26/11ರ ಮುಂಬೈ ಬ್ಲಾಸ್ಟ್ ಮಾದರಿಯಲ್ಲೇ ಟೆರರ್ ಪ್ಲಾನ್ ; ಡಿ ಕಂಪನಿಗೆ ಟಾಸ್ಕ್ ನೀಡಿದ್ದ ಪಾಕಿಸ್ಥಾನದ ಐಎಸ್ಐ !

15-09-21 10:03 pm       Headline Karnataka News Network   ದೇಶ - ವಿದೇಶ

ಭಾರೀ ವಿಧ್ವಂಸಕ ಕೃತ್ಯಕ್ಕೆ ಸಂಚು ನಡೆಸಿ ಸಿಕ್ಕಿಬಿದ್ದಿರುವ ಶಂಕಿತ ಉಗ್ರರ ಹಿಂದೆ ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ತಂಡದ ಕೈವಾಡ ಇರುವುದು ಬಯಲಾಗಿದೆ.

ಮುಂಬೈ, ಸೆ.15 : ಭಾರೀ ವಿಧ್ವಂಸಕ ಕೃತ್ಯಕ್ಕೆ ಸಂಚು ನಡೆಸಿ ಸಿಕ್ಕಿಬಿದ್ದಿರುವ ಶಂಕಿತ ಉಗ್ರರ ಹಿಂದೆ ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ ತಂಡದ ಕೈವಾಡ ಇರುವುದು ಬಯಲಾಗಿದೆ. ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಪೊಲೀಸರ ಬಲೆಗೆ ಬಿದ್ದಿರುವ ಆರು ಮಂದಿ ಶಂಕಿತ ಉಗ್ರರಿಗೆ ಮಾಸ್ಟರ್ ಮೈಂಡ್ ಆಗಿದ್ದುದೇ ಡಿ ಕಂಪನಿ ಅನ್ನೋ ವಿಚಾರವನ್ನು ನ್ಯೂಸ್ 18 ಸಿಎನ್ಎನ್ ನೆಟ್ವರ್ಕ್ ಬಯಲು ಮಾಡಿದೆ.

ಉನ್ನತ ಮೂಲಗಳನ್ನು ಉಲ್ಲೇಖಿಸಿ ನ್ಯೂನ್ 18 ನೆಟ್ವರ್ಕ್ ಈ ಬಗ್ಗೆ ವರದಿ ಮಾಡಿದ್ದು, ಪಾಕಿಸ್ಥಾನದ ಐಎಸ್ಐ ಗುಪ್ತಚರ ಏಜನ್ಸಿಯು ಮುಂಬೈ ಅಥವಾ ದೇಶದ ಇತರ ಯಾವುದೇ ಮಹಾನಗರಗಳಲ್ಲಿ 26/11ರ ಮುಂಬೈ ಬ್ಲಾಸ್ಟ್ ಮಾದರಿಯಲ್ಲೇ ಭಾರೀ ದೊಡ್ಡ ವಿಧ್ವಂಸಕ ಕೃತ್ಯ ಎಸಗುವಂತೆ ಡಿ ಕಂಪನಿಗೆ ಒತ್ತಡ ಹಾಕಿತ್ತು ಅನ್ನೋ ಸ್ಫೋಟಕ ವಿಚಾರವನ್ನು ಹೊರಗೆಡವಿದೆ. ಐಎಸ್ಐ ಒತ್ತಡಕ್ಕೆ ಬಿದ್ದು ಡಿ ಕಂಪನಿಯ ಛೋಟಾ ಶಕೀಲ್ ಮತ್ತು ದಾವೂದ್ ಸೋದರ ಅನೀಸ್ ಇಬ್ರಾಹಿಂ ತಮ್ಮ ಕೆಲಸಕ್ಕಾಗಿ ಭಾರತದಲ್ಲಿ ಯುವಕರನ್ನು ಜಾಲಕ್ಕೆ ಸೇರ್ಪಡೆ ಮಾಡುತ್ತಿದ್ದ. ಕೆಲವರನ್ನು ತಮ್ಮ ಗ್ರೂಪಿಗೆ ಸೇರಿಸಿ, ಅವರಿಗೆ ಹಣದ ಆಮಿಷವೊಡ್ಡಿ ಕೆಲಸ ಪೂರೈಸಿಕೊಳ್ಳಲು ಟಾರ್ಗೆಟ್ ಕೊಡಿಸುತ್ತಿದ್ದರು.

26/11ರ ಮುಂಬೈ ಸರಣಿ ಬ್ಲಾಸ್ಟ್ ಮಾದರಿಯಲ್ಲೇ ವಿಧ್ವಂಸಕ ಕೃತ್ಯ ಎಸಗಲು ಪ್ಲಾನ್ ಹಾಕಲಾಗಿತ್ತು. ಅದಕ್ಕಾಗಿ ಸೀಕ್ರೆಟ್ ಆಗೇ ಅವರಿಗೆ ಟಾಸ್ಕ್ ಕೊಟ್ಟು ಕೆಲಸ ಮಾಡಿಸುತ್ತಿದ್ದರು. ಈ ತಂಡದಲ್ಲಿ ಮೊದಲು ಪೊಲೀಸರಿಗೆ ಸಿಕ್ಕಿಬಿದ್ದವನೇ ಮುಂಬೈನ ಧಾರಾವಿ ಮೂಲದ ವ್ಯಕ್ತಿ. ಜಾನ್ ಮೊಹಮ್ಮದ್ ಶೇಖ್ ಅಲಿಯಾಸ್ ಸಮೀರ್ ಕಾಲಿಯಾ ಎನ್ನುವ ವ್ಯಕ್ತಿಯನ್ನು ತೀವ್ರವಾದಿ ಆಗಿಸಲು ಬ್ರೇನ್ ವಾಷ್ ಮಾಡಿ, ತಮ್ಮ ಕಾರ್ಯ ಪೂರೈಸಿಕೊಳ್ಳಲು ಸಿದ್ಧತೆ ನಡೆಸಿದ್ದರು. ಭಾರತದಲ್ಲೇ ತೀವ್ರವಾದಿಗಳನ್ನು ಗುರುತಿಸಿ, ವಿಧ್ವಂಸಕ ಕೃತ್ಯ ಎಸಗಲು ರೆಡಿ ಮಾಡುವುದು ಪಾಕಿಸ್ಥಾನದ ಐಎಸ್ಐ ಏಜನ್ಸಿಯ ಹೊಸ ಕಾರ್ಯತಂತ್ರ. ಈತನ ಜೊತೆಗೆ ಸಿಕ್ಕಿಬಿದ್ದಿರುವ ಒಸಾಮಾ ಅಲಿಯಾಸ್ ಸಮಿ ಎಂಬಾತ ಪಾಕಿಸ್ಥಾನದಲ್ಲಿ ಟ್ರೈನಿಂಗ್ ಪಡೆದಿದ್ದನ್ನು ತನಿಖಾ ಏಜನ್ಸಿಗಳ ಮುಂದೆ ಬಾಯ್ಬಿಟ್ಟಿದ್ದಾನೆ.

ದೆಹಲಿ ಮತ್ತು ಉತ್ತರ ಪ್ರದೇಶ ಪೊಲೀಸರು ನಡೆಸಿರುವ ಜಂಟಿ ಕಾರ್ಯಾಚರಣೆಯಲ್ಲಿ ವಿಧ್ವಂಸಕ ಜಾಲದ ರೂವಾರಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಇದರ ಬಗ್ಗೆ ಸುಳಿವು ನೀಡಿದ್ದು ಕಳೆದ ಆಗಸ್ಟ್ ಮೊದಲ ವಾರದಲ್ಲಿ ಪಂಜಾಬ್ ನಲ್ಲಿ ಪತ್ತೆಯಾಗಿದ್ದ ಟಿಫಿನ್ ಬಾಂಬ್ ಪ್ರಕರಣ. ಅಮೃತಸರದ ಬಳಿಯ ದಲೇಕ್ ಗ್ರಾಮದಲ್ಲಿ ಟಿಫಿನಲ್ಲಿ ತುಂಬಿಸಿಟ್ಟಿದ್ದ ಬಾಂಬ್ ಜೊತೆಗೆ ಐದು ಗ್ರೆನೇಡ್, 100 ಪಿಸ್ತೂಲ್ ಕ್ಯಾಟ್ರಿಜ್ ಭದ್ರತಾ ಪಡೆಗಳಿಗೆ ಸಿಕ್ಕಿತ್ತು. ಭಾರೀ ವಿಧ್ವಂಸಕ ಕೃತ್ಯಕ್ಕೆ ಹಾಕಿದ್ದ ಪ್ಲಾನ್ ಬಗ್ಗೆ ಮಾಹಿತಿ ತಿಳಿಯುತ್ತಲೇ ಪಂಜಾಬ್ ನಲ್ಲಿ ಹೈಎಲರ್ಟ್ ಮಾಡಲಾಗಿತ್ತು. ಅದರ ಜಾಡು ಹಿಡಿದು ಹೊರಟ ಪೊಲೀಸ್ ತಂಡಕ್ಕೆ ಮುಂಬೈ ಮೂಲದ ಶಂಕಿತ ಉಗ್ರರ ಸುಳಿವು ಸಿಕ್ಕಿತ್ತು.

ಇದೇ ಸುಳಿವು ಆಧರಿಸಿ ದೆಹಲಿ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ ಪೊಲೀಸರು, ಆರು ಮಂದಿಯನ್ನು ಬಲೆಗೆ ಕೆಡವಿದ್ದಾರೆ. ಬಂಧಿತರು ಪಾಕಿಸ್ಥಾನದ ಐಎಸ್ಐ ಏಜನ್ಸಿ ಮತ್ತು ಡಿ ಕಂಪನಿಯ ಅಂಡರ್ ವರ್ಲ್ಡ್ ಗ್ಯಾಂಗ್ ಒಂದೇ ಉದ್ದೇಶ ಇಟ್ಟುಕೊಂಡು ಜಾಲ ಹೆಣೆದಿರುವುದನ್ನು ಹೊರಗೆಡವಿದ್ದಾರೆ. ದೇಶದ ಪ್ರಮುಖ ನಗರಗಳಲ್ಲಿ ಗಣೇಶೋತ್ಸವ ಮತ್ತು ನವರಾತ್ರಿ ಸಂದರ್ಭಗಳಲ್ಲಿ ಭಾರೀ ವಿಧ್ವಂಸಕ ಕೃತ್ಯ ಎಸಗಲು ಟೆರರ್ ಪ್ಲಾನ್ ಆಗಿತ್ತು ಅನ್ನೋದನ್ನು ಬಂಧಿತರು ಬಾಯ್ಬಿಟ್ಟಿದ್ದು, ಪೊಲೀಸರ ಸಕಾಲಿಕ ಕಾರ್ಯಾಚರಣೆಯಲ್ಲಿ ಭಾರೀ ಆಪತ್ತು ತಪ್ಪಿದಂತಾಗಿದೆ.

The Maharashtra Anti-Terrorism Squad (ATS) today claimed that terror suspect Jaan Mohammad Sheikh, arrested along with five others by the Delhi Police, had links with the 'D-Company' about 20 years back. 'D-Company' is a term used to refer to the underworld crime syndicate controlled by fugitive don Dawood Ibrahim. The Delhi Police's Special Cell on Tuesday busted a Pakistan-organised terror module with the arrest of six men, including two Pak-ISI trained terrorists, officials had said.