ಬ್ರೇಕಿಂಗ್ ನ್ಯೂಸ್
04-09-21 01:06 pm Headline Karnataka News Network ದೇಶ - ವಿದೇಶ
ಕಾಬೂಲ್, ಸೆ.4: ಅಫ್ಘಾನಿಸ್ತಾನದಲ್ಲಿ ಸಾಮಾನ್ಯ ಮಹಿಳೆಯರಿಗೆ ಮಾತ್ರ ಅಪಾಯ ಎದುರಾಗಿದ್ದಲ್ಲ. ಈ ಹಿಂದೆ ಕೋರ್ಟ್ ಗಳಲ್ಲಿ ನ್ಯಾಯ ತೀರ್ಮಾನ ಮಾಡುತ್ತಿದ್ದ ಮಹಿಳಾ ನ್ಯಾಯಾಧೀಶರಿಗೂ ಭೀತಿ ಎದುರಾಗಿದೆ. ಅಫ್ಘಾನಿಸ್ತಾನದಲ್ಲಿ 250ರಷ್ಟು ಮಹಿಳಾ ನ್ಯಾಯಾಧೀಶರಿದ್ದು, ಅವರೆಲ್ಲ ಈಗ ಪ್ರಾಣ ಭಯದಲ್ಲಿದ್ದಾರೆ. ಈ ಪೈಕಿ ಹಲವರು ದೇಶ ಬಿಟ್ಟು ಯುರೋಪ್ ಮತ್ತಿತರ ರಾಷ್ಟ್ರಗಳಿಗೆ ತೆರಳಿದ್ದರೆ, ಬಹುತೇಕರು ಅಫ್ಘಾನಿಸ್ತಾನದಲ್ಲಿಯೇ ಅಡಗಿಕೊಂಡಿದ್ದಾರೆ.
ತಾಲಿಬಾನಿಗಳು ಅಧಿಕಾರ ಪಡೆಯುತ್ತಿದ್ದಂತೆ, ಜೈಲು ಪಾಲಾಗಿದ್ದ ಐಸಿಸ್, ತಾಲಿಬಾನಿ ಸೇರಿ ಉಗ್ರರು ಸೇರಿ ಇನ್ನಿತರ ಅಪರಾಧಿಗಳನ್ನು ಜೈಲಿನಿಂದ ಬಿಡಲಾಗಿತ್ತು. ಹೀಗೆ ಜೈಲಿನಿಂದ ಹೊರಬಂದಿರುವ ಉಗ್ರರು ತಮಗೆ ಜೈಲು ಶಿಕ್ಷೆ ನೀಡಿದ್ದ ಮಹಿಳಾ ನ್ಯಾಯಾಧೀಶರನ್ನು ಟಾರ್ಗೆಟ್ ಮಾಡಿದ್ದಾರೆ. ಯುರೋಪ್ ನಲ್ಲಿ ಅಡಗಿರುವ ಒಬ್ಬ ಮಹಿಳಾ ನ್ಯಾಯಾಧೀಶೆ ಈ ಬಗ್ಗೆ ತನಗಾದ ಪರಿಸ್ಥಿತಿಯನ್ನು ವಿವರಿಸಿದ್ದಾರೆ.
ನಾಲ್ಕರಿಂದ ಐದು ಮಂದಿಯಷ್ಟಿದ್ದ ತಾಲಿಬಾನ್ ಉಗ್ರರು ನನ್ನನ್ನು ಹುಡುಕಿ ಮನೆಗೆ ಬಂದಿದ್ದರು. ನನ್ನನ್ನು ಎಲ್ಲಿದ್ದಾಳೆ ಎಂದು ಮನೆಯಲ್ಲಿ ಗನ್ ಹಿಡಿದು ಹುಡುಕಾಟ ನಡೆಸಿದ್ದಾರೆ. ಇವರೆಲ್ಲ ನಾನೇ ಜೈಲಿಗೆ ತಳ್ಳಿದ್ದ ಅಪರಾಧಿಗಳಾಗಿದ್ದರು. ಆದರೆ, ನಾನು ಅದಾಗಲೇ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದೆ ಎಂದು ರಾಯಿಟರ್ಸ್ ಸುದ್ದಿಸಂಸ್ಥೆಗೆ ಯುರೋಪ್ ದೇಶದಿಂದ ಮಹಿಳಾ ಜಡ್ಜ್ ಒಬ್ಬರು ನೋವು ಹೇಳಿಕೊಂಡಿದ್ದಾರೆ. ಆದರೆ, ಪ್ರಾಣಭೀತಿಯಿಂದಾಗಿ ತನ್ನ ಹೆಸರಾಗಲೀ, ತಾನು ಇರುವ ಜಾಗವನ್ನಾಗಲೀ ಹೇಳಲಿಲ್ಲ.
ಕಳೆದ ಜನವರಿಯಲ್ಲಿ ಸುಪ್ರೀಂ ಕೋರ್ಟಿನ ಇಬ್ಬರು ಮಹಿಳಾ ಜಡ್ಜ್ ಗಳನ್ನು ತಾಲಿಬಾನಿಗಳು ಗುಂಡಿಟ್ಟು ಕೊಂದಿದ್ದರು. ಆನಂತರ ತಾಲಿಬಾನಿಗಳು ಅದನ್ನು ತಾವು ಮಾಡಿಲ್ಲ ಎಂದಿದ್ದರು. ಆದರೆ, ಯಾರು ಮಾಡಿದ್ದರು ಅನ್ನೋದು ಗೊತ್ತಾಗಿಲ್ಲ. ಈಗಂತೂ ದೇಶಾದ್ಯಂತ ಜೈಲಿನಲ್ಲಿದ್ದ ಉಗ್ರರನ್ನು ಹೊರಗೆ ಬಿಡಲಾಗಿದ್ದು, ಮಹಿಳಾ ನ್ಯಾಯಾಧೀಶರು ತೀರಾ ಅಪಾಯಕ್ಕೆ ತುತ್ತಾಗಿದ್ದಾರೆ. ನನಗೆ ತಿರುಗಿ ನನ್ನ ದೇಶಕ್ಕೆ ಹೋಗಬೇಕು ಅನ್ನೋ ಭಾವನೆಯಿದೆ. ನನ್ನ ಸಹೋದ್ಯೋಗಿಗಳ ಜೊತೆ ಸಂಪರ್ಕದಲ್ಲಿದ್ದೇನೆ. ಆದರೆ, ಅವರ ಮಾತು ಕೇಳಿದರೆ, ಅಲ್ಲಿನ ಸ್ಥಿತಿ ಭೀಕರವಾಗಿ ಇರುವಂತಿದೆ. ತುಂಬ ಭಯ ಪಟ್ಟುಕೊಂಡು ಮೆಸೇಜ್ ಮಾಡುತ್ತಿದ್ದಾರೆ. ತಮ್ಮ ಸ್ಥಿತಿಯೇ ನೇರ ಅಪಾಯದಲ್ಲಿದೆ ಎನ್ನುತ್ತಿದ್ದಾರೆ. ಜೈಲಿನಿಂದ ಹೊರಬಂದವರು ಜೀವ ಬೆದರಿಕೆ ಹಾಕುತ್ತಿದ್ದಾರೆ. ನಾವು ಇಲ್ಲಿ ಬದುಕುವುದು ಹೇಗೆ ಎಂದು ಕೇಳುತ್ತಿದ್ದಾರೆ ಎಂದು ತಪ್ಪಿಸಿಕೊಂಡು ಹೋಗಿರುವ ಅಫ್ಘನ್ ನ್ಯಾಯಾಧೀಶೆ ಹೇಳುತ್ತಾರೆ.
ಅಫ್ಘಾನಿಸ್ತಾನದಲ್ಲಿ ಸಾವಿರಾರು ಮಂದಿ ಮಾನವ ಹಕ್ಕು ರಕ್ಷಣೆಗಾಗಿ ಹೋರಾಟ ಮಾಡುವ ಮಂದಿ ಇದ್ದಾರೆ. ಅವರೆಲ್ಲ ಜೀವ ಭಯದಲ್ಲೇ ಕಾಲ ಕಳೆಯುತ್ತಿದ್ದಾರೆ. ಮಹಿಳಾ ಪೊಲೀಸರು, ಮಹಿಳಾ ಹೋರಾಟಗಾರ್ತಿಯರು, ಮಹಿಳಾ ವಕೀಲರು ಜೀವ ಬೆದರಿಕೆ ಎದುರಿಸುತ್ತಿದ್ದಾರೆ ಎಂದು ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಹೊರಿಯಾ ಮೊಸಾದಿಕ್ ಆತಂಕ ತೋಡಿಕೊಂಡಿದ್ದಾರೆ.
Safe in Europe after escaping from Kabul, an Afghan woman judge describes how she was hunted by men she had once jailed, now freed by the Taliban fighters who took over the country.
29-04-25 10:45 pm
Bangalore Correspondent
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
Praveen Nettaru, Mohsin Shukur, Karwar Police...
29-04-25 01:04 pm
29-04-25 03:45 pm
HK News Desk
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎ...
27-04-25 08:42 pm
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
29-04-25 11:00 pm
Mangalore Correspondent
Mangalore, Ullal Nethravathi Bridge: ಉಳ್ಳಾಲ ನ...
29-04-25 05:45 pm
Mangalore, Dr Kalladka Bhat: ಹೆಣ್ಣು ಮಕ್ಕಳು ವ್...
29-04-25 12:40 pm
Vadiraj, Mangalore, B R Ambedkar: ಕಾಂಗ್ರೆಸ್ ಸ...
29-04-25 11:53 am
Highland Hospital Mangalore, FIR, Anti Nation...
29-04-25 11:38 am
29-04-25 09:59 pm
Mangalore Correspondent
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm