಿವೆ ಎಂದು ಇಬ್ಬರು ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ. ಆರೋಗ್ಯ ಸಚಿವಾಲಯವು ಬೆಂಕಿಯ ಕಾರಣದ ಬಗ್ಗೆ ಅಧಿಕೃತ ಅಂಕಿ-ಸಂಖ್ಯೆಯ ಬಗ್ಗೆ ಮಾಹಿತಿ ನೀಡಿಲ್ಲ.

ಅಗ್ನಿ ಅವಘಡ ನಡೆದ ಸಂದರ್ಭದಲ್ಲಿ ಕೊವಿಡ್-19 ವಾರ್ಡಿನಲ್ಲಿ ರೋಗಿಗಳು ಹಾಗೂ ವೈದ್ಯಕೀಯ ಸಿಬ್ಬಂದಿ ಸೇರಿದಂತೆ 63 ಜನರಿದ್ದರು ಎಂದು ಧಿ ಖಾರ್ ಆರೋಗ್ಯ ಇಲಾಖೆಯ ವಕ್ತಾರ ಅಮ್ಮರ್ ಅಲ್-ಜಮಿಲಿ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕೊವಿಡ್-19 ಆಸ್ಪತ್ರೆಯ ವಾರ್ಡ್ ಅನ್ನು ವೇಗವಾಗಿ ಹೊತ್ತಿಕೊಳ್ಳುವ ವಸ್ತುಗಳಿಂದಲೇ ಕಟ್ಟಲಾಗಿದೆ. ಈ ಹಿನ್ನೆಲೆಯಲ್ಲಿ ವಾರ್ಡ್ ಬೆಂಕಿಗೆ ಆಹುತಿಯಾಗಿದೆ ಎಂದು ಇರಾಕ್‌ನ ನಾಗರಿಕ ರಕ್ಷಣಾ ವಿಭಾಗದ ಮುಖ್ಯಸ್ಥ ಮೇಜರ್ ಜನರಲ್ ಖಾಲಿದ್ ಬೋಹನ್ ಪತ್ರಿಕೆಗಳಿಗೆ ಹೇಳಿಕೆ ನೀಡಿದ್ದಾರೆ.

The death toll from the fire at a COVID-19 hospital ward in Iraq's Nasiriyah has increased to 54, the health department of the southern province of Dhi Qar has said.