ಬ್ರೇಕಿಂಗ್ ನ್ಯೂಸ್
02-08-21 05:59 pm Headline Karnataka News Network ದೇಶ - ವಿದೇಶ
ವಿಜಯವಾಡ, ಆಗಸ್ಟ್ 2: ಸಕಲೇಶಪುರದಲ್ಲಿ ಮಂಗಗಳನ್ನು ವಿಷವುಣಿಸಿ ಕೊಂದ ಪ್ರಕರಣ ಮಾಸುವ ಮುನ್ನವೇ 300ಕ್ಕೂ ಹೆಚ್ಟು ಬೀದಿ ನಾಯಿಗಳನ್ನು ವಿಷ ಕೊಟ್ಟು ಕೊಂದು ಹಾಕಿರುವ ಘಟನೆ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದ್ದು ಸ್ಥಳೀಯ ಪಂಚಾಯತ್ ಆಡಳಿತದ ಅಣತಿ ಮೇರೆಗೆ ಈ ರೀತಿ ನಡೆಸಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಪ್ರಾಣಿಗಳ ಹಕ್ಕು ರಕ್ಷಣಾ ಸಂಘಟನೆಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಿಂಗಪಾಲಂ ಎನ್ನುವ ಗ್ರಾಮದಲ್ಲಿ ಕಳೆದ ಹಲವು ದಿನಗಳಿಂದ ಈ ರೀತಿ ನಾಯಿಗಳನ್ನು ಅಮಾನುಷವಾಗಿ ಕೊಲ್ಲಲಾಗುತ್ತಿದೆ. ಈ ಬಗ್ಗೆ ಚಲ್ಲಪಲ್ಲಿ ಚಾರಿಟೇಬಲ್ ಟ್ರಸ್ಟಿನ ವತಿಯಿಂದ ಧರ್ಮಜಿಗುಂಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಟ್ರಸ್ಟ್ ಕೋಶಾಧಿಕಾರಿಯಾಗಿರುವ ಲತಾ ಚಲ್ಲಪಲ್ಲಿ ದೂರು ನೀಡಿದ್ದು, ವಿಲೇಜ್ ಗ್ರಾಮ ಪಂಚಾಯತಿಯವರು ಸ್ಥಳೀಯ ಡೆಕ್ಕಲ ಸಮುದಾಯದವರಿಗೆ ನಾಯಿಗಳನ್ನು ಕೊಲ್ಲಲು ಟಾಸ್ಕ್ ನೀಡಿದ್ದಾರೆ. ಜುಲೈ 24ರಿಂದ 300ಕ್ಕೂ ಹೆಚ್ಚು ನಾಯಿಗಳನ್ನು ವಿಷದ ಇಂಜೆಕ್ಷನ್ ಕೊಟ್ಟು ಕೊಲ್ಲಲಾಗಿದೆ. ಆಬಳಿಕ ಗುಂಡಿ ತೆಗೆದು ಎಲ್ಲವನ್ನೂ ಒಂದೇ ಕಡೆ ಹೂಳಲಾಗುತ್ತದೆ. ಮೂಕ ಪ್ರಾಣಿಗಳ ಮೇಲೆ ಈ ರೀತಿಯ ದೌರ್ಜನ್ಯ ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಸರಕಾರದ ಮಾರ್ಗದರ್ಶಿ ಪ್ರಕಾರ, ಬೀದಿ ನಾಯಿಗಳನ್ನು ಕೊಲ್ಲಬಾರದು. ಬದಲಿಗೆ ಸಂತಾನ ಹರಣ ಇಂಜೆಕ್ಷನ್ ಕೊಟ್ಟು ಅವುಗಳನ್ನು ಬಿಡಬೇಕು. ಆದರೆ, ಇಲ್ಲಿ ಗ್ರಾಪಂ ಅಧಿಕಾರಿಗಳೇ ಸ್ಥಳೀಯ ಕೆಲಸಗಾರರಿಗೆ ನಾಯಿಗಳನ್ನು ಕೊಲ್ಲಲು ಟಾಸ್ಕ್ ಕೊಟ್ಟಿದ್ದಾರೆ ಎಂದು ಲತಾ ಚಲ್ಲಪಳ್ಳಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದೂರು ಆಧರಿಸಿ, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಸಕಲೇಶಪುರದಲ್ಲಿ ಮಂಗಗಳಿಗೆ ವಿಷ ಕೊಟ್ಟು ಕೊಂದಿದ್ದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಕರ್ನಾಟಕ ಹೈಕೋರ್ಟ್ ಈ ಬಗ್ಗೆ ಸುಮೋಟೋ ಪ್ರಕರಣ ದಾಖಲಿಸಲು ಸೂಚನೆ ನೀಡಿತ್ತು.
More than 300 stray dogs were poisoned to death and their carcasses buried in a pit at a village in the West Godavari district of Andhra Pradesh, an animal rights activist has alleged. Fight for Animals activist Lalitha told India Today that the panchayat of Lingapalem in West Godavari district had resolved to get rid of stray dogs in and around the village. But instead of sterilizing them, the gram panchayat engaged dog killers, who poisoned the dogs, she alleged.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm