ತಾಲಿಬಾನ್ ಗೆ ಉಗ್ರಪಟ್ಟ ; ಮೋದಿ ಮೃದು ಧೋರಣೆಗೆ ಬಿಜೆಪಿ ಸಂಸದ ಸುಬ್ರಹ್ಮಣ್ಯ ಸ್ವಾಮಿ ಖಂಡನೆ !

30-08-21 12:58 pm       Headline Karnataka News Network   ದೇಶ - ವಿದೇಶ

ಅಫ್ಗಾನಿಸ್ತಾನದ ತಾಲಿಬಾನ್‌ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆ ಎಂದು ಉಲ್ಲೇಖಿಸದೆ ಇರುವ ಬಗ್ಗೆ ಬಿಜೆಪಿ ಸಂಸದ ಸುಬ್ರಮಣಿಯನ್‌ ಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‌

ನವದೆಹಲಿ, ಆಗಸ್ಟ್ 30: ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಧ್ಯಕ್ಷ ಸ್ಥಾನದಲ್ಲಿರುವ ಭಾರತ ವಿಶ್ವಸಂಸ್ಥೆಯ ನಿರ್ಣಯ ಒಂದರಲ್ಲಿ ಅಫ್ಗಾನಿಸ್ತಾನದ ತಾಲಿಬಾನ್‌ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆ ಎಂದು ಉಲ್ಲೇಖಿಸದೆ ಇರುವ ಬಗ್ಗೆ ಬಿಜೆಪಿ ಸಂಸದ ಸುಬ್ರಮಣಿಯನ್‌ ಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‌

ಈ ಬಗ್ಗೆ ಟ್ವೀಟ್ ಮಾಡಿರುವ ಸುಬ್ರಹ್ಮಣ್ಯ ಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ಅವರ ನಡೆಯನ್ನು ಖಂಡಿಸಿದ್ದಾರೆ. ತಾಲಿಬಾನ್‌ನಿಂದ ಈಗಾಗಲೇ ತೊಂದರೆಗಳು ಎದುರಾಗಿವೆ. ಹೀಗಿದ್ದರೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಧ್ಯಕ್ಷ ಸ್ಥಾನದಲ್ಲಿರುವ ಭಾರತವು ತಾಲಿಬಾನ್‌ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಣೆ ಮಾಡಲು ಒತ್ತು ನೀಡಿಲ್ಲ. ತಾಲಿಬಾನ್ ಬಗ್ಗೆ ಆ ಪದ ಉಲ್ಲೇಖಿಸದೆ ನಿರ್ಣಯ ಕೈಗೊಳ್ಳಲು ಮುಂದಾಗಿದ್ದನ್ನು ಕೇಳಿ ನನಗೆ ಅಚ್ಚರಿಯಾಗಿದೆ ಎಂದು ಹೇಳಿದ್ದಾರೆ. 

ವಿದೇಶಾಂಗ ಸಚಿವ ಎಸ್‌.ಜೈಶಂಕರ್ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್‌ ಅವರೊಂದಿಗೆ ವಿಶ್ವಸಂಸ್ಥೆಯ ಕಾರ್ಯಸೂಚಿಗಳ ಬಗ್ಗೆ ಚರ್ಚಿಸಿದ್ದು ತಾಲಿಬಾನ್ ಜೊತೆಗೆ ಮಾತುಕತೆಗೆ ಇಂಗಿತ ವ್ಯಕ್ತಪಡಿಸಿದ ಬೆನ್ನಲ್ಲೇ ಸುಬ್ರಹ್ಮಣ್ಯ ಸ್ವಾಮಿ ಈ ಟೀಕೆ ಮಾಡಿದ್ದಾರೆ. ಅಲ್ಲದೆ, ಭಯೋತ್ಪಾದನೆ ಕುರಿತ ಮೃದು ಧೋರಣೆ ಅನುಸರಿಸುವುದನ್ನು ಖಂಡಿಸಿದ್ದಾರೆ.‌

A tweet by the ruling Bharatiya Janata Party’s MP, Subramanian Swamy, on Sunday fuelled speculation about India’s participation in a purported move at the United Nations Security Council (UNSC) to pass a resolution without referring to the Taliban of of Afghanistan as a terrorist organisation.