ಬ್ರೇಕಿಂಗ್ ನ್ಯೂಸ್
11-09-21 10:17 pm Headline Karnataka News Network ದೇಶ - ವಿದೇಶ
ನವದೆಹಲಿ, ಸೆ.1: ಅದು 20 ವರ್ಷಗಳ ಹಿಂದಿನ ಘಟನೆ. ಭಾರತದಲ್ಲಿ ಅಂದು ಸೆ.11ರ ಮಂಗಳವಾರ ಸಂಜೆ ಮುಗಿದು ಆಗಸದಲ್ಲಿ ಚಂದ್ರ ಕಾಣಿಸಿದ್ದ. ಅತ್ತ ಅಮೆರಿಕನ್ನರಿಗೆ ಮಂಗಳವಾರದ ನಸುಕಿನ ಜಾವ.. ಅಷ್ಟರಲ್ಲೇ ಜಗತ್ತು ಊಹಿಸದ ಘಟನೆ ನಡೆದು ಹೋಗಿತ್ತು. ನಾಲ್ಕು ಪ್ಯಾಸೆಂಜರ್ ವಿಮಾನಗಳನ್ನು ಅಪಹರಿಸಿದ್ದ ಅಲ್ ಖೈದಾ ಉಗ್ರರು ಅದನ್ನೇ ಮಿಸೈಲ್ ಗಳಾಗಿಸಿ ಅಮೆರಿಕದತ್ತ ನುಗ್ಗಿಸಿದ್ದರು. ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಅನ್ನುವ ಗಗನ ಚುಂಬಿಸುತ್ತಿದ್ದ ಅವಳಿ ಕಟ್ಟಡಗಳ ಮೇಲೆ ನೇರವಾಗಿ ವಿಮಾನಗಳು ಬಂದು ಅಪ್ಪಳಿಸಿದ್ದವು. ವಿಮಾನದಲ್ಲಿದ್ದ ಪ್ರಯಾಣಿಕರು ಸೇರಿ ಕಟ್ಟಡದಲ್ಲಿದ್ದ ಮೂರು ಸಾವಿರಕ್ಕೂ ಹೆಚ್ಚು ಜನರು ಜೀವಂತ ಸಮಾಧಿಯಾಗಿದ್ದರು.. ನೋಡ ನೋಡುತ್ತಲೇ ಅವಳಿ ಕಟ್ಟಡಗಳು ಧೊಪ್ಪನೆ ನೆಲಕ್ಕುರುಳಿದ್ದವು.
ವಿಶ್ವದ ದೊಡ್ಡಣ್ಣ ಎಂಬ ಅಹಂಕಾರ ಹೊತ್ತುಕೊಂಡಿದ್ದ ಅಮೆರಿಕದಂತಹ ಅಮೆರಿಕವೇ ಭಯೋತ್ಪಾದಕರ ಅಟ್ಟಹಾಸಕ್ಕೆ ನಡುಗಿ ಹೋಗಿತ್ತು. ಅಮೆರಿಕದ ಅಧ್ಯಕ್ಷ ಜಾರ್ಜ್ ಡಬ್ಯ್ಲು ಬುಷ್ ತಡ ಮಾಡಲೇ ಇಲ್ಲ. ಉಕ್ಕಳಿಸಿ ಬರುತ್ತಿದ್ದ ದುಃಖ ಮತ್ತು ಆಕ್ರೋಶದ ನಡುವೆಯೇ ವಿಶ್ವದ ರಾಷ್ಟ್ರಗಳನ್ನು ಉದ್ದೇಶಿಸಿ ಘರ್ಜನೆ ಮಾಡಿದ್ದರು. ಜಗತ್ತಿನ ಯಾವುದೇ ಮೂಲೆಯಲ್ಲಿರುವ ದೇಶವೇ ಆಗಿರಲಿ. ಅದು ಒಂದೋ ಅಮೆರಿಕದ ಜೊತೆಗಿರಬೇಕು. ಇಲ್ಲದಿದ್ದರೆ, ಭಯೋತ್ಪಾದಕರ ಜೊತೆಗಿರಬೇಕು ಎನ್ನುತ್ತಲೇ ಉಗ್ರರ ವಿರುದ್ಧ ಯುದ್ಧವನ್ನೇ ಸಾರಿದ್ದರು.
ಕೆಲವೇ ದಿನಗಳಲ್ಲಿ ಅದಕ್ಕಾಗಿ ಹೊಸ ಮಸೂದೆಯನ್ನೇ ಜಾರಿಗೆ ತಂದಿದ್ದರು. ಅವಳಿ ಕಟ್ಟಡಗಳನ್ನು ಹೊಡೆದುರುಳಿಸಿದ ಭಯೋತ್ಪಾದಕರನ್ನು ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಹೊಡೆದು ಹಾಕಲು ಅಮೆರಿಕದ ಮಿಲಿಟರಿ ಬಳಸಿಕೊಳ್ಳಲು ಅಲ್ಲಿನ ಸರಕಾರಕ್ಕೆ ಅನುಮತಿ ನೀಡುವ ಮಸೂದೆಯನ್ನೇ ಜಾರಿಗೆ ತಂದಿದ್ದರು. ಅಮೆರಿಕದ ಕಾಂಗ್ರೆಸಿನ 500 ಸದಸ್ಯರಲ್ಲಿ ಒಬ್ಬನನ್ನು ಹೊರತುಪಡಿಸಿ ಉಳಿದೆಲ್ಲರೂ ಒಕ್ಕೊರಳ ಸಹಮತದಲ್ಲಿ ಮಸೂದೆ ಜಾರಿಯಾಗಿತ್ತು. ಬಾರ್ಬರಾ ಜಾನ್ ಲೀ ಎಂಬ ಡೆಮಾಕ್ರಾಟಿಕ್ ಪಾರ್ಟಿಯ ಸಂಸದ ಮಾತ್ರ, ಅಫ್ಘಾನಿಸ್ತಾನದ ಮೇಲೆ ಅಮೆರಿಕ ಯುದ್ಧ ಸಾರುವುದನ್ನು ವಿರೋಧಿಸಿದ್ದ.
ಅಷ್ಟರಲ್ಲೇ ಈ ಕೃತ್ಯವನ್ನು ಅಲ್ ಖೈದಾ ಉಗ್ರರು ಮಾಡಿದ್ದು ಮತ್ತು ಅದರ ಪರಮೋಚ್ಚ ನಾಯಕ ಒಸಾಮಾ ಬಿನ್ ಲಾಡೆನ್ ಇದರ ರೂವಾರಿ ಅನ್ನುವುದನ್ನು ಅಮೆರಿಕ ಕಂಡುಕೊಂಡಿತ್ತು. ಇದೇ ಹೊತ್ತಿಗೆ, ತನ್ನ ಜಯಘೋಷವನ್ನು ಲಾಡೆನ್ ತನ್ನಷ್ಟಕ್ಕೇ ಸಾರಿಯೂ ಇದ್ದ. ಅಮೆರಿಕ ತನ್ನ ಸಂಸತ್ತಿನ ಬೆಂಬಲ ಪಡೆಯುತ್ತಲೇ ತನ್ನ ಇಡೀ ಮಿಲಿಟರಿ ಶಕ್ತಿಯನ್ನು ಅಫ್ಘಾನಿಸ್ತಾನಕ್ಕೆ ಒಯ್ದಿತ್ತು. ಒಂದೇ ತಿಂಗಳಲ್ಲಿ ಅಂದರೆ, ಅಕ್ಟೋಬರ್ ಹೊತ್ತಿಗೆ ಅಮೆರಿಕದ ವಾಯುಪಡೆ ಮತ್ತು ಆರ್ಮಿ ಸದಸ್ಯರು ಅಫ್ಘಾನಿಸ್ತಾನದಲ್ಲಿ ಝಂಡಾ ಊರಿದ್ದರು. ಅಷ್ಟೇ ಅಲ್ಲಾ, ಪಾತಾಳದಲ್ಲಿ ಅಡಗಿದ್ದರೂ, ಒಸಾಮಾ ಬಿನ್ ಲಾಡೆನನ್ನು ಬಿಡಲಾರೆವು ಅನ್ನುವ ಶಪಥ ಹಾಕುತ್ತಲೇ ಮಿಲಿಟರಿ ಯೋಧರು ಹೂಂಕರಿಸಿದ್ದರು.
ಅಫ್ಘಾನಿಸ್ತಾನದಲ್ಲಿ ಅಲ್ ಖೈದಾ ಉಗ್ರರ ಬೆಂಬಲ ಹೊಂದಿದ್ದ ತಾಲಿಬಾನಿಗಳು ಆಡಳಿತ ನಡೆಸುತ್ತಿದ್ದರು. ಎರಡೇ ತಿಂಗಳಲ್ಲಿ ತಾಲಿಬಾನ್ ಆಡಳಿತವನ್ನು ಅಪ್ಘನ್ ನೆಲದಲ್ಲಿ ಕೊನೆಗಾಣಿಸಿದ್ದ ಅಮೆರಿಕ, ಒಸಾಮಾ ಬಿನ್ ಲಾಡೆನ್ ಮತ್ತು ಅಲ್ ಖೈದಾ ಉಗ್ರರ ಬೇಟೆಗೆ ಇಳಿದಿತ್ತು. 1990ರಿಂದಲೂ ಪಾಕಿಸ್ಥಾನದಲ್ಲಿ ಬೇಸ್ ಮಾಡಿಕೊಂಡಿದ್ದ ಅಲ್ ಖೈದಾ ಉಗ್ರರು, ಅಫ್ಘನ್ ನೆಲದಲ್ಲಿ ತಾಲಿಬಾನ್ ಗಳನ್ನು 1996ರಲ್ಲಿ ಅಧಿಕಾರಕ್ಕೇರಿಸಿದ್ದರು. ಆದರೆ, ಅಫ್ಘನ್ ನೆಲದಲ್ಲಿ ಲಾಡೆನ್ ಅಡಗಿದ್ದಾನೆಂಬ ಅನುಮಾನದಲ್ಲಿ ಅಲ್ಲಿಗೇ ಬಂದಿಳಿದಿದ್ದ ಅಮೆರಿಕದ ಮಿಲಿಟರಿ ಅಲ್ಲಿ ಎಲ್ಲ ಕಡೆಯೂ ಜಾಲಾಡ ತೊಡಗಿದ್ದರು. ಆದರೆ, ಅಫ್ಘನ್ ನೆಲದಲ್ಲಿ ಒಸಾಮಾ ಸಿಗಲೇ ಇಲ್ಲ.
ಹಾಗೆಂದು, ಅಮೆರಿಕನ್ನರು ಹಿಡಿದ ಕೆಲಸವನ್ನು ಮುಗಿಸದೆ ಹೋಗುವವರಲ್ಲ. ಅಫ್ಘಾನಿಸ್ತಾನದಲ್ಲಿ ಬದಲೀ ಸರಕಾರವನ್ನು ರಚಿಸಿ, ಜೊತೆಗೇ ಅಲ್ಲೊಂದು ಪ್ರಬಲ ರಾಷ್ಟ್ರ ಕಟ್ಟುವತ್ತ ಮನಸ್ಸು ಮಾಡಿದ್ದರು. ಅಲ್ಲದೆ, ಭಯೋತ್ಪಾದಕರ ಹುಟ್ಟಡಗಿಸುವ ಶಪಥ ಮಾಡಿದ್ದರು. ಇದೇ ವೇಳೆ, ವಿಶ್ವದ ಮೂಲೆ ಮೂಲೆಯಲ್ಲಿ ತನ್ನದೇ ಗುಪ್ತಚರರ ಮೂಲಕ ಒಸಾಮಾ ಬಿನ್ ಲಾಡೆನ್ ಪತ್ತೆಗೆ ಅಮೆರಿಕ ಮುಂದಾಗಿತ್ತು. ಹತ್ತು ವರ್ಷಗಳ ನಂತರ ಅಂದರೆ, 2011ರ ಒಂದು ದಿನ ರಾತ್ರಿ ಪಾಕಿಸ್ಥಾನದ ಅಬೋಟಾಬಾದ್ ಅನ್ನುವ ನಗರದಲ್ಲಿ ಅಡಗಿದ್ದ ಒಸಾಮಾ ಬಿನ್ ಲಾಡೆನನ್ನು ಪತ್ತೆ ಮಾಡಿ, ಇನ್ನಿಲ್ಲವಾಗಿಸಿತ್ತು. ಉಗ್ರರ ವಿರುದ್ಧ ಅಕ್ಷರಶಃ ಯುದ್ಧ ಸಾರಿದ್ದ ಅಮೆರಿಕನ್ನರು ಭಾರತ ಸೇರಿದಂತೆ ಜಗತ್ತಿನ ನಾನಾ ರಾಷ್ಟ್ರಗಳಲ್ಲಿ ಲಾಡೆನ್ ಪತ್ತೆಗೆ ವ್ಯೂಹ ರಚಿಸಿದ್ದರು. ಇದರಿಂದಾಗಿ ಲಾಡೆನ್ ಪಾಕಿಸ್ಥಾನ ಬಿಟ್ಟು ಹೊರಬರುವುದಕ್ಕೇ ಸಾಧ್ಯವಾಗಲಿಲ್ಲ.
ಆದರೆ, ಅಮೆರಿಕದ ಕಣ್ಣು ತಪ್ಪಿಸಿ ಬದುಕಿದ್ದ ಲಾಡೆನ್ ಕೊನೆಗೆ ಹತ್ತು ವರ್ಷಗಳ ಬಳಿಕ ಅದರ ನಿಗೂಢ ಡ್ರೋಣ್ ಕಣ್ಣಲ್ಲಿ ಪತ್ತೆಯಾಗಿದ್ದ. ಯಾರೂ ಊಹಿಸದ ರೀತಿ ಲಾಡೆನನ್ನು ಬೆನ್ನತ್ತಿದ್ದ ಅಮೆರಿಕದ ಪಡೆಗಳು ಆತನ ಹೆಣವೂ ಸಿಗದಂತೆ ಮುಗಿಸಿ ಬಿಟ್ಟಿದ್ದವು. ಅಂದು ಅಮೆರಿಕದ ಅಧ್ಯಕ್ಷರಾಗಿದ್ದುದು ಬರಾಕ್ ಒಬಾಮಾ. ಪ್ರತಿ ಬಾರಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಲ್ ಖೈದಾ ಉಗ್ರರ ವಿರುದ್ಧ ಯುದ್ಧ ಸಾರುವುದೇ ಪ್ರಮುಖ ಅಸ್ತ್ರವಾಗಿತ್ತು. ಅಷ್ಟರ ಮಟ್ಟಿಗೆ ಅಮೆರಿಕನ್ನರು ಕೂಡ ಭಯೋತ್ಪಾದಕ ದಾಳಿಗೆ ಸೇಡು ತೀರಿಸಿಕೊಳ್ಳಲು ಅಣಿಯಾಗಿದ್ದರು. ಕಳೆದ ಐದು ಬಾರಿಯ ಚುನಾವಣೆಯಲ್ಲೂ ಅದೇ ವಿಚಾರ ಪ್ರಮುಖ ಅಸ್ತ್ರವಾಗಿದ್ದು ವಿಶೇಷ.
20 ವರ್ಷಗಳ ನಂತರ ಅಫ್ಘಾನಿಸ್ತಾನ ಬಿಟ್ಟು ಅಮೆರಿಕನ್ನರು ಹಿಂದೆ ತೆರಳಿದ್ದಾರೆ. ಉಗ್ರರು ಆನಂತರ ಯಾವತ್ತಿಗೂ ಅಮೆರಿಕದತ್ತ ಸುಳಿಯದಂತೆ ಅದಕ್ಕೆ ಬೇಕಾದ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಗಡ್ಡ ಕಂಡ ಭಾರತೀಯ ಮೂಲದ ಸಿಂಗರನ್ನೂ ಬಿಡದೆ ಚೆಕ್ ಮಾಡುವುದು ರೂಢಿಯಾಗಿತ್ತು. ಹೆಸರಿನೊಂದಿಗೆ ಖಾನ್, ಅಹ್ಮದ್ ಏನೇ ಇದ್ದರೂ ಎರಡೆರಡು ಬಾರಿ ಚೆಕ್ ಮಾಡುವುದು ಅಮೆರಿಕದಲ್ಲಿ ಕರಗತವಾಗಿದೆ. 20 ವರ್ಷಗಳ ನಂತರ ಅಮೆರಿಕ ಅಫ್ಘನ್ ಬಿಟ್ಟು ಹೋಗುವ ಸಂದರ್ಭದಲ್ಲೇ ಇತ್ತ ತಾಲಿಬಾನಿಗಳು ಸೇರಿ ಉಗ್ರರು ವಿಜೃಂಭಿಸಿದ್ದಾರೆ. ಮತ್ತೆ ಹಳೆಯ ನೆನಪುಗಳು ಮರುಕಳಿಸುತ್ತಿವೆ.
The September 11, 2001, terrorist attacks were one of the most defining moments of modern history. Millions of people watched the events unfold on television as 19 al-Qaeda terrorists hijacked four US passenger airplanes and carried out suicide attacks against targets at multiple locations. Historical and new satellite images supplied by space firm Maxar Technologies show what the devastating terror attack looked like from space and what has changed since then.
26-11-24 10:46 pm
Bangalore Correspondent
Shivamogga, Monkey fever, Dinesh Gundu Rao: ಮ...
26-11-24 10:23 pm
BJP, Vijayendra: ಉಪ ಚುನಾವಣೆ ಸೋಲು ; ಪಕ್ಷದ ಕಾರ್...
26-11-24 06:56 pm
MLA Gaviyappa, Congress: ಗ್ಯಾರಂಟಿ ಸ್ಕೀಂನಿಂದಾಗ...
26-11-24 06:11 pm
Davanagere News, Heart Attack: ಗಂಡ ಹೃದಯಾಘಾತಕ್...
26-11-24 11:52 am
26-11-24 09:43 pm
HK News Desk
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
26-11-24 11:23 pm
Udupi Correspondent
Mangalore, Suicide, Belthangady: ಬೆಳ್ತಂಗಡಿ ;...
26-11-24 10:58 pm
Mangalore Baby, Lady goschen Hospital: ಲೇಡಿಗೋ...
26-11-24 10:50 pm
Tamil Actor Surya, Jyothika, Udupi temple: ಕೊ...
26-11-24 08:23 pm
Mangalore, Police Anupam Agarwal IPS, DYFI; ಸ...
26-11-24 05:37 pm
26-11-24 03:10 pm
Mangalore Correspondent
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm
Rowdy sheeter Dawood, Mangalore Crime, Police...
23-11-24 10:49 am
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm