ಮನೆಯಲ್ಲಿ ವಿಘ್ನ ವಿನಾಯಕನ ಮೂರ್ತಿ ಇಡುವ ಮುನ್ನ ಈ ವಿಚಾರ ತಿಳಿದುಕೊಳ್ಳಿ

09-09-21 03:57 pm       SOURCE: News 18 Kannada   ದೇಶ - ವಿದೇಶ

ವಾಸ್ತು ನಿಯಮದ ಪ್ರಕಾರ ಕೆಲವು ಗಣೇಶನ ವಿಗ್ರಹಗಳು ಜೀವನದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಹಸುವಿನ ಸೆಗಣಿ ಮತ್ತು ಜೇಡಿ ಮಣ್ಣಿನಿಂದ ತಯಾರಿಸಿದ ಗಣೇಶನ ವಿಗ್ರಹವನ್ನು ಮನೆಗೆ ತಂದರೆ ಉತ್ತಮ.

ಗಣೇಶನನ್ನು ವಿಘ್ನ ವಿನಾಯಕ ಎಂದು ಕರೆಯುತ್ತಾರೆ. ರಿದ್ಧಿ, ಸಿದ್ಧಿ, ಸಂಪತ್ತನ್ನು ನೀಡುವ ದೇವರು. ಹಾಗಾಗಿ ಗಣಪನಿಗೆ ಇಷ್ಟವಾದ ಗರಿಕೆ, ಹಣ್ಣು ಹಂಪಲುಗಳನ್ನು, ಸಿಹಿ ತಿಂಡಿ, ಮೋದಕ ಅರ್ಪಿಸಿ ತಮ್ಮ ಇಷ್ಟಗಳನ್ನು ಬೇಡಿಕೊಳ್ಳುತ್ತಾರೆ. ಆದರೆ ಗಣೇಶನ ವಿಗ್ರಹವನ್ನು ಮನೆಗೆ ತರುವಾಗ ಮತ್ತು ವಿಗ್ರಹವನ್ನು ಮನೆಯಲ್ಲಿ ಇರಿಸುವಾಗ ಕೆಲವು ನಿಯಮಾವಳಿಗಳಿವೆ ಈ ಬಗ್ಗೆ ಮಾಹಿತಿ ಇಲ್ಲಿದೆ.

ಗಣೇಶ ಚತುರ್ಥಿ ಹಿಂದೂ ಹಬ್ಬಗಳಲ್ಲಿ ಒಂದು. ದೇಶದಾದ್ಯಂತ ಪ್ರತಿಯೊಬ್ಬರ ಮನೆಯಲ್ಲಿ ಗಣೇಶನ ಮೂರ್ತಿಯನ್ನಿಟ್ಟು ಆರಾಧನೆ ಮಾಡುತ್ತಾರೆ. ಹಿಂದೆ 10 ದಿನಗಳ ಕಾಲ ಆಚರಣೆ ಮಾಡುತ್ತಿದ್ದರು. ಪ್ರಸ್ತುತ ಕೆಲವು ದಿನಗಳವರೆಗೆ ಆಚರಣೆ ಮಾಡುತ್ತಾರೆ. ಉತ್ತರ ಪ್ರದೇಶ, ಮುಂಬೈನಲ್ಲಿ ತಿಂಗಳುಗಳ ಕಾಲ ಭರ್ಜರಿಯಾಗಿ ಆಚರಣೆ ಮಾಡುತ್ತಾರೆ.

ವಾಸ್ತು ನಿಯಮದ ಪ್ರಕಾರ ಕೆಲವು ಗಣೇಶನ ವಿಗ್ರಹಗಳು ಜೀವನದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಹಸುವಿನ ಸೆಗಣಿ ಮತ್ತು ಜೇಡಿ ಮಣ್ಣಿನಿಂದ ತಯಾರಿಸಿದ ಗಣೇಶನ ವಿಗ್ರಹವನ್ನು ಮನೆಗೆ ತಂದರೆ ಉತ್ತಮ.

ಹಳದಿ ಬಣ್ಣದ ಮತ್ತು ಬಿಳಿಯ ಬಣ್ಣದ ವಿಗ್ರಹ ಅದೃಷ್ಠವನ್ನು ನೀಡುತ್ತದೆ. ಬೆಳ್ಳಿಯ ಗಣೇಶನ ವಿಗ್ರಹ ಮನೆಯ ಮಾಲೀಕನ ಖ್ಯಾತಿಯನ್ನು ಹೆಚ್ಚಿಸುತ್ತದೆ.

ಹಿತ್ತಾಳೆಯ ವಿಗ್ರಹ ಉತ್ತಮ ಆರೋಗ್ಯವನ್ನು ನೀಡುತ್ತದೆ. ಮರದ ಗಣೇಶನ ವಿಗ್ರಹ ಸಂತೋಷವನ್ನು ನೀಡುತ್ತದೆ.

ವಿಗ್ರಹವನ್ನು ಇಡಲು ಸರಿಯಾದ ಸ್ಥಳ: ಗಣೇಶನ ವಿಗ್ರಹವನ್ನು ಪೂರ್ವ, ಪಶ್ಚಿಮ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ದಕ್ಷಿಣ ದಿಕ್ಕಿನಲ್ಲಿ ಅಥವಾ ಶೌಚಾಲಯಕ್ಕೆ ನೇರವಾಗಿ ಜೋಡಿಸಿರುವ ಅಥವಾ ವಾಶ್​ ರೂಂ ಗೋಡೆಯಗಳಿಗೆ ತಾಗಿರುವ ಗೋಡೆಗಳ ಬದಿಯಲ್ಲಿ ಇಡಬಾರದು. ಮೆಟ್ಟಿಲಿನ ಕೆಲಗೆ ಇಡುವುದು ಸೂಕ್ತವಲ್ಲ. ಗಣೇಶನ ವಿಗ್ರಹವನ್ನು ಮನೆಯ ಬಾಗಿಲಿಗೆ ಮುಖ ಮಾಡಿದಂತೆ ಇರಿಸಿದರೆ ಉತ್ತಮ.