ಬ್ರೇಕಿಂಗ್ ನ್ಯೂಸ್
16-07-21 08:51 pm Headline Karnataka News Network ದೇಶ - ವಿದೇಶ
ಕಂದಹಾರ್, ಜುಲೈ 16: ಅಫ್ಘಾನಿಸ್ತಾನವನ್ನು ಅಮೆರಿಕದ ಪಡೆಗಳು ಬಿಟ್ಟು ಹೋಗುತ್ತಿದ್ದಂತೆ ಪ್ರಬಲವಾಗಿರುವ ತಾಲಿಬಾನ್ ಪಡೆಗಳು ದೇಶದ ಜನರ ಮೇಲೆ ಫತ್ವಾ ಕಾನೂನನ್ನು ಹೇರಿದೆ. ಅಫ್ಘಾನಿಸ್ತಾನದ ಬಹುತೇಕ ಪ್ರದೇಶಗಳನ್ನು ಆಕ್ರಮಿಸಿಕೊಂಡಿರುವ ತಾಲಿಬಾನಿಗಳು ಮಹಿಳೆಯರು ಹೊರಗೆ ಬಾರದಂತೆ ನಿಷೇಧ ಹೇರಿದೆ.
ಮಹಿಳೆಯರು ಹೊರಗೆ ಬರುವಂತಿಲ್ಲ. ಬರುವುದಿದ್ದರೂ ಜೊತೆಗೆ ಯಾರಾದ್ರೂ ಒಬ್ಬ ಕುಟುಂಬದ ಪುರುಷ ಸದಸ್ಯ ಇರಬೇಕು. ಪುರುಷರು ಗಡ್ಡ ತೆಗೆಯುವಂತಿಲ್ಲ ಎಂದು ಫತ್ವಾ ಕಾನೂನನ್ನು ಜನರ ಮೇಲೆ ಹೇರಲಾಗಿದೆ.
ಅಲ್ಲದೆ, ಗ್ರಾಮಸ್ಥರು ತಮ್ಮಲ್ಲಿರುವ 15 ವರ್ಷ ಮೇಲ್ಪಟ್ಟ ಹೆಣ್ಮಕ್ಕಳು ಮತ್ತು 45 ವರ್ಷದ ಒಳಗಿನ ವಿಧವಾ ಸ್ತ್ರೀಯರ ಪಟ್ಟಿಯನ್ನು ಕೊಡಬೇಕು. ಹೆಣ್ಮಕ್ಕಳನ್ನು ತಾಲಿಬಾನ್ ಚಳವಳಿಗಾರರಿಗೆ ಮದುವೆ ಮಾಡಿಸಬೇಕು. ಈ ಕೆಲಸವನ್ನು ದೇಶದಲ್ಲಿರುವ ಇಮಾಮ್, ಮುಲ್ಲಾಗಳು ಮಾಡಬೇಕು ಎನ್ನುವ ಆದೇಶವುಳ್ಳ ಕರಪತ್ರಗಳು ಅಲ್ಲಿನ ಜಾಲತಾಣದಲ್ಲಿ ವೈರಲ್ ಆಗಿವೆ.
ಆದರೆ, ಈ ಬಗ್ಗೆ ಅಲ್ಲಿನ ಸರಕಾರದ ಕಡೆಯಿಂದ ಆ ರೀತಿಯ ಯಾವುದೇ ಆದೇಶ ಪತ್ರವನ್ನು ನೀಡಲಾಗಿಲ್ಲ ಎಂದು ನಿರಾಕರಿಸಲಾಗಿದೆ. ಇವು ಆಧಾರ ರಹಿತ ಆರೋಪಗಳು ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಹೇಳಿದ್ದಾನೆ. ಆದರೆ, ತಾಲಿಬಾನ್ ಆಕ್ರಮಿತ ಪ್ರದೇಶದ ನಾಗರಿಕರು ಈ ರೀತಿಯ ಆದೇಶ ನೀಡಿರುವುದು ಸತ್ಯ ಎಂದು ಹೇಳಿಕೊಂಡಿದ್ದಾರೆ.
ರಾತ್ರಿ ಹೊತ್ತು ಯಾರು ಕೂಡ ಹೊರಗೆ ಬರುವಂತಿಲ್ಲ. ಕೆಂಪು ಮತ್ತು ಹಸಿರು ಬಟ್ಟೆಯನ್ನು ತೊಡುವಂತಿಲ್ಲ. ಇವು ಅಲ್ಲಿನ ಧ್ವಜದ ಬಣ್ಣವಾಗಿರುವುದರಿಂದ ಅದನ್ನು ಧರಿಸುವಂತಿಲ್ಲ. ಗಂಡಸರು ತಲೆಗೆ ರುಮಾಲು ಸುತ್ತಬೇಕು. ಗಡ್ಡೆ ತೆಗೆಯಬಾರದು. 16 ವರ್ಷದ ಮೇಲ್ಪಟ್ಟ ಹೆಣ್ಮಕ್ಕಳು ಶಾಲೆಗೆ ಹೋಗುವಂತಿಲ್ಲ ಎಂದು ತಾಲಿಬಾನಿಗಳು ಆದೇಶ ನೀಡಿರುವುದಾಗಿ ತಜಕಿಸ್ತಾನಕ್ಕೆ ಹೊಂದಿಕೊಂಡಿರುವ ಯುವಾನ್ ಜಿಲ್ಲೆಯ ನಾಗರಿಕರು ಹೇಳಿದ್ದಾರೆ.
Hardline Taliban social norms are allegedly back in some areas of Afghanistan where the group reportedly gained upper hand Days after the Taliban captured a remote district in Afghanistan's north, they issued their first orders in the form of a letter to the local imam, according to a report by noted news agency AFP.
29-04-25 04:28 pm
HK News Desk
Praveen Nettaru, Mohsin Shukur, Karwar Police...
29-04-25 01:04 pm
Siddaramaiah Angry, Belagavi, Police: ಸಿಎಂ ಭಾ...
28-04-25 10:15 pm
NIA Bangalore, Pahalgam Terror, Bharat Bhusha...
28-04-25 01:41 pm
CM Siddaramaiah, Janardhan Reddy, Pak War: ಸಿ...
27-04-25 09:22 pm
29-04-25 03:45 pm
HK News Desk
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎ...
27-04-25 08:42 pm
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
29-04-25 05:45 pm
Mangalore Correspondent
Mangalore, Dr Kalladka Bhat: ಹೆಣ್ಣು ಮಕ್ಕಳು ವ್...
29-04-25 12:40 pm
Vadiraj, Mangalore, B R Ambedkar: ಕಾಂಗ್ರೆಸ್ ಸ...
29-04-25 11:53 am
Highland Hospital Mangalore, FIR, Anti Nation...
29-04-25 11:38 am
ರೈಲ್ವೇ ಪರೀಕ್ಷೆಯಲ್ಲಿ ಜನಿವಾರ, ಮಂಗಳಸೂತ್ರ ಸೇರಿ ಧಾ...
28-04-25 11:41 am
29-04-25 02:53 pm
Mangalore Correspondent
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm
Mangalore Crime, Sexual Harrasment: ಸರ್ಕಾರಿ ಸ...
24-04-25 12:58 pm