ಅತಿ ಶ್ರೀಮಂತ, ಮಹಾದಾನಿ ಬಿಲ್ ಗೇಟ್ಸ್ ದಾಂಪತ್ಯದಲ್ಲಿ ಬಿರುಕು ; 27 ವರ್ಷದ ದಾಂಪತ್ಯ ಅಂತ್ಯ !

03-08-21 01:20 pm       Headline Karnataka News Network   ದೇಶ - ವಿದೇಶ

27 ವರ್ಷಗಳ ದಾಂಪತ್ಯ ಜೀವನವನ್ನು ಅಂತ್ಯಗೊಳಿಸುತ್ತಿರುವುದಾಗಿ ಪ್ರಕಟಿಸಿದ ಮೂರು ತಿಂಗಳ ಬಳಿಕ, ಬಿಲ್ ಗೇಟ್ಸ್ ಮತ್ತು ಮೆಲಿಂಡಾ ಫ್ರೆಂಚ್ ಗೇಟ್ಸ್ ಅಧಿಕೃತವಾಗಿ ಬೇರ್ಪಟ್ಟಿದ್ದಾರೆ.

ವಾಷಿಂಗ್ಟನ್, ಆಗಸ್ಟ್‌ 03: 27 ವರ್ಷಗಳ ದಾಂಪತ್ಯ ಜೀವನವನ್ನು ಅಂತ್ಯಗೊಳಿಸುತ್ತಿರುವುದಾಗಿ ಪ್ರಕಟಿಸಿದ ಮೂರು ತಿಂಗಳ ಬಳಿಕ, ಬಿಲ್ ಗೇಟ್ಸ್ ಮತ್ತು ಮೆಲಿಂಡಾ ಫ್ರೆಂಚ್ ಗೇಟ್ಸ್ ಅಧಿಕೃತವಾಗಿ ಬೇರ್ಪಟ್ಟಿದ್ದಾರೆ.

ಅವರ ವಿಚ್ಛೇದನವನ್ನು ವಾಷಿಂಗ್ಟನ್‌ನ ಕಿಂಗ್ ಕೌಂಟಿಯ ನ್ಯಾಯಾಧೀಶರೊಬ್ಬರು ಸೋಮವಾರ ಅಂತಿಮಗೊಳಿಸಿದರು. ಕೋರ್ಟ್ ದಾಖಲೆಗಳ ಪ್ರಕಾರ ಇಬ್ಬರೂ ತಮ್ಮ ಹಿಂದಿನ ದಾಂಪತ್ಯಕ್ಕೆ ಅನುಗುಣವಾದ ಆರ್ಥಿಕ ನೆರವು ಪಡೆಯುವುದಿಲ್ಲ ಹಾಗೂ ತಮ್ಮ ಹೆಸರುಗಳನ್ನು ಕೂಡ ಬದಲಿಸಿಕೊಳ್ಳುವುದಿಲ್ಲ ಎಂದು ತಿಳಿದುಬಂದಿದೆ.

ವಿಚ್ಛೇದನ ಒಪ್ಪಂದದನಿಯಮಗಳಿಗೆ ತಕ್ಕಂತೆ, ಇಬ್ಬರೂ ತಮ್ಮ ಆಸ್ತಿಗಳನ್ನು ವಿಭಜಿಸಿಕೊಳ್ಳುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ. ಆದರೆ ವಿಚ್ಛೇದನದ ನಿಯಮಗಳಿಗೆ ಅನುಗುಣವಾಗಿ ಇದನ್ನು ಗೌಪ್ಯವಾಗಿ ಇರಿಸಲಾಗುತ್ತದೆ.

ವಿಚ್ಛೇದನ ದಾಖಲಿಸಿ ಅಂತಿಮಗೊಳಿಸಿದ ಬಳಿಕ 90 ದಿನಗಳ ಕಾಯುವಿಕೆ ಅವಧಿಯನ್ನು ನೀಡುವಂತೆ ವಾಷಿಂಗ್ಟನ್ ಕಾನೂನು ಹೇಳುತ್ತದೆ. ಮೇ ತಿಂಗಳಲ್ಲಿ ವಿಚ್ಚೇದನವನ್ನು ಬಹಿರಂಗಪಡಿಸಿದ ಬಳಿಕ, ಬಿಲ್ ಗೇಟ್ಸ್ ಅವರ ಕಾಸ್ಕೇಡ್ ಇನ್ವೆಸ್ಟ್‌ಮೆಂಟ್‌ನಿಂದ 3 ಬಿಲಿಯನ್ ಡಾಲರ್‌ಗೂ ಅಧಿಕ ಮೌಲ್ಯದ ಷೇರುಗಳನ್ನುಮೆಲಿಂಡಾ ಗೇಟ್ಸ್ ಅವರ ಹೆಸರಿಗೆ ವರ್ಗಾಯಿಸಲಾಗಿದೆ.

ಇಬ್ಬರ ಭೇಟಿ  ಹೇಗೆ?

ಮಿಲಿಂದಾ ಗೇಟ್ಸ್​ 1987ರಲ್ಲಿ ಪ್ರಾಡಕ್ಟ್​ ಮ್ಯಾನೇಜರ್​ ಆಗಿ Microsoft ಸಂಸ್ಥೆಯನ್ನು ಸೇರಿದ್ದರು. ಅದೇ ವೇಳೆ ಕಂಙನಿಯ ಪರವಾಗಿ ಅನೇಕ ಉದ್ಯಮ ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಆ ವೇಳೆ ಇಬ್ಬರ ಮಧ್ಯೆ ಪ್ರೇಮ ಮೊಳಕೆಯೊಡೆದು ಹೆಮ್ಮರವಾಗತೊಡಗಿತ್ತು. 1994ರಲ್ಲಿ ಇಬ್ಬರೂ ವಿವಾಹವಾಗಿದ್ದರು.

The divorce between Bill Gates and Melinda French Gates is now final. A judge for the King County Superior Court in Washington state signed the dissolution decree Monday, ending the 27-year marriage between the co-founders of the influential Bill and Melinda Gates Foundation while leaving the details of how the couple divided one of the largest fortunes in history shrouded in mystery.