ಬ್ರೇಕಿಂಗ್ ನ್ಯೂಸ್
06-09-21 10:08 pm Headline Karnataka News Network ದೇಶ - ವಿದೇಶ
ಕಾಬೂಲ್, ಸೆಪ್ಟೆಂಬರ್ 06 : ಕುಟುಂಬದವರ ಮುಂದೆಯೇ ಗರ್ಭಿಣಿ ಪೊಲೀಸ್ ಅಧಿಕಾರಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಅಫ್ಘಾನಿಸ್ತಾನದಲ್ಲಿ ನಡೆಸಿದೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ಜೋರಾಗಿದೆ. ಈಗಾಗಲೇ ಬಹುತೇಕ ಭಾಗಗಳನ್ನು ತಾಲಿಬಾನ್ ವಶಪಡಿಸಿಕೊಂಡಿದೆ. ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ತಮ್ಮ ವಶಕ್ಕೆ ಪಡೆದುಕೊಂಡ ಬಳಿಕ ಪ್ರತಿನಿತ್ಯ ಹಿಂಸಾತ್ಮಕ ಘಟನೆಗಳನ್ನು ನಡೆಸುತ್ತಲೇ ಇದ್ದಾರೆ. ಇದೀಗ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರನ್ನು ಆಕೆಯ ಪತಿ ಹಾಗೂ ಮಕ್ಕಳ ಎದುರೇ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಮಹಿಳಾ ಅಧಿಕಾರಿಯನ್ನು ತಾಲಿಬಾನಿಗಳು ಗುಂಡಿಟ್ಟು ಕೊಂದು ಬಳಿಕ ಆಕೆಯ ಮುಖವನ್ನು ವಿರೂಪಗೊಳಿಸಿದ್ದಾರೆ. ಸದ್ಯ ಸ್ಥಳೀಯ ತಾಲಿಬಾನ್ ಈ ಗಟನೆಯ ಕುರಿತು ತನಿಖೆ ನಡೆಸುವ ಭರವಸೆ ನೀಡಿದೆ ಎಂದು ಕುಟುಂಬ ಹೇಳಿರುವುದಾಗಿ ವರದಿಯಾಗಿದೆ.
ಅಫ್ಘಾನಿಸ್ತಾನ ತಮ್ಮ ವಶವಾದ ಬಳಿಕ ತಾಲಿಬಾನಿಗಳು ಉದಾರವಾದಿಗಳೆಂದು ಬಿಂಬಿಸುಲು ಪ್ರಯತ್ನಿಸುತ್ತಿದ್ದಾರೆ. ಆದರೂ ಕಾಬೂಲ್ ನಲ್ಲಿ ಉಗ್ರರ ಗುಂಪು ತಮ್ಮ ವಿರೋಧಿಗಳನ್ನು ಸಿಕ್ಕ ಸಿಕ್ಕಲ್ಲಿ ಕೊಲೆ ಮಾಡುತ್ತಿರುವುದಲ್ಲದೇ, ಅಮಾಯಕರನ್ನು ಕೂಡ ಬಲಿ ತೆಗೆದುಕೊಳ್ಳುವ ಮೂಲಕ ರಾಕ್ಷಸ ಕ್ರೌರ್ಯ ಮೆರೆಯುತ್ತಿದ್ದಾರೆ.
ಈ ಘಟನೆ ಅಫ್ಘಾನಿಸ್ತಾನದ ಘೋರ್ ಪ್ರಾಂತ್ಯದ ಕೇಂದ್ರ ನಗರದ ಫಿರೋಜ್ಕೋಹ್ ನಲ್ಲಿ ನಡೆದಿದೆ. ಮೃತ ಮಹಿಳಾ ಅಧಿಕಾರಿಯನ್ನು ಬಾನು ನೆಗರ್ ಎಂದು ಗುರುತಿಸಲಾಗಿದೆ. ಈಕೆ ಸ್ಥಳೀಯ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, 8 ತಿಂಗಳ ಗರ್ಭಿಣಿಯಾಗಿದ್ದರು.
ಅಫ್ಘಾನಿಸ್ತಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡಾಗಿನಿಂದ ತಾಲಿಬಾನಿಗಳು ತಮ್ಮನ್ನು ತಮ್ಮ ವಿರುದ್ಧ ಅಮೆರಿಕ ಸೇನೆಗೆ ಸಹಾಯ ಮಾಡಿದವರ ಮನೆ ಬಾಗಿಲಿಗೆ ಹೋಗಿ ಹುಡುಕಿ ಮರಣದಂಡನೆ ನೀಡುತ್ತಿರುವ ತಾಲಿಬಾನಿಗಳು, ಮಹಿಳಾ ಪೊಲೀಸ್ ಅಧಿಕಾರಿ ನೆಗರ್‌ನನ್ನು ಅವರ ಗಂಡ ಮತ್ತು ಮಕ್ಕಳ ಮುಂದೆಯೇ ಕೊಲೆ ಮಾಡಿದ್ದಾರೆ.
ತಮ್ಮ ವಿರುದ್ಧ ಅಮೆರಿಕ ಸೇನೆಗೆ ಸಹಾಯ ಮಾಡಿದವರ ಮನೆ ಬಾಗಿಲಿಗೆ ಹೋಗಿ ಹುಡುಕಿ ಹುಡುಕಿ ಮರಣದಂಡನೆ ನೀಡುತ್ತಿರುವ ತಾಲಿಬಾನಿಗಳು, ಮಹಿಳಾ ಪೊಲೀಸ್ ಅಧಿಕಾರಿ ನೆಗರ್‌ನನ್ನು ಅವರ ಗಂಡ ಹಾಗೂ ಮಕ್ಕಳ ಎದುರೇ ಕೊಲೆ ಮಾಡಿ ಕೃತ್ಯ ಮೆರೆದಿದ್ದಾರೆ.
ಇತ್ತೀಚೆಗಷ್ಟೇ ಅಫ್ಘಾನಿಸ್ತಾನದ ಉತ್ತರ ಬಾಲ್ಖ್ ಪ್ರಾಂತ್ಯದಲ್ಲಿ ಬಿಗಿಯಾದ ಬಟ್ಟೆ ಧರಿಸಿದರು ಹಾಗೂ ಒಬ್ಬರೇ ಒಬ್ಬ ಪುರುಷರು ನಂಟು ಹೊಂದಿರಲಿಲ್ಲ ಎಂಬ ಕಾರಣಕ್ಕೆ ಯುವತಿಯೊಬ್ಬಳನ್ನು ತಾಲಿಬಾನ್ ಅಮಾನುಷವಾಗಿ ಕೊಂದು ಹಾಕಿತ್ತು.
"ತಾಲಿಬಾನ್ ಉಗ್ರ ಸಂಘಟನೆಯ ಸ್ವಾಧೀನದಲ್ಲಿ ಇರುವ ಸಮರ್ ಕ್ವಾಂದ್ ಗ್ರಾಮದಲ್ಲಿ ಮಹಿಳೆಯನ್ನು ಹತ್ಯೆಗೈಯ್ಯಲಾಗಿದೆ," ಎಂದು ಅಫ್ಘಾನಿಸ್ತಾನದ ರೆಡಿಯೋ ಅಜಾದಿ ಸುದ್ದಿ ಸಂಸ್ಥೆಯು ವರದಿ ಮಾಡಿದೆ.
ಪೊಲೀಸರು ನೀಡಿದ ಮಾಹಿತಿ ಪ್ರಕಾರ, ತಾಲಿಬಾನ್ ಉಗ್ರರ ಕೈಗೆ ಸಿಕ್ಕು ಹತ್ಯೆಯಾದ 21 ವರ್ಷದ ಯುವತಿಯನ್ನು ನಜಾನಿನ್ ಎಂದು ಗುರುತಿಸಲಾಗಿದೆ. ಮಜರ್-ಇ-ಶರೀಫ್ ತಲುಪುವುದಕ್ಕಾಗಿ ಮನೆಯಿಂದ ಹೊರಟ ಸಂದರ್ಭದಲ್ಲಿ ಯುವತಿ ಮೇಲೆ ದಾಳಿ ನಡೆಸಲಾಗಿದೆ. ದಾಳಿಯ ಸಮಯದಲ್ಲಿ ನಜಾನಿನ್ ಬುರ್ಖಾ (ಮುಖ ಮತ್ತು ದೇಹವನ್ನು ಆವರಿಸುವ ಮುಸುಕು) ಧರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ತಾಲಿಬಾನ್ ಉಗ್ರ ಸಂಘಟನೆಯ ಅಧೀನದಲ್ಲಿ ಇರುವ ಅಫ್ಘಾನಿಸ್ತಾನದ ಪ್ರದೇಶಗಳಲ್ಲಿ ಮಹಿಳೆಯರು ಮತ್ತು ಯುವತಿಯನ್ನು ಸಾರ್ವಜನಿಕವಾಗಿ ಉದ್ಯೋಗಕ್ಕೆ ಹೋಗುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಇದರ ಮಧ್ಯೆ ಕೆಲಸಕ್ಕಾಗಿ ಹೊರಟ ಮಹಿಳೆಯ ಮೇಲೆ ದಾಳಿ ನಡೆಸಿ ಹತ್ಯೆಗೈದಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
An Afghan policewoman was shot dead by a Taliban in front of her family in Ghor province, an Afghan journalist informed in a tweet. Nigara was 6 months pregnant and was shot in front of her husband and children, the journalist informed.
29-04-25 10:45 pm
Bangalore Correspondent
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
Praveen Nettaru, Mohsin Shukur, Karwar Police...
29-04-25 01:04 pm
29-04-25 03:45 pm
HK News Desk
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
ಪಾಕ್ ವಿರುದ್ಧ ಯುದ್ದಕ್ಕೆ ಕರೆ ನೀಡಿದ ಕಾಶ್ಮೀರ್ ಸಿಎ...
27-04-25 08:42 pm
Pak, Website Hacked, Indian Army : ಅಲ್ಲಾ ನಮ್ಮ...
27-04-25 07:38 pm
29-04-25 11:00 pm
Mangalore Correspondent
Mangalore, Ullal Nethravathi Bridge: ಉಳ್ಳಾಲ ನ...
29-04-25 05:45 pm
Mangalore, Dr Kalladka Bhat: ಹೆಣ್ಣು ಮಕ್ಕಳು ವ್...
29-04-25 12:40 pm
Vadiraj, Mangalore, B R Ambedkar: ಕಾಂಗ್ರೆಸ್ ಸ...
29-04-25 11:53 am
Highland Hospital Mangalore, FIR, Anti Nation...
29-04-25 11:38 am
29-04-25 09:59 pm
Mangalore Correspondent
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am
Mangalore crime, Murder, Kudupu: ಕುಡುಪು ಬಳಿಯಲ...
27-04-25 10:59 pm