ಬ್ರೇಕಿಂಗ್ ನ್ಯೂಸ್
21-07-21 11:28 am Headline Karnataka News Network ದೇಶ - ವಿದೇಶ
ಚೆನ್ನೈ, ಜುಲೈ 21: ಸಮುದ್ರದಲ್ಲಿ ಜೀವಿಸುವ ತಿಮಿಂಗಿಲ ಯಾರಿಗೆ ಗೊತ್ತಿಲ್ಲ ಹೇಳಿ. ಆದರೆ, ಈ ತಿಮಿಂಗಿಲಗಳು ಭಾರೀ ಅಪರೂಪಕ್ಕೆ ವಾಂತಿ ಮಾಡುತ್ತೆ. ನೋಡಲು ಕಂದು ಅಥವಾ ಬೂದು ಬಣ್ಣದ ವ್ಯಾಕ್ಸ್ ರೀತಿ ಕಾಣುವ ಈ ವಾಂತಿ ಸಮುದ್ರದಲ್ಲಿ ತೇಲುತ್ತಾ ದಡಕ್ಕೆ ಬರುತ್ತದೆ. ತಿಮಿಂಗಿಲದ ವಾಂತಿ ಏನಾದ್ರೂ ಮೀನುಗಾರರಿಗೆ ಸಿಕ್ಕಿದ್ರೆ ಒಮ್ಮೆಲೇ ಕೋಟ್ಯಧಿಪತಿ ಆಗಬಹುದು. ಹೌದು.. ಈ ವ್ಯಾಕ್ಸ್ ರೀತಿಯ ತಿಮಿಂಗಿಲದ ವಾಂತಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಂಗಾರಕ್ಕಿಂತ ಹೆಚ್ಚು ಬೆಲೆ ಇದೆ.
Ambergris ಎಂದು ಕರೆಯಲ್ಪಡುವ ತಿಮಿಂಗಿಲದ ವಾಂತಿ ಒಮಾನ್ ದೇಶದ ಕಡಲ ತೀರದಲ್ಲಿ ಹೆಚ್ಚಾಗಿ ಕಾಣಸಿಗುವುದಂತೆ. ಹೊಟ್ಟೆಯಲ್ಲಿ ಬಹುಕಾಲದಿಂದ ಜಿಡ್ಡುಗಟ್ಟಿದ ರೀತಿ ಶೇಖರವಾಗುವ ಜಿಗುಟು ಅಂಟು ಪದಾರ್ಥವನ್ನು ತಿಮಿಂಗಿಲಗಳು ಬಾಯಿ ಮೂಲಕ ಹೊರಕ್ಕೆ ಕಕ್ಕುತ್ತದೆ. ಅವು ಸಮುದ್ರದ ನೀರಿನಲ್ಲಿ ತೇಲಿಕೊಂಡೇ ಇರುತ್ತದೆ. ಮೇಲ್ನೋಟಕ್ಕೆ ಕಪ್ಪಗೆ ಕಂಡರೂ, ಒಳಭಾಗದಲ್ಲಿ ಮಿಂಚುವ ರೀತಿ ಕಂದು ಬಣ್ಣದ ಅಂಟಿನ ರೀತಿಯ ಪದಾರ್ಥ ಇರುತ್ತದೆ.
ದುಬೈನಲ್ಲಿ ಅಂಬರ್ ಗ್ರೀಸ್ ಅನ್ನು ಪ್ರಮುಖವಾಗಿ ಪರ್ಫ್ಯುಮ್ ಉತ್ಪಾದನೆಯಲ್ಲಿ ಬಳಸುತ್ತಾರೆ. ಅಲ್ಲದೆ, ಯುರೋಪ್ ರಾಷ್ಟ್ರಗಳಲ್ಲಿ ಇದನ್ನು ವಿವಿಧ ರೀತಿಯ ಔಷಧಿ ಉತ್ಪಾದನೆಗೂ ಬಳಕೆ ಮಾಡುತ್ತಾರೆ. ಮಕ್ಕಳಾಗದ ಕಾಯಿಲೆ ಇದ್ದವರಿಗೆ ಇದರಿಂದ ಮಾಡಿರುವ ಔಷಧಿಯನ್ನು ನೀಡುತ್ತಾರಂತೆ. ಅದಕ್ಕಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಂಬರ್ ಗ್ರೀಸ್ ಗಳಿಗೆ ಕೋಟ್ಯಂತರ ರೂಪಾಯಿ ಬೆಲೆ ಇದೆ. ಹೀಗಾಗಿ ಅಂಬರ್ ಗ್ರೀಸ್ ಮಾರಾಟ, ಬಳಕೆಯನ್ನು ಭಾರತದಲ್ಲಿ ವೈಲ್ಡ್ ಲೈಫ್ ಏಕ್ಟ್ ಪ್ರಕಾರ ನಿಷೇಧಿಸಲಾಗಿದೆ.
ಇತ್ತೀಚೆಗೆ ಕೇರಳದ ಕೊಚ್ಚಿಯಲ್ಲಿ ಇಬ್ಬರು ಕಳ್ಳದಾರಿಯ ಮೂಲಕ 19 ಕೇಜಿ ಅಂಬರ್ ಗ್ರೀಸ್ ಅನ್ನು ಮಾರಾಟ ಮಾಡಲು ಹೊಂಚು ಹಾಕಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದರು. 19 ಕೇಜಿ ಇದ್ದ ಅಂಬರ್ ಗ್ರೀಸ್ ಮಾರುಕಟ್ಟೆ ಮೌಲ್ಯ 30 ಕೋಟಿಗೂ ಹೆಚ್ಚು ಎನ್ನುವ ಅಂದಾಜನ್ನು ಪೊಲೀಸರು ಹೇಳಿಕೊಂಡಿದ್ದರು. ಕೇರಳ ಅರಣ್ಯ ವಿಭಾಗದ ಪ್ಲೈಯಿಂಗ್ ಸ್ಕ್ವೇಡ್ ಮತ್ತು ವೈಲ್ಡ್ ಲೈಫ್ ಕ್ರೈಮ್ ಕಂಟ್ರೋಲ್ ಬ್ಯೂರೋ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ರಾಜ್ಯದಲ್ಲಿ ಮೊದಲ ಬಾರಿಗೆ ಅಷ್ಟು ದೊಡ್ಡ ಮೌಲ್ಯದ ಅಂಬರ್ ಗ್ರೀಸ್ ಅನ್ನು ವಶಕ್ಕೆ ಪಡೆದಿದ್ದರು. ಆರೋಪಿಗಳನ್ನು ತೃಶ್ಶೂರಿನ ಫೈಸಲ್ ಮತ್ತು ರಫೀಕ್ ಹಾಗೂ ಎರ್ನಾಕುಲಂ ಜಿಲ್ಲೆಯ ಹಂಝ ಎಂದು ಗುರುತಿಸಲಾಗಿತ್ತು.
ಅಧಿಕಾರಿಗಳು ಅಂಬರ್ ಗ್ರೀಸ್ ಅನ್ನು ಖರೀದಿಸುವ ನೆಪದಲ್ಲಿ ಆರೋಪಿಗಳ ತಂಡವನ್ನು ಭೇಟಿ ಮಾಡಿದ್ದು, ಬಳಿಕ ಬಂಧನ ಕಾರ್ಯಾಚರಣೆ ಮಾಡಿದ್ದರು. ಇದಕ್ಕೂ ಮುನ್ನ ಜುಲೈ 6ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ 12 ಕೋಟಿ ಮೌಲ್ಯದ ಎಂಟು ಕೇಜಿ ಅಂಬರ್ ಗ್ರೀಸ್ ಅನ್ನು ವಶಕ್ಕೆ ಪಡೆದು ಆರು ಮಂದಿಯ ತಂಡವನ್ನು ಪೊಲೀಸರು ಬಂಧಿಸಿದ್ದರು. ಫೇಸ್ಬುಕ್ ನಲ್ಲಿ ಅಂಬರ್ ಗ್ರೀಸ್ ಬಗ್ಗೆ ಹೇಳಿಕೊಂಡು ಒಬ್ಬಾತ ಪೋಸ್ಟ್ ಹಾಕಿದ್ದ. ಕೇಜಿಗೆ 35 ಲಕ್ಷದಂತೆ ಮಾರಾಟ ಮಾಡುತ್ತೇನೆಂಬ ಮಾಹಿತಿ ಆಧರಿಸಿ ಅಧಿಕಾರಿಗಳು ಖರೀದಿದಾರರ ಸೋಗಿನಲ್ಲಿ ಕಾರ್ಯಾಚರಣೆ ನಡೆಸಿ, ಆರು ಮಂದಿಯ ಗ್ಯಾಂಗನ್ನು ಬಂಧಿಸಿದ್ದರು.
ವಿದೇಶದಲ್ಲಿ ಬೂದು ಬಂಗಾರ, ಅಂಬರ್ ಗ್ರೀಸ್ ಎಂದು ಹೇಳುವ ತಿಮಿಂಗಿಲ ವಾಂತಿಗೆ ಭಾರೀ ಬೇಡಿಕೆಯಿದೆ. ಸಮುದ್ರದಲ್ಲಿ ಕೇವಲ ಒಂದು ಶೇಕಡಾ ತಿಮಿಂಗಿಲಗಳು ಮಾತ್ರ ಈ ರೀತಿಯ ವ್ಯಾಕ್ಸ್ ಅನ್ನು ಹೊರಕ್ಕೆ ಬಿಡುತ್ತದೆ. ಹೊಟ್ಟೆಯಲ್ಲಿ ಹಲವಾರು ವರ್ಷಗಳಿಂದ ಗಡ್ಡೆ ಕಟ್ಟಿದ ರೀತಿ ಹುದುಗಿರುವ ಈ ವ್ಯಾಕ್ಸ್ ಸಮುದ್ರದಲ್ಲಿ ಸಿಗುವುದೇ ಅತ್ಯಂತ ವಿರಳ. ಆದರೆ, ಯಾರಿಗಾದ್ರೂ ಮೀನುಗಾರರಿಗೆ ಈ ರೀತಿಯ ವ್ಯಾಕ್ಸ್ ಸಿಕ್ಕಿದರೆ, ಆತ ಒಮ್ಮೆಲೇ ಕೋಟ್ಯಧಿಪತಿಯೇ ಸರಿ.
The forest department has seized ambergris, commonly known as 'whale vomit, worth around Rs 30 crore from Chettuva in Thrissur district of Kerala and arrested three accused. As per forest officials, this is the first time a group selling ambergris has been caught in the state. The three-member group was apprehended after an operation conducted by the Kerala Forest Flying Squad and the Wildlife Crime Control Bureau.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm