ನಟಿ ಶಿಲ್ಪಾ ಶೆಟ್ಟಿ- ರಾಜ್ ಕುಂದ್ರಾಗೆ ಹೊಸ ಗಂಡಾಂತರ ; 41 ಲಕ್ಷ ರೂ. ವಂಚನೆ ಆರೋಪ, ವರದಿ ನೀಡುವಂತೆ ಕೋರ್ಟ್ ಆರ್ಡರ್

02-09-21 08:24 pm       Headline Karnataka News Network   ದೇಶ - ವಿದೇಶ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಅವರ ಪತಿ ಉದ್ಯಮಿ ರಾಜ್ ಕುಂದ್ರಾಗೆ ಸಂಕಷ್ಟಗಳು ಮುಗಿಯುವ ಲಕ್ಷಣ ಕಾಣುತ್ತಿಲ್ಲ.

ನವದೆಹಲಿ ಸೆ.2: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಅವರ ಪತಿ ಉದ್ಯಮಿ ರಾಜ್ ಕುಂದ್ರಾಗೆ ಸಂಕಷ್ಟಗಳು ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಬ್ಲೂ ಫಿಲ್ಮ್  ದಂಧೆಯಲ್ಲಿ ಜೈಲು ಪಾಲಾಗಿ  ಇದೀಗ ಬಿಡುಗಡೆಯಾಗಿ  ನ್ಯಾಯಾಂಗ ಬಂಧನದಲ್ಲಿರುವ ರಾಜ್ ಕುಂದ್ರಾ ಮತ್ತು ಆತನ ಪತ್ನಿ  ಶಿಲ್ಪಾ ಶೆಟ್ಟಿ ವಿರುದ್ಧ ದೆಹಲಿ ಮೂಲದ ಉದ್ಯಮಿಯೊಬ್ಬರು 41 ಲಕ್ಷ ರೂ. ವಂಚನೆ ಮಾಡಿದ್ದಾರೆ ಎಂದು ದೂರು ನೀಡಿದ್ದು, ಪೊಲೀಸರಲ್ಲಿ ಎಫ್​ಐಆರ್​ ದಾಖಲಿಸುವಂತೆ ಕೋರಿಕೊಂಡಿದ್ದಾರೆ. 

ದೂರಿನ ಪ್ರಕಾರ ರಾಜ್ ಕುಂದ್ರಾ ಅವರು ಮುಂಬೈ ಮೂಲದ ಕಂಪನಿಯೊಂದರಲ್ಲಿ ಉದ್ಯಮಿಗೆ ಹಣ ಹೂಡಲು ಮನವೊಲಿಸಿದ್ದರು. ಅದರ ಪ್ರಕಾರ 41 ಲಕ್ಷ ರೂಗಳನ್ನು ಹೂಡಿದ ಉದ್ಯಮಿಯ ಹಣವನ್ನು ದುರುದ್ದೇಶಕ್ಕೆ ಬಳಸಲಾಗಿದೆ ಎಂದು ದೂರಲಾಗಿದೆ.

"41,33,782 ರೂ.ಗಳನ್ನು ಹೂಡಿಕೆ ಮಾಡಲು ಪ್ರೇರೇಪಿಸಿ ನಂತರ ದುರುಪಯೋಗಪಡಿಸಿಕೊಂಡಿದ್ದಾರೆ ಹಾಗೂ ಅದನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ಬಳಸಿದ್ದಾರೆ ಮತ್ತು ಅದರಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸಿದ್ದಾರೆ” ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಹಣವನ್ನು ಗೇಮಿಂಗ್, ಅನಿಮೇಷನ್ ಮತ್ತು ಸೌಂದರ್ಯ ಉತ್ಪನ್ನಗಳಿಗೆ ಬಳಸುವುದಾಗಿ ರಾಜ್ ಹೇಳಿಕೊಂಡಿದ್ದರು. ಆದರೆ ಅವರು ಹಣವನ್ನು ಡಿಜಿಟಲ್ ಅಪ್ಲಿಕೇಶನ್‌ಗಳ ಮೂಲಕ ವಯಸ್ಕರ ವಿಷಯವನ್ನು ಸೃಷ್ಟಿಸಲು ಮತ್ತು ಪ್ರಕಟಿಸಲು ಹೂಡಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ ಎಂದು ಉದ್ಯಮಿ ದೂರಿನಲ್ಲಿ ತಿಳಿಸಿದ್ದಾರೆ. ಸ್ವಾರ್ಥ ಹಾಗೂ ವಂಚನೆಯ ಉದ್ದೇಶದಿಂದ ಹಣವನ್ನು ಹೂಡಿಕೆ ಮಾಡಲು ತಿಳಿಸಿದ್ದಕ್ಕಾಗಿ ಹಾಗೂ ಕೆಟ್ಟ ಉದ್ದೇಶಗಳಿಗೆ ಹಣವನ್ನು ಬಳಸಿದ್ದಕ್ಕಾಗಿ ದೆಹಲಿಯ ಉದ್ಯಮಿ ದೂರು ನೀಡಿದ್ದಾರೆ.

ರಾಜ್ ಕುಂದ್ರಾ, ಶಿಲ್ಪಾ ಶೆಟ್ಟಿ ಹಾಗೂ ಇತರ ಆರು ಜನರ ವಿರುದ್ಧ ವಂಚನೆ, ಮಾಹಿತಿ ತಂತ್ರಜ್ಞಾನ ಕಾಯ್ದೆ, ಮಹಿಳೆಯರ ಅಸಭ್ಯ ಪ್ರಾತಿನಿಧ್ಯ(ನಿಷೇಧ) ಕಾಯ್ದೆ ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ವಿಭಾಗಗಳ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲು ಉದ್ಯಮಿ ಕೋರಿದ್ದಾರೆ ಎಂದು ವರದಿಯಾಗಿದೆ. ಪ್ರಕರಣದ ಕುರಿತು ದೆಹಲಿಯ ನ್ಯಾಯಾಲಯವು ನವೆಂಬರ್ 9ರ ಒಳಗೆ ವರದಿಯನ್ನು ನೀಡುವಂತೆ ಪೊಲೀಸರಿಗೆ ತಿಳಿಸಿದೆ.

Trouble mounts for Bollywood actress Shilpa Shetty after her husband, Raj Kundra, was arrested in the alleged porn racket case. In a fresh turn of events Shilpa and her husband Raj are now accused of cheating. A Delhi-based businessman has filed an FIR against Raj Kundra and Shilpa Shetty and moved Delhi's Rohini Court, accusing them of cheating and alleged misappropriation of Rs 41 lakh.