ಕೇರಳದ ಮಾಪಿಳ್ಳ ದಂಗೆಯು ತಾಲಿಬಾನ್ ಮನಸ್ಥಿತಿಯ ಮೊದಲ ಅಭಿವ್ಯಕ್ತಿ ; ರಾಮಮಾಧವ್

20-08-21 05:46 pm       Headline Karnataka News Network   ದೇಶ - ವಿದೇಶ

ತಾಲಿಬಾನ್ ಅನ್ನುವುದು ಕೇವಲ ಭಯೋತ್ಪಾದಕ ಸಂಘಟನೆಯಲ್ಲ. ಅದು ಒಂದು ರೀತಿಯ ಮನಸ್ಥಿತಿ. ಕಳೆದ ಶತಮಾನದಲ್ಲಿ ಈ ರೀತಿಯ ಮನಸ್ಥಿತಿಗೆ ಒಳಗಾಗಿ ಪೀಡನೆಗೊಳಗಾದ ಘಟನೆ ಕೇರಳದಲ್ಲಿ ನಡೆದಿತ್ತು ಎಂದು ರಾಮಮಾಧವ್ ವಿಶ್ಲೇಷಿಸಿದ್ದಾರೆ.

ಕೋಯಿಕ್ಕೋಡ್, ಆಗಸ್ಟ್ 20: ತಾಲಿಬಾನ್ ಅನ್ನುವುದು ಕೇವಲ ಭಯೋತ್ಪಾದಕ ಸಂಘಟನೆಯಲ್ಲ. ಅದು ಒಂದು ರೀತಿಯ ಮನಸ್ಥಿತಿ. ಕಳೆದ ಶತಮಾನದಲ್ಲಿ ಈ ರೀತಿಯ ಮನಸ್ಥಿತಿಗೆ ಒಳಗಾಗಿ ಪೀಡನೆಗೊಳಗಾದ ಘಟನೆ ಕೇರಳದಲ್ಲಿ ನಡೆದಿತ್ತು. ಆ ರೀತಿಯ ಮನಸ್ಥಿತಿಗೆ ಒಳಗಾದ ಮೊದಲ ಸಮಾಜ ಕೇರಳ. ಅಲ್ಲಿನ ಮಾಪಿಳ್ಳ ದಂಗೆಯು ತಾಲಿಬಾನ್ ಮನಸ್ಥಿತಿಯ ಅಭಿವ್ಯಕ್ತಿಯಾಗಿತ್ತು ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಆರೆಸ್ಸೆಸ್ ನಾಯಕ ರಾಮ ಮಾಧವ್ ಹೇಳಿದ್ದಾರೆ.

ಕೇರಳದಲ್ಲಿ 1921ರಲ್ಲಿ ನಡೆದ ಮಾಪಿಳ್ಳ ದಂಗೆಯಲ್ಲಿ ಬಲಿಯಾದವರ ಸ್ಮರಣಾರ್ಥ ಕೋಯಿಕ್ಕೋಡ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಮಮಾಧವ್ ಮಾತನಾಡಿದರು.

ತಾಲಿಬಾನ್ ಮನಸ್ಥಿತಿಗೆ ಮತ್ತು ಅದರ ತೀವ್ರ ರೀತಿಯ ಪರಿಣಾಮಗಳನ್ನು ಎದುರಿಸಿದ್ದೇ ಕೇರಳ. ಮಾಪಿಳ್ಳ ದಂಗೆಯು ತಾಲಿಬಾನ್ ಮನಸ್ಥಿತಿಯ ಮೊದಲ ಅಭಿವ್ಯಕ್ತಿಯಾಗಿತ್ತು. ಒಂದು ವರ್ಷ ಕಾಲ ಸಾಮಾನ್ಯ ಜನರನ್ನು ಪೀಡಿಸಿದ ಈ ದುಷ್ಕೃತ್ಯವನ್ನು ಮರೆಮಾಚುವ ಸಲುವಾಗಿ, ಬ್ರಿಟಿಷರ ವಿರುದ್ಧ ಮತ್ತು ಜಮೀನ್ದಾರರ ವಿರುದ್ಧ ಕಮ್ಯುನಿಸ್ಟ್ ಕ್ರಾಂತಿಯೆಂದು ಬಿಂಬಿಸಲಾಗಿತ್ತು ಎಂದು ರಾಮಮಾಧವ್ ವಿಶ್ಲೇಷಿಸಿದ್ದಾರೆ.

ಮಾಪಿಳ್ಳ ದಂಗೆಯು ಕೇರಳದ ಮಲಬಾರ್ ಪ್ರಾಂತ್ಯದಲ್ಲಿ 1921ರ ಆಗಸ್ಟ್ 22ರಿಂದ ಒಂದು ವರ್ಷ ಕಾಲ ನಡೆದಿತ್ತು. ಕಮ್ಯುನಿಸ್ಟರ ದಬ್ಬಾಳಿಕೆಗೆ ತುತ್ತಾಗಿ ಸಾವಿರಾರು ಮಂದಿ ಬಲಿಯಾಗಿದ್ದರು. 

The Moplah rebellion, also known as the mappila riots, of 1921 was one of the first manifestations of the Taliban mindset in India and the Left government in Kerala was allegedly trying to whitewash it by celebrating it as a communist revolution, former National General Secretary of BJP Ram Madhav claimed on Thursday.