ಮಹಿಳೆ ಕೇವಲ ಮಾಂಸದ ಮುದ್ದೆಯಷ್ಟೇ.. ಬಳಸಿ, ನಾಯಿಗಳಿಗೆ ಎಸೆಯುತ್ತಾರೆ ! ತಾಲಿಬಾನ್ ಕ್ರೌರ್ಯ ತೆರೆದಿಟ್ಟ ಅಫ್ಘನ್ ಮಹಿಳೆ

19-08-21 05:09 pm       Headline Karnataka News Network   ದೇಶ - ವಿದೇಶ

ಅವರ ದೃಷ್ಟಿಯಲ್ಲಿ ಮಹಿಳೆಯರೆಂದರೆ ಇತರ ಜೀವಿಗಳ ರೀತಿ ಉಸಿರಾಡುವಂತಿಲ್ಲ. ಕೇವಲ ಮಾಂಸ ತುಂಬಿದ ದೇಹವಷ್ಟೇ. ಮಹಿಳೆಯರನ್ನು ಮನಬಂದಂತೆ ಹಿಂಸಿಸಿ, ತೀಟೆ ತೀರಿಸಿಕೊಂಡು ಕೊಂದು ಬಿಡುತ್ತಾರೆ. ಕೊನೆಗೆ ದೇಹವನ್ನ ನಾಯಿಗಳಿಗೆ ಎಸೆದುಬಿಡುತ್ತಾರೆ..

ನವದೆಹಲಿ, ಆಗಸ್ಟ್ 19: ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ಪ್ರಾಬಲ್ಯ ಸಾಧಿಸಿದ್ದು ಮನದಟ್ಟಾಗುತ್ತಲೇ ಅಲ್ಲಿನ ಉಗ್ರರು ಮಹಿಳೆಯರ ಬಗ್ಗೆ ತೋರಿದ್ದ ಕ್ರೌರ್ಯವೂ ಹೊರಬೀಳುತ್ತಿದೆ. ಅಲ್ಲಿನ ಮಹಿಳೆಯರಿಗೆ ತಾಲಿಬಾನ್ ಪಡೆಗಳು ಯಾವ ರೀತಿ ಹಿಂಸಿಸುತ್ತಿದ್ದರು ಎನ್ನುವ ಬಗ್ಗೆ ಹೊರ ಜಗತ್ತಿಗೆ ಹೇಳತೊಡಗಿದ್ದಾರೆ. 

ತಾಲಿಬಾನ್ ಕೈಯಿಂದ ಪಾರಾಗಿ ದೆಹಲಿಗೆ ಬಂದಿರುವ ಮಹಿಳೆಯೊಬ್ಬರು ಹೀಗೆ ಹೇಳುತ್ತಾರೆ. ‌ಅವರ ದೃಷ್ಟಿಯಲ್ಲಿ ಮಹಿಳೆಯರೆಂದರೆ ಇತರ ಜೀವಿಗಳ ರೀತಿ ಉಸಿರಾಡುವಂತಿಲ್ಲ. ಕೇವಲ ಮಾಂಸ ತುಂಬಿದ ದೇಹವಷ್ಟೇ. ಮಹಿಳೆಯರನ್ನು ಮನಬಂದಂತೆ ಹಿಂಸಿಸಿ, ತೀಟೆ ತೀರಿಸಿಕೊಂಡು ಕೊಂದು ಬಿಡುತ್ತಾರೆ. ಕೊನೆಗೆ ದೇಹವನ್ನ ನಾಯಿಗಳಿಗೆ ಎಸೆದುಬಿಡುತ್ತಾರೆ..

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಫ್ಘಾನಿಸ್ತಾನದ ಖತೇರಾ ಎಂಬ ಮಹಿಳೆ ತಮ್ಮದೇ ಕಹಿ ನೆನಪುಗಳನ್ನು ಹೇಳುತ್ತಾ ಹೋದರು. "ಘಜ್ನಿಯಲ್ಲಿ ನಾನು ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ತಾಲಿಬಾನ್​ ಉಗ್ರರು ನನ್ನನ್ನು ಸುತ್ತುವರೆದರು. ನನ್ನ ಐಡಿ ಕಾರ್ಡ್​ ನೋಡಿದ ಮೇಲೆ ಗುಂಡಿನ ದಾಳಿ ನಡೆಸಲು ಆರಂಭಿಸಿದರು. ಅಷ್ಟೇ ಅಲ್ಲ, ನನ್ನ ಕಣ್ಣಿಗೆ ಗುರಿ ಇಟ್ಟು ಮಾರಕಾಸ್ತ್ರದಿಂದ ಇರಿದು ಒಂದು ಕಣ್ಣನ್ನೇ ಕಿತ್ತುಬಿಟ್ಟರು ಎಂದು ಹೇಳಿದರು. 

ಈ ಸಂದರ್ಭದಲ್ಲಿ ಖತೇರಾ ಎರಡು ತಿಂಗಳ ಗರ್ಭಿಣಿಯಾಗಿದ್ದರು. ಆಕೆಯ ತಂದೆ ತಾಲಿಬಾನ್​ ಸಂಘಟನೆಯ ಮಾಜಿ ಸದಸ್ಯನಾಗಿದ್ದು, ಆಕೆಯ ಮೇಲೆ ದಾಳಿ ನಡೆಸಲು ತಂದೆಯೇ ಪಿತೂರಿ ನಡೆಸಿದ್ದರಂತೆ.

ಮಹಿಳೆಯರು, ಮಕ್ಕಳು ಮತ್ತು ಅಲ್ಲಿನ ಅಲ್ಪಸಂಖ್ಯಾತರು ಯಾವ ರೀತಿಯ ಕೆಟ್ಟ ನರಕವನ್ನು ಅನುಭವಿಸಿದ್ದಾರೆ ಎಂಬುದನ್ನು ಊಹಿಸಿಕೊಳ್ಳಲು ನೀವು ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಕಾಲಿನ ಕೆಳಗೆ ಜೀವಿಸಿಯೇ ತಿಳಿದುಕೊಳ್ಳಬೇಕು. ತಾಲಿಬಾನಿಗಳು ಮೊದಲು ನಮ್ಮನ್ನು (ಮಹಿಳೆಯರನ್ನು) ಹಿಂಸಿಸುತ್ತಾರೆ. ಬಳಿಕ ನಮ್ಮ ದೇಹವನ್ನು ನಾಯಿಗಳಿಗೆ ಆಹಾರವಾಗಿ ಎಸೆಯುತ್ತಾರೆ. ಅವರ ಮಧ್ಯದಲ್ಲಿ ನಾನು ಬದುಕಿರುವುದೇ ನನ್ನ ಅದೃಷ್ಟ ಎಂದು ಹೇಳುತ್ತಾರೆ ಖತೇರಾ.

ಕಳೆದ 20 ವರ್ಷಗಳಲ್ಲಿ ಸ್ಥಿತಿ ಬದಲಾಗಿತ್ತು. ಯುವಕ- ಯುವತಿಯರು ಶಿಕ್ಷಣ ಪಡೆಯುತ್ತಿದ್ದರು. ವಿಶ್ವವಿದ್ಯಾಲಯಗಳಲ್ಲಿ ಮಹಿಳೆಯರೇ ತುಂಬಿರುತ್ತಿದ್ದರು. ಆದರೆ ಈಗ ಪರಿಸ್ಥಿತಿ ಎಲ್ಲಿ ಮುಟ್ಟಿದೆ ಅಂದ್ರೆ ತಾಲಿಬಾನಿಗಳಿಂದ ರಕ್ಷಿಸಿಕೊಳ್ಳಲು ಮಹಿಳೆಯರ ಶೈಕ್ಷಣಿಕ ಪ್ರಮಾಣಪತ್ರಗಳನ್ನೇ ಕುಟುಂಬಸ್ಥರು ಸುಡುತ್ತಿದ್ದಾರೆ. ತಾಲಿಬಾನ್ ಉಗ್ರರು ಮಹಿಳೆಯರು, ಪುರುಷ ವೈದ್ಯರನ್ನು ಭೇಟಿ ಮಾಡುವುದಕ್ಕೂ ಅವಕಾಶ ನೀಡುವುದಿಲ್ಲ. ವಿದ್ಯಾಭ್ಯಾಸ, ಉದ್ಯೋಗಕ್ಕೂ ಬಿಡುವುದಿಲ್ಲ. ಹೀಗಿದ್ದ ಮೇಲೆ ಅಲ್ಲಿ ಮಹಿಳೆಯರಿಗೆ ಬದುಕಲು ಸಾಧ್ಯವೇ ಎಂದು ಖತೇರಾ ನೋವು ತೋಡಿಕೊಂಡಿದ್ದಾರೆ.

ಕಾಬೂಲ್​ನಿಂದ ತಪ್ಪಿಸಿಕೊಂಡು ದೆಹಲಿಗೆ ಬಂದಿರುವ ಖತೇರಾ ಇದೀಗ ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆಕೆಯ ಪತಿ ಹಾಗೂ ಮಗು ಕೂಡ ದೆಹಲಿಯಲ್ಲಿದ್ದಾರೆ.

A new video has surfaced from Afghanistan showing a woman screaming for help as she wants to escape the Taliban. In the video, a young woman is seen weeping and screaming from behind the barbed wires, pleading the US troops to let them in: "Help us, Taliban are coming for us."