ಏಳು ವರ್ಷಗಳಲ್ಲಿ ಪೆಟ್ರೋಲ್, ಡೀಸೆಲ್ ನೆಪದಲ್ಲಿ 25 ಲಕ್ಷ ಕೋಟಿ ಸಂಗ್ರಹ ; ಸಚಿನ್ ಪೈಲಟ್

17-07-21 11:17 pm       Headline Karnataka News Network   ದೇಶ - ವಿದೇಶ

ಒಂದು ವರ್ಷದಲ್ಲಿ ಕೇಂದ್ರ ಸರಕಾರ ಪೆಟ್ರೋಲ್ ದರವನ್ನು 66 ಬಾರಿ ಹೆಚ್ಚಿಸಿದ್ದು ಜನಸಾಮಾನ್ಯರ ಮೇಲೆ ಬರೆ ಹಾಕಿದೆ ಎಂದು ಕಾಂಗ್ರೆಸ್ ಮುಖಂಡ ಸಚಿನ್ ಪೈಲಟ್ ಹರಿಹಾಯ್ದಿದ್ದಾರೆ.

ಡೆಹ್ರಾಡೂನ್, ಜುಲೈ 17: ದೇಶದಲ್ಲಿ 250ಕ್ಕೂ ಹೆಚ್ಚು ನಗರಗಳಲ್ಲಿ ಪೆಟ್ರೋಲ್ ದರ ನೂರು ರೂ. ದಾಟಿದ್ದು ಕಲ್ಪನೆಗೂ ನಿಲುಕದ್ದಾಗಿದೆ. ಈ ರೀತಿಯ ದರ ಏರಿಕೆಯನ್ನು ನಂಬಲಾಗುತ್ತಿಲ್ಲ. ಒಂದು ವರ್ಷದಲ್ಲಿ ಕೇಂದ್ರ ಸರಕಾರ ಪೆಟ್ರೋಲ್ ದರವನ್ನು 66 ಬಾರಿ ಹೆಚ್ಚಿಸಿದ್ದು ಜನಸಾಮಾನ್ಯರ ಮೇಲೆ ಬರೆ ಹಾಕಿದೆ ಎಂದು ಕಾಂಗ್ರೆಸ್ ಮುಖಂಡ ಸಚಿನ್ ಪೈಲಟ್ ಹರಿಹಾಯ್ದಿದ್ದಾರೆ.

ಮಾಧ್ಯಮದ ಜೊತೆ ಮಾತನಾಡಿದ ಸಚಿನ್ ಪೈಲಟ್, ಕೇಂದ್ರ ಸರಕಾರವೇ ನೀಡಿರುವ ಮಾಹಿತಿ ಪ್ರಕಾರ ಕಳೆದ ಏಳು ವರ್ಷಗಳಲ್ಲಿ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಶೇಕಡಾ 250 ರಷ್ಟು ಹೆಚ್ಚಿಸಲಾಗಿದೆ. ಡೀಸೆಲ್ ಮೇಲಿನ ಅಬಕಾರಿ ತೆರಿಗೆಯನ್ನು ಶೇ. 800 ರಷ್ಟು ಏರಿಕೆ ಮಾಡಲಾಗಿದೆ. ಇದರ ಮೂಲಕ ಕೇಂದ್ರ ಸರಕಾರಕ್ಕೆ ಬಂದಿರುವ ಆದಾಯ 25 ಲಕ್ಷ ಕೋಟಿ ರೂಪಾಯಿ ಎಂದು ಹೇಳಿದ್ದಾರೆ.

ಕೇವಲ ಏಳು ದಿನಗಳಲ್ಲಿ ಇಷ್ಟೊಂದು ಭಾರೀ ಮೊತ್ತವನ್ನು ಕೇಂದ್ರ ಸರಕಾರ ತೆರಿಗೆಯ ರೂಪದಲ್ಲಿ ಜನಸಾಮಾನ್ಯನ ಜೇಬಿನಿಂದ ಕತ್ತರಿ ಹಾಕಿ ಕಿತ್ತುಕೊಂಡಿದೆ ಎಂದು ಕಿಡಿಕಾರಿದ್ದಾರೆ.

Senior Congress leader and former Rajasthan deputy chief minister, Sachin Pilot launched a scathing attack on the ruling Bharatiya Janata Party (BJP) in Centre on rising fuel prices in the country saying the prices of petrol and diesel are now “more than desi ghee.”