ಅಂತ್ಯಕ್ರಿಯೆಗೆ ಹೋಗಿ ಸಮಾಧಿ ಸೇರಿದ ನಾಲ್ವರು ಪೊಲೀಸ್ ಕಾನ್ಸ್​​ಟೇಬಲ್​​ಗಳು

24-08-21 12:53 pm       Headline Karnataka News Network   ದೇಶ - ವಿದೇಶ

ಪೊಲೀಸ್​ ಜೀಪ್​ಗೆ ಲಾರಿಯೊಂದು ಗುದ್ದಿದ ಪರಿಣಾಮ ನಾಲ್ವರು ಕಾನ್ಸ್​​ಟೇಬಲ್​​​ಗಳು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯಲ್ಲಿ ನಡೆದಿದೆ.

ಆಂಧ್ರಪ್ರದೇಶ, ಆಗಸ್ಟ್ 23: ಪೊಲೀಸ್​ ಜೀಪ್​ಗೆ ಲಾರಿಯೊಂದು ಗುದ್ದಿದ ಪರಿಣಾಮ ನಾಲ್ವರು ಕಾನ್ಸ್​​ಟೇಬಲ್​​​ಗಳು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯಲ್ಲಿ ನಡೆದಿದೆ.

ಇಚ್ಚಪುರಂ ಪಟ್ಟಣದಲ್ಲಿ ಯೋಧನೊಬ್ಬರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಶ್ರೀಕಾಕುಳಂನ ಜಿಲ್ಲಾ ಕೇಂದ್ರಕ್ಕೆ ಹಿಂತಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ರಸ್ತೆ ತಿರುವು ತೆಗೆದುಕೊಳ್ಳುವ ವೇಳೆ ವಿರುದ್ಧ ದಿಕ್ಕಿನಿಂದ ಬಂದ ಲಾರಿ ಪೊಲೀಸ್​ ಜೀಪ್​ಗೆ ಗುದ್ದಿದೆ. ಗುದ್ದಿದ ರಭಸಕ್ಕೆ ಪೊಲೀಸ್​ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ನಾಲ್ವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತ ಕಾನ್‌ಸ್ಟೇಬಲ್​ಗಳನ್ನು ಕೃಷ್ಣ, ಬಾಬುರಾವ್, ಆ್ಯಂಟನಿ, ಜನಾರ್ದನ ರಾವ್ ಎಂದು ಗುರುತಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷಗೆ ಅಸ್ಪತ್ರೆಗೆ ರವಾನಿಸಲಾಗಿದೆ. ಹಿರಿಯ ಪೊಲೀಸ್​ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆಂಧ್ರ ಸಿಎಂ ಜಗನ್ ಮೋಹನ್​ ರೆಡ್ಡಿ ಅವರು ಸಾವಿಗೆ ಸಂತಾಪ ಸೂಚಿಸಿದ್ದಾರೆ.

Four policemen died in a tragic road accident on the national highway at Sunnadevi in Palasa mandal on Monday. The deceased were identified as Armed Reserve Assistant Sub-Inspector of police K. Krishnudu, head constables Y. Baburao and P. Antony, and driver P. Janardhana Rao.