ಬ್ರೇಕಿಂಗ್ ನ್ಯೂಸ್
20-08-21 01:06 pm Headline Karnataka News Network ದೇಶ - ವಿದೇಶ
ಕಾಬೂಲ್, ಆಗಸ್ಟ್ 20: ಅಮೆರಿಕದ ವಿಮಾನದ ಟೈರ್ ಹತ್ತಿ ಕುಳಿತು ವಿದೇಶಕ್ಕೆ ಪಾರಾಗಲು ಯತ್ನಿಸಿ, ಕೆಳಕ್ಕೆ ಬಿದ್ದು ದುರಂತ ಸಾವು ಕಂಡಿದ್ದ ಯುವಕ ಅಫ್ಘಾನಿಸ್ತಾನ ಯುವ ಫುಟ್ಬಾಲ್ ತಂಡದ ಉದಯೋನ್ಮುಖ ಆಟಗಾರ ಎನ್ನುವ ಅಚ್ಚರಿಯನ್ನು ಮಾಹಿತಿ ಹೊರಬಿದ್ದಿದೆ.
ಕಾಬೂಲನ್ನು ತಾಲಿಬಾನ್ ವಶಕ್ಕೆ ಪಡೆಯುತ್ತಿದ್ದಂತೆ ಅಲ್ಲಿನ ಜನರು ದಿಕ್ಕೆಟ್ಟಿದ್ದಾರೆ. ಸಿಕ್ಕ ಸಿಕ್ಕ ವಿಮಾನಗಳಲ್ಲಿ ಹತ್ತಲು ಪ್ರಯತ್ನಿಸುತ್ತಿದ್ದಾರೆ. ಮೊನ್ನೆ ಅಮೆರಿಕದ ವಾಯುಪಡೆಯ ವಿಮಾನದ ರೆಕ್ಕೆ, ಟೈರ್ ಗಳಲ್ಲಿ ಹತ್ತಿ ಕುಳಿತಿದ್ದವರ ವಿಡಿಯೋ ವೈರಲ್ ಆಗಿತ್ತು. ಆನಂತರ ವಿಮಾನ ತುಸು ದೂರ ತೆರಳುವಷ್ಟರಲ್ಲಿ ಅದರಲ್ಲಿದ್ದ ಇಬ್ಬರು ಮೇಲಿನಿಂದ ಕೆಳಕ್ಕೆ ಬಿದ್ದಿರುವ ದೃಶ್ಯಗಳ ಫೋಟೋಗಳೂ ಕಂಡುಬಂದಿದ್ದವು.
ಇದೀಗ ಅಫ್ಘಾನಿಸ್ತಾನ ಸರಕಾರದ ಅಧಿಕೃತ ಸಂಸ್ಥೆ ಡೈರಕ್ಟರೇಟ್ ಆಫ್ ಫಿಸಿಕಲ್ ಎಜುಕೇಶನ್ ಅಂಡ್ ಸ್ಪೋರ್ಟ್ಸ್ ಕಮಿಟಿ, ಹೀಗೆ ಕೆಳಕ್ಕೆ ಬಿದ್ದು ಮೃತಪಟ್ಟಿರುವ ಯುವಕ ಯುವ ಫುಟ್ಬಾಲ್ ಆಟಗಾರ ಝಾಕಿ ಅನ್ವಾರಿ ಎಂದು ದೃಢಪಡಿಸಿದೆ. ಝಾಕಿ ಸೇರಿದಂತೆ ಅಫ್ಘಾನಿಸ್ತಾನದ ಸಾವಿರಾರು ಯುವಕರು ಬೇರೆ ದೇಶಕ್ಕೆ ತೆರಳಲು ಪ್ರಯತ್ನಿಸುತ್ತಿದ್ದಾರೆ ಎಂದು ಸ್ಪೋರ್ಟ್ಸ್ ಗ್ರೂಪ್ ತನ್ನ ಫೇಸ್ಬುಕ್ ಹೇಳಿಕೆಯಲ್ಲಿ ತಿಳಿಸಿದೆ.


ಆಗಸ್ಟ್ 16ರಂದು ಅಮೆರಿಕದ ವಾಯುಪಡೆಯ ಸಿ 17 ಸೇನಾ ವಿಮಾನ ಕಾಬೂಲ್ ಏರ್ಪೋರ್ಟ್ ನಿಂದ ತೆರಳುತ್ತಿದ್ದಾಗ ಸಾವಿರಾರು ಟರ್ಮಿನಲ್ ನಲ್ಲಿ ಓಡಿ ಬರುವುದು, ವಿಮಾನವನ್ನು ಮುತ್ತಿಕೊಳ್ಳುವುದು, ರೆಕ್ಕೆಗಳ ವಿಮಾನ ಹತ್ತಿ ಕುಳಿತಿದ್ದ ಫೋಟೋ, ವಿಡಿಯೋಗಳು ವೈರಲ್ ಆಗಿದ್ದವು. ಅದೇ ವಿಮಾನ ಬಳಿಕ ಮೇಲಕ್ಕೇರುತ್ತಿದ್ದಂತೆ, ಅದರಿಂದ ಇಬ್ಬರು ತರಗೆಲೆಗಳ ರೀತಿ ಕೆಳಕ್ಕೆ ಬಿದ್ದಿದ್ದರು.
19 ವರ್ಷದ ಝಾಕಿ ಅನ್ವಾರಿ, ಅಫ್ಘಾನಿಸ್ತಾನದ ಪ್ರತಿಷ್ಠಿತ ಇಸ್ತೆಕ್ ಲಾಲ್ ಹೈಸ್ಕೂಲಿನಲ್ಲಿ ವಿದ್ಯಾರ್ಥಿಯಾಗಿದ್ದ. ಇದರ ಜೊತೆಗೇ ರಾಷ್ಟ್ರೀಯ ಯುವ ಫುಟ್ಬಾಲ್ ತಂಡದಲ್ಲಿ ಗುರುತಿಸಿಕೊಂಡಿದ್ದ. ಹಮೀದ್ ಕರ್ಝಾಯಿ ಮತ್ತು ಅಶ್ರಫ್ ಘನಿ ನೇತೃತ್ವದಲ್ಲಿ ಕ್ರೀಡೆಗೆ ಹೆಚ್ಚು ಒತ್ತು ಕೊಟ್ಟಿದ್ದರಿಂದ ಹಲವಾರು ಕ್ರೀಡಾಪಟುಗಳು ಹೊರಹೊಮ್ಮಿದ್ದರು. ಯುವತಿಯರು ಕೂಡ ಕ್ರೀಡಾ ಚಟುವಟಿಕೆಯಲ್ಲಿ ಕಾಣಿಸಿಕೊಂಡಿದ್ದರು.
ಝಾಕಿ ಅನ್ವಾರಿ ರಾಷ್ಟ್ರೀಯ ಯುವ ಫುಟ್ಬಾಲ್ ತಂಡದಲ್ಲಿ ಭರವಸೆಯ ಆಟಗಾರನಾಗಿದ್ದ. ಆತನ ಆಪ್ತರು ಹೇಳುವ ಪ್ರಕಾರ, ಝಾಕಿ ಅಮೆರಿಕಕ್ಕೆ ತೆರಳಿ ಫುಟ್ಬಾಲ್ ಆಟಗಾರನಾಗುವ ಕನಸು ಕಂಡಿದ್ದ. ಆದರೆ ದುರದೃಷ್ಟ ಅಂದರೆ, ಕಾಬೂಲ್ ಏರ್ ಫೀಲ್ಡ್ ನಲ್ಲಿ ದುರಂತ ಸಾವು ಕಂಡಿದ್ದಾನೆ ಎಂದು ಅಫ್ಘಾನಿಸ್ತಾನದ ಕ್ರೀಡಾ ಪತ್ರಕರ್ತ ಎಲಿಯಾಸ್ ನಿಯಾಝಿ ಬರೆದುಕೊಂಡಿದ್ದಾರೆ.
Afghan national team football player Zaki Anwari fell to his death as he tried to escape Kabul by clinging onto a US plane leaving the capital city, according to the General Directorate of Physical Education and Sports of Afghanistan.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
13-09-26 10:11 pm
HK News
ಕುತ್ತಾರು ರಾಜರಾಜೇಶ್ವರಿ ಸಿದ್ಧಿವಿನಾಯಕ ಕ್ಷೇತ್ರದಲ್...
13-09-26 08:10 pm
AI Centre in Madiyala: ಮಡಿಯಾಲದಲ್ಲಿ ಎಐ ಉನ್ನತ ಶ...
13-09-26 07:53 pm
ಬೆಳ್ತಂಗಡಿ ; ಹೆಬ್ಬಾವನ್ನು ನುಂಗಿ ಮನೆಯ ತೋಟದಲ್ಲಿ ಅ...
12-09-26 03:09 pm
ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ; ಮೂಲಸೌಲಭ್ಯ, ಕೈಗಾ...
12-09-26 10:53 am
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm