ಮದುವೆ ಮನೆಯ ಊಟ ಆಸ್ಪತ್ರೆಗೆ ಓಟ ; 100ಕ್ಕೂ ಅಧಿಕ ಮಂದಿಗೆ ಪ್ರಾಣಸಂಕಟ

02-09-21 09:40 pm       Headline Karnataka News Network   ದೇಶ - ವಿದೇಶ

ಮದುವೆ ಮನೆಗೆ ಹೋಗಿ ತಮ್ಮ ಪ್ರಾಣಕ್ಕೆ 100ಕ್ಕೂ ಹೆಚ್ಚು ಮಂದಿ ಆಪತ್ತು ತಂದುಕೊಂಡಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಜೈಪುರ, ಸೆ 02: ಮದುವೆ ಮನೆಗೆ ಹೋಗಿ ತಮ್ಮ ಪ್ರಾಣಕ್ಕೆ 100ಕ್ಕೂ ಹೆಚ್ಚು ಮಂದಿ ಆಪತ್ತು ತಂದುಕೊಂಡಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ರಾಜಸ್ಥಾನದ ಚುರು ಎಂಬಲ್ಲಿ ಬುಧವಾರ ಮದುವೆ ನಡೆಯುತ್ತಿದ್ದು, ಸಮಾರಂಭದಲ್ಲಿ ಊಟ ಮಾಡಿದ 100ಕ್ಕೂ ಹೆಚ್ಚು ಜನರು ಆಸ್ಪತ್ರೆಯನ್ನು ಸೇರಿದ್ದಾರೆ. ಈ ಗುಂಪಿನಲ್ಲಿ 45 ಮಕ್ಕಳಿದ್ದು, ಇನ್ನೂ ಕೆಲವರು ಮನೆಗೆ ಹೋಗಿ ವಾಂತಿಯಾದ ನಂತರ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರಲ್ಲಿ 90 ಮಂದಿಗೆ ಚಿಕಿತ್ಸೆಯಾಗಿದ್ದು, ಅವರು ಮನೆಗೆ ತೆರಳಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. 

ಈ ಕುರಿತು ಪ್ರತಿಕ್ರಿಯಿಸಿದ ವೈದ್ಯರು, ಒಂದೇ ಸರಿ ಜನರು ಬಂದ ಕಾರಣ ಹಾಸಿಗೆ ಇಲ್ಲದೇ ಕೆಲವರನ್ನು ನೆಲದ ಮೇಲೆ ಮಲಗಿಸಲಾಗಿತ್ತು. ಅದು ಅಲ್ಲದೇ ಜನರ ಪರಿಸ್ಥಿತಿ ಅಸ್ತವ್ಯಸ್ತವಾಗಿತ್ತು. ಈ ನಡುವೆ ನಮ್ಮ ಆಸ್ಪತ್ರೆಯ ಸಿಬ್ಬಂದಿಯಲ್ಲಿ ಕೆಲವರಿಗೆ ಗಾಯವಾಗಿದೆ ಎಂದು ತಿಳಿಸಿದ್ದಾರೆ. 

ಏನಿದು ಘಟನೆ? 

ಕಾಲು ಕುಚಮನಿ ಎನ್ನುವವರು ಸರ್ದಾರ್‍ಶಹರ್‍ನ ವಾರ್ಡ್ ನಂ.44 ತಮ್ಮ ನಾಲ್ವರು ಹೆಣ್ಣುಮಕ್ಕಳನ್ನು ಒಂದೇ ದಿನ ಮದುವೆ ಮಾಡಲಾಗುತ್ತಿತ್ತು. ಬುಧವಾರ ಈ ವಿವಾಹ ಸಮಾರಂಭವನ್ನು ಮುಂಜಾನೆ 4 ಗಂಟೆಯವರೆಗೂ ಮಾಡಲಾಗಿತ್ತು. ಈ ವೇಳೆ ಮದುವೆಗೆ ಬಂದಿದ್ದ ಜನರು ಊಟ ಸೇವಿಸಿ ತಮಗೆ ವಾಂತಿಯಾಗುತ್ತಿರುವುದರ ಬಗ್ಗೆ ತಿಳಿಸಿದ್ದಾಗ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಕೆಲವರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ವಿಷಯ ತಿಳಿದ ಸರ್ದಾರ್‍ಶಹರ್ ಪೊಲೀಸರು ಆಸ್ಪತ್ರೆಗೆ ಆಗಮಿಸಿದ್ದು, ನಂತರ ಈ ಬಗ್ಗೆ ತನಿಖೆ ನಡೆಸಲು ಮುಂದಾಗಿದ್ದಾರೆ ಎಂದು ವರದಿ ಮೂಲಕ ತಿಳಿದುಬಂದಿದೆ.

Nearly 100 people fell sick with food poisoning after having meal at a wedding in Rajasthan's Churu, said an official. "Some people came to the hospital last night with a complaint of vomiting after attending a wedding in the Shobhasar village. Around 90 people were here. Today, we have discharged all of them," Reena Chhimpa, the Sub Divisional Magistrate (SDM) of Churu district's Sardarshahar told ANI.