ತಾಲಿಬಾನ್ ಅಟ್ಟಹಾಸಕ್ಕೆ ಬೆದರಿದ ಜನ ; ಬಸ್ ಹತ್ತಿದಂತೆ ವಿಮಾನಕ್ಕೆ ಮುಗಿಬಿದ್ದು ಕೆಳಕ್ಕೆ ಬಿದ್ದರು ! 

16-08-21 09:29 pm       Headline Karnataka News Network   ದೇಶ - ವಿದೇಶ

ತಾಲಿಬಾನ್​ ಪಡೆಗಳಿಗೆ ಹೆದರಿ ಜನರು ಊರುಗಳನ್ನು ತೊರೆಯುತ್ತಿದ್ದು ಬಸ್​ಗಳನ್ನು ಏರಿದಂತೆ, ವಿಮಾನಗಳನ್ನು ಏರುತ್ತಿದ್ದಾರೆ. ಕಾಬೂಲ್​ನಿಂದ ಅಮೆರಿಕಕ್ಕೆ ತೆರಳುತ್ತಿದ್ದ ಸೇನಾ ವಿಮಾನ ಹಾರುವಾಗಲೇ ಅದರ ರೆಕ್ಕೆಯಲ್ಲಿ ಕುಳಿತು ಪ್ರಯಾಣಿಸಿ ಕೆಳಗೆ ಬೀಳುತ್ತಿರುವ ವಿಡಿಯೋ ವೈರಲ್ ಆಗಿದೆ.‌

ಕಾಬೂಲ್, ಆಗಸ್ಟ್ 16: ಅಘ್ಘಾನಿಸ್ತಾನದಲ್ಲಿ ತಾಲಿಬಾನ್​ಗಳ ಅಟ್ಟಹಾಸಕ್ಕೆ ಕಾಬೂಲ್​ ಅಕ್ಷರಶಃ ನರಕವಾಗಿದೆ.  ತಾಲಿಬಾನ್​ ಪಡೆಗಳಿಗೆ ಹೆದರಿ ಜನರು ಊರುಗಳನ್ನು ತೊರೆಯುತ್ತಿದ್ದು ಬಸ್​ಗಳನ್ನು ಏರಿದಂತೆ, ವಿಮಾನಗಳನ್ನು ಏರುತ್ತಿದ್ದಾರೆ. ಕಾಬೂಲ್​ನಿಂದ ಅಮೆರಿಕಕ್ಕೆ ತೆರಳುತ್ತಿದ್ದ ಸೇನಾ ವಿಮಾನ ಹಾರುವಾಗಲೇ ಅದರ ರೆಕ್ಕೆಯಲ್ಲಿ ಕುಳಿತು ಪ್ರಯಾಣಿಸಿ ಕೆಳಗೆ ಬೀಳುತ್ತಿರುವ ವಿಡಿಯೋ ವೈರಲ್ ಆಗಿದೆ.‌

ಇತ್ತ ಅಫ್ಘಾನ್​ನ ಸಂಸತ್​ನ ಮೇಲೂ ದಾಳಿ ನಡೆಸಿರುವ ತಾಲಿಬಾನ್ ಉಗ್ರರು, ಸರ್ಕಾರಿ ಕಚೇರಿಗಳನ್ನು ಒಂದೊಂದಾಗಿ ತಮ್ಮ ವಶಕ್ಕೆ ಪಡೆದುಕೊಂಡು ಅವುಗಳ ಮೇಲೆ ತಮ್ಮ ಬಾವುಟ ನೆಡುತ್ತಿದ್ದಾರೆ. ಈ ರೀತಿಯ ನಡೆಯನ್ನು ನೋಡಿ ಬೆದರಿದ ಜನರು ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದು, ಸಿಕ್ಕ ಸಿಕ್ಕ ವಿಮಾನಗಳಲ್ಲಿ ಏರಿ ಹೋಗಲು ಯತ್ನಿಸುತ್ತಿದ್ದಾರೆ.  

ಅಫ್ಘಾನಿಸ್ತಾನದ ಕಾಬೂಲ್‌ ಏರ್​ಪೋರ್ಟ್​ನಲ್ಲಿ ಜಮಾವಣೆಗೊಂಡಿರುವ ಸಾವಿರಾರು ಜನರು ವಿವಿಧ ದೇಶಗಳಿಗೆ ತೆರಳಲು ನಾ ಮುಂದು, ತಾ ಮುಂದು ಎನ್ನುತ್ತಾ ಪೈಪೋಟಿಗಿಳಿದಿದ್ದಾರೆ. ವಿಮಾನ ಹತ್ತಲು ಹರಸಾಹಸ ಮಾಡುತ್ತಿದ್ದಾರೆ. ಆದರೆ, ಈಗಾಗಲೇ ಅಫ್ಘಾನ್​​ನಿಂದ ವಿವಿಧ ದೇಶಗಳಿಗೆ ತೆರಳುವ ವಿಮಾನಗಳನ್ನು ಹಾರಾಟ ರದ್ದುಗೊಳಿಸಲಾಗಿದೆ. 

ಅಮೆರಿಕದ ಪಡೆ ಕಾಲ್ಕೀಳುವ ಸೂಚನೆ ಸಿಗುತ್ತಲೇ ತಮ್ಮ ಅಟ್ಟಹಾಸ ತೋರಿದ ತಾಲಿಬಾನ್ ಉಗ್ರರು ಕೇವಲ ಎರಡೇ ತಿಂಗಳಲ್ಲಿ ಪೂರ್ತಿ  ಅಫ್ಘಾನಿಸ್ತಾನವನ್ನು ಆಕ್ರಮಿಸಿದ್ದಾರೆ. ಭಾನುವಾರ ರಾಜಧಾನಿ ಕಾಬೂಲನ್ನು ಆಕ್ರಮಿಸಿದ್ದರು.‌ ಇದಾಗುತ್ತಿದ್ದಂತೆ ಅಧ್ಯಕ್ಷ ಅಶ್ರಫ್ ಘನಿ ಅರಿಕಾರ ತ್ಯಜಿಸಿ ನಾಪತ್ತೆಯಾಗಿದ್ದರು. ಮೊದಲಿಗೆ, ತಜಕಿಸ್ತಾನಕ್ಕೆ ತೆರಳಿದ್ದರು ಎನ್ನಲಾಗಿತ್ತು. ಆದರೆ, ತಜಕಿಸ್ತಾನ ಅಫ್ಘಾನಿಸ್ತಾನದ ಅಧ್ಯಕ್ಷರನ್ನು ಬರಮಾಡಿಕೊಳ್ಳಲು ನಿರಾಕರಿಸಿದೆ. ಆನಂತರ ಅಶ್ರಫ್ ಘನಿ ನೆರೆ ರಾಷ್ಟ್ರ ಒಮಾನ್ ದೇಶಕ್ಕೆ ತೆರಳಿದ್ದಾರೆ. ಸದ್ಯಕ್ಕೆ ಅಲ್ಲಿ ಉಳಿದುಕೊಂಡಿದ್ದಾರೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

A video of hundreds of Afghans jostling to climb into an aeroplane to fly out of the country amid the Taliban's return may become the latest defining image of desperation in the war-torn country. The Afghan airspace has been closed now. A parked aircraft at Kabul airport is surrounded by a sea of people who are pushing and fighting to get inside the cabin from the only ladder connected to the front door. Many are also seen walking around the tarmac and making no effort to find a plane to climb in, a sign they may have given up any hope of leaving.