ಬ್ರೇಕಿಂಗ್ ನ್ಯೂಸ್
24-08-21 04:45 pm Headline Karnataka News Network ದೇಶ - ವಿದೇಶ
ಮುಂಬೈ, ಆಗಸ್ಟ್ 24: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ನಾರಾಯಣ ರಾಣೆ ಅವರನ್ನು ರತ್ನಗಿರಿ ಪೊಲೀಸರು ಬಂಧಿಸಿದ್ದಾರೆ.
ಇದಕ್ಕೂ ಮುನ್ನ ಸಚಿವ ನಾರಾಯಣ ರಾಣೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ರತ್ನಗಿರಿ ಜಿಲ್ಲಾ ಕೋರ್ಟ್ ವಜಾ ಮಾಡಿತ್ತು. ಅರ್ಜಿ ವಜಾಗೊಳಿಸುತ್ತಿದ್ದಂತೆ ರತ್ನಗಿರಿ ಪೊಲೀಸರು ನಾರಾಯಣ ರಾಣೆ ಅವರನ್ನು ವಶಕ್ಕೆ ಪಡೆದಿದ್ದಾರೆ.
ಮುಖ್ಯಮಂತ್ರಿಯವರಿಗೆ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ವರ್ಷ ತಿಳಿಯದಿರುವುದು ಅವಮಾನಕರ ವಿಷಯ. ನಾನು ಸ್ಥಳದಲ್ಲೇನಾದರೂ ಇರುತ್ತಿದ್ದರೆ ಕಪಾಳಕ್ಕೆ ಬಾರಿಸುತ್ತಿದ್ದೆ ಎಂದು ನಾರಾಯಣ ರಾಣೆ ಹೇಳಿದ್ದರು. ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಧ್ವಜಾರೋಹಣ ನಡೆಸಿದ ಬಳಿಕ ಭಾಷಣ ಮಾಡುತ್ತಿದ್ದಾಗ ಸ್ವಾತಂತ್ರ್ಯ ಲಭಿಸಿದ ವರ್ಷವನ್ನು ಪಕ್ಕದವರಿಂದ ಕೇಳಿ, ಹೇಳಿದ್ದರು.
ನಾರಾಯಣ ರಾಣೆ ಜನಾಶೀರ್ವಾದ ಯಾತ್ರೆಯ ಸಂದರ್ಭ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ನಾನೇ ಹೊಡೆಯುತ್ತೇನೆ ಎಂದು ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಶಿವಸೈನಿಕರು ಮುಂಬೈ ಸೇರಿದಂತೆ ಕೊಂಕಣ ಭಾಗದಲ್ಲಿ ಭಾರೀ ಪ್ರತಿಭಟನೆ ಆರಂಭಿಸಿದ್ದರು. ಅಲ್ಲದೆ, ಇದೇ ವಿಚಾರದಲ್ಲಿ ಹಲವೆಡೆ ಎಫ್ಐಆರ್ ದಾಖಲಾಗಿದ್ದು, ನಾಸಿಕ್ ಪೊಲೀಸರು ನಾರಾಯಣ ರಾಣೆ ಬಂಧನಕ್ಕೆ ಮುಂದಾಗಿದ್ದರು.
ಕೇಂದ್ರ ಸಚಿವರ ಹೇಳಿಕೆಯ ವಿಚಾರದಲ್ಲಿ ಬಿಜೆಪಿ ಅಂತರ ಕಾಯ್ದುಕೊಂಡಿದ್ದು, ಮಾಜಿ ಸಿಎಂ ದೇವೇಂದ್ರ ಫಡ್ನವಿಸ್, ಸಾರ್ವಜನಿಕ ಜೀವನದಲ್ಲಿ ಹೇಳಿಕೆ ನೀಡುವಾಗ ಕಾಳಜಿ ವಹಿಸಬೇಕು ಎಂದು ಪರೋಕ್ಷವಾಗಿ ನಾರಾಯಣ ರಾಣೆಗೆ ಟಾಂಗ್ ನೀಡಿದ್ದಾರೆ.
ಮುಖ್ಯಮಂತ್ರಿ ಬಗ್ಗೆ ಮಾತನಾಡುವ ವೇಳೆ ಎಚ್ಚರ ಇರಬೇಕು. ಮುಖ್ಯಮಂತ್ರಿ ಸ್ವಾತಂತ್ರ್ಯೋತ್ಸವ ವರ್ಷವನ್ನು ಮರೆತಿದ್ದರ ಬಗ್ಗೆ ಬೇರೆಯದೇ ರೀತಿಯಲ್ಲಿ ಟೀಕೆ ಮಾಡಬಹುದಿತ್ತು. ಇದರ ಬಗ್ಗೆ ಪೊಲೀಸರು ಕಾನೂನು ಪ್ರಕಾರ ನಡೆದುಕೊಳ್ಳಬೇಕು. ಹಾಗೆಂದು ಪೊಲೀಸರಿಗೆ ಬೆದರಿಕೆ ಒಡ್ಡುವುದಿಲ್ಲ. ಬೇರೆಯವರು ಇದೇ ರೀತಿ ನಡೆದುಕೊಂಡಿದ್ದಾಗ ಹೇಗೆ ನಿರ್ವಹಣೆ ತೋರಿದ್ದೀರಿ ಎನ್ನುವುದನ್ನು ನೆನಪಿಸಿಕೊಳ್ಳಿ. ಆದರೆ, ಇದನ್ನೇ ನೆಪವಾಗಿಟ್ಟು ಶಿವಸೇನಾ ಕಾರ್ಯಕರ್ತರು ಬಿಜೆಪಿ ಕಚೇರಿಗೆ ದಾಳಿ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ ಎಂದಿದ್ದರು.
ನಾರಾಯಣ ರಾಣೆ ನೇತೃತ್ವದ ಜನಾಶೀರ್ವಾದ ಯಾತ್ರೆ ಸಾಗುವ ರತ್ನಗಿರಿ, ರಾಜಾಪುರ, ಲಂಜಾ ಸೇರಿ ಕೊಂಕಣ ಭಾಗದಲ್ಲಿ ಶಿವಸೈನಿಕರು ಬೀದಿಗಿಳಿದಿದ್ದು, ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೇ ವೇಳೆ, ಮುಂಬೈನ ಜುಹುನಲ್ಲಿರುವ ನಾರಾಯಣ ರಾಣೆ ಮನೆಗೆ ಶಿವಸೇನಾ ಕಾರ್ಯಕರ್ತರು ಮುತ್ತಿಗೆ ಹಾಕಿದ್ದು, ಕಲ್ಲು ತೂರಾಟ ನಡೆಸಿದ್ದಾರೆ. ಬಿಜೆಪಿ ಕಾರ್ಯಕರ್ತರು ಕೂಡ ಅಲ್ಲಿ ಸೇರಿದ್ದು, ಪರಸ್ಪರ ಸಂಘರ್ಷಕ್ಕಿಳಿದಿದ್ದರು. ಪೊಲೀಸರು ಬಳಿಕ ಲಾಠಿಚಾರ್ಜ್ ನಡೆಸಿ, ಚದುರಿಸಿದ್ದಾರೆ.
ನಾರಾಯಣ ರಾಣೆ ಇದೇ ರೀತಿಯ ಮಾತನ್ನು ತಮ್ಮ ಸಹೋದ್ಯೋಗಿ ಸಚಿವರು ಮತ್ತು ಪ್ರಧಾನಿ ಮೋದಿಗೂ ಹೇಳುತ್ತಾರೆಯೇ ಎಂದು ಮಹಾರಾಷ್ಟ್ರ ಎನ್ ಸಿಪಿ ಅಧ್ಯಕ್ಷ ಜಯಂತ ಪಾಟೀಲ್ ಪ್ರಶ್ನೆ ಮಾಡಿದ್ದರು.
Union Minister Narayan Rane was arrested today over his comments on slapping Maharashtra Chief Minister Uddhav Thackeray for what he called his "ignorance of the year India won Independence".
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 09:55 pm
Mangalore Correspondent
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm