ಬ್ರೇಕಿಂಗ್ ನ್ಯೂಸ್
30-07-21 07:31 pm Headline Karnataka News Network ದೇಶ - ವಿದೇಶ
ಕೊಲಂಬೋ, ಜುಲೈ 30: ಪ್ರಪಂಚದಲ್ಲಿಯೇ ಅತಿ ದೊಡ್ಡದು ಎನ್ನಲಾಗಿರುವ ನಕ್ಷತ್ರ ನೀಲಮಣಿ ಶ್ರೀಲಂಕಾದಲ್ಲಿ ಪತ್ತೆಯಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಉತ್ತರ ಶ್ರೀಲಂಕಾದ ರತ್ನಪುರ ಎಂಬಲ್ಲಿ ವ್ಯಕ್ತಿಯೊಬ್ಬರು ಬಾವಿ ತೋಡುತ್ತಿದ್ದಾಗ ಭಾರೀ ಗಾತ್ರದ ನೀಲಿ ಶಿಲೆ ಪತ್ತೆಯಾಗಿದ್ದು ಅದನ್ನು ಸರಕಾರದ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ನೀಲಮಣಿ 510 ಕೇಜಿ ಭಾರ ಹೊಂದಿದ್ದು, 2.5 ಲಕ್ಷ ಕ್ಯಾರೆಟ್ ಅಪ್ಪಟವಾಗಿದೆ. ಶ್ರೀಲಂಕಾದಲ್ಲಿ ರತ್ನಪುರ ಎಂಬುದು ರತ್ನಗಳ ರಾಜಧಾನಿ ಎಂದೇ ಹೆಸರು ಪಡೆದಿರುವ ಪ್ರದೇಶ. ಬೇರೆ ಬೇರೆ ರೀತಿಯ ಹವಳಗಳು, ಶಿಲೆಗಳು ಇಲ್ಲಿ ದೊರಕುವುದರಿಂದ ಅತ್ಯಂತ ವಿಶೇಷತೆಯನ್ನು ಹೊಂದಿದೆ. ಈ ಜಾಗದಲ್ಲಿ ಹವಳಗಳ ವ್ಯಾಪಾರಿಯೇ ಆಗಿರುವ ವ್ಯಕ್ತಿಯೊಬ್ಬರು ಬಾವಿ ತೋಡುತ್ತಿದ್ದಾಗ ಭಾರೀ ಗಾತ್ರದ ಶಿಲೆ ಪತ್ತೆಯಾಗಿತ್ತು. ಕಾರ್ಮಿಕರು ಅಪರೂಪದ ನೀಲಮಣಿ ಎಂದು ಇದರ ಬಗ್ಗೆ ಮಾಹಿತಿ ನೀಡಿದ್ದರು.
ವರ್ಷದ ಹಿಂದೆಯೇ ನೀಲಮಣಿ ಪತ್ತೆಯಾಗಿದ್ದು, ಅದನ್ನು ಕ್ಲೀನ್ ಮಾಡಲು ಒಂದು ವರ್ಷ ಬೇಕಾಯಿತು. ಹೊರಭಾಗದಲ್ಲಿ ಅಂಟಿದ್ದ ಮಣ್ಣು, ಅನಗತ್ಯ ಚೂರುಗಳನ್ನು ತೆರವುಗೊಳಿಸಿದಾಗ ನಕ್ಷತ್ರದ ರೀತಿ ಹೊಳೆಯುವ ಅಪರೂಪದ ನೀಲಮಣಿಯಾಗಿ ಗೋಚರಿಸಿದೆ. 510 ಕೇಜಿ ಭಾರದ ನೀಲಮಣಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನೂರು ಮಿಲಿಯನ್ ಡಾಲರ್ (ಬರೋಬ್ಬರಿ 744 ಕೋಟಿ ರೂಪಾಯಿ) ದರ ಇರಲಿದೆ ಎಂದು ಅಂದಾಜಿದೆ.
ಅತ್ಯಂತ ಅಪರೂಪದ ಮತ್ತು ಜಗತ್ತಿನಲ್ಲೇ ಅತಿ ದೊಡ್ಡದಾಗಿರುವ ಸ್ಫಟಿಕದ ಮಾದರಿಯ ನೀಲಮಣಿಯಿದು. ಇದನ್ನು ಜಗತ್ತಿನ ಮುಂಚೂಣಿ ಖಾಸಗಿ ಮ್ಯೂಸಿಯಂಗಳು ಗಮನಿಸಿದರೆ, ಖರೀದಿಸಬಹುದು ಎಂದು ಶ್ರೀಲಂಕಾದ ರಾಷ್ಟ್ರೀಯ ಹವಳ ಮತ್ತು ಜುವೆಲ್ಲರಿ ಅಥಾರಿಟಿಯ ಅಧಿಕಾರಿಯೊಬ್ಬರು ಅಭಿಪ್ರಾಯ ಪಟ್ಚಿದ್ದಾಗಿ ಬಿಬಿಸಿ ವರದಿ ಮಾಡಿದೆ.
A gem trader said the stone was found by workmen digging a well in his home in the gem-rich Ratnapura area. Experts say the stone, which is pale blue in colour, has an estimated value of up to $100 million in the international market. The cluster weighs around 510 kilograms or 2.5 million carats and has been named the "Serendipity Sapphire".
25-12-25 08:00 pm
Bangalore Correspondent
Chitradurga Seabird Bus accident: ಚಿತ್ರದುರ್ಗ...
25-12-25 06:26 pm
SeaBird Bus Fire Accident, Chitradurga: ಕಂಟೈನ...
25-12-25 12:12 pm
ತಡರಾತ್ರಿ ವರೆಗೂ ವಹಿವಾಟು ; ಹೊಟೇಲ್ ವ್ಯವಸ್ಥಾಪಕರಿಂ...
24-12-25 11:20 pm
ಶಿವಮೊಗ್ಗ ; ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ...
24-12-25 10:26 pm
24-12-25 11:13 pm
HK News Desk
ಅಯೋಧ್ಯೆ ಮಂದಿರಕ್ಕೆ ಚಿನ್ನ, ವಜ್ರ, ಪಚ್ಚೆ ಕಲ್ಲುಗಳಿ...
24-12-25 07:38 pm
ಹಿಂಸೆಗೆ ನಲುಗಿದ ಬಾಂಗ್ಲಾ ; ಹಿಂದುಗಳನ್ನು ಗುರಿಯಾಗಿ...
23-12-25 03:28 pm
ಭಾರತ ಹಿಂದೂ ರಾಷ್ಟ್ರ ಎನ್ನಲು ಸಾಂವಿಧಾನಿಕ ಅನುಮೋದನೆ...
22-12-25 06:32 pm
ಶಬರಿಮಲೆ ಚಿನ್ನ ಕಳವು ; ಬೆಂಗಳೂರಿನ ಜುವೆಲ್ಲರಿ ಮಾಲೀ...
20-12-25 01:51 pm
24-12-25 10:30 pm
Mangalore Correspondent
ಬಜಪೆಯಲ್ಲಿ ಕಾಂಗ್ರೆಸ್ ಓಟಕ್ಕೆ ಎಸ್ಡಿಪಿಐ ಅಡ್ಡಗಾಲು...
24-12-25 06:07 pm
ವಿದ್ಯಾರ್ಥಿಗಳ ಕುಸಿತ, ಅಸ್ತಿತ್ವ ಕಳಕೊಂಡ ಸಣ್ಣ ಕಾಲೇ...
24-12-25 12:23 pm
ಬಜಪೆ ಪಟ್ಟಣ ಪಂಚಾಯತ್ ಚುನಾವಣೆ ; ಬಿಜೆಪಿಗೆ ಸ್ಪಷ್ಟ...
24-12-25 12:02 pm
MLA Vedavyas Kamath: ಮಹಾನಗರ ಪಾಲಿಕೆ ಕಾಂಗ್ರೆಸ್...
23-12-25 10:51 pm
23-12-25 01:41 pm
Mangalore Correspondent
ನೀವು 24 ಸಾವಿರ ಕಟ್ಟಿದರೆ ತಿಂಗಳಿಗೆ 20 ಲಕ್ಷ, ಕೇಂದ...
22-12-25 04:00 pm
ಹುಬ್ಬಳ್ಳಿಯಲ್ಲಿ ಮರ್ಯಾದಾ ಹತ್ಯೆ ; 19 ವರ್ಷದ ಗರ್ಭಿ...
22-12-25 02:18 pm
Udupi Arrest, Pakistan: ಕೊಚ್ಚಿನ್ ಶಿಪ್ ಯಾರ್ಡ್...
22-12-25 01:06 pm
ಟ್ರಾಫಿಕ್ ದಂಡದ ಹೆಸರಲ್ಲಿ ಎಪಿಕೆ ಫೈಲ್ ಲಿಂಕ್ ; ಮೋಸ...
21-12-25 09:36 pm