ಬ್ರೇಕಿಂಗ್ ನ್ಯೂಸ್
17-09-21 04:52 pm Headline Karnataka News Network ದೇಶ - ವಿದೇಶ
ನವದೆಹಲಿ, ಸೆ. 17: ದೇಶದಲ್ಲಿ ಅರ್ಧ ದಿನದಲ್ಲೇ 1 ಕೋಟಿಗೂ ಅಧಿಕ ಕೊರೊನಾ ಲಸಿಕೆಯನ್ನು ವಿತರಣೆ ಮಾಡಲಾಗಿದೆ. ಇಂದು ಮಧ್ಯಾಹ್ನ 1-30ರವರೆಗೆ ದೇಶದಲ್ಲಿ ಸುಮಾರು 1 ಕೋಟಿಗೂ ಅಧಿಕ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ 71 ಜನ್ಮ ದಿನಾಚರಣೆ ಸಂದರ್ಭದಲ್ಲಿ 2 ಕೋಟಿ ಲಸಿಕೆ ನೀಡುವ ಗುರಿಯೊಂದಿಗೆ ದೇಶಾದ್ಯಂತ ನೀಡಲಾಗುತ್ತಿರುವ ಕೋವಿಡ್ ಲಸಿಕೆ ಪತ್ತೆಗಾಗಿ ಟಿಕ್ಕರ್ ಒಂದನ್ನು ಸರ್ಕಾರ ಸೇರ್ಪಡೆ ಮಾಡಿದೆ.
ಕೋವಿಡ್-19 ಸಾಂಕ್ರಾಮಿಕ ವಿರುದ್ಧ ದೇಶದಲ್ಲಿ ಲಸಿಕೆ ಹಾಕುವವರ ಅವಿರತ ಶ್ರಮವನ್ನು ಕೊಂಡಾಡುತ್ತಿದ್ದು, ನೈಜ ಸಮಯದಲ್ಲಿ ಲಸಿಕೆ ಹಾಕುವುದನ್ನು ತೋರಿಸಲು ನಾವು ಟಿಕ್ಕರ್ ವೊಂದನ್ನು ಸೇರಿಸಿದ್ದೇವೆ. ಪ್ರಸ್ತುತ ನಾವು ಪ್ರತಿ ನಿಮಿಷಕ್ಕೆ 42 ಸಾವಿರ ಅಥವಾ ಸೆಕೆಂಡ್ ಗೆ 700 ಲಸಿಕೆ ನೀಡಲು ಎದುರು ನೋಡುತ್ತಿರುವುದಾಗಿ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮುಖ್ಯಸ್ಥ ಆರ್ ಎಸ್ ಶರ್ಮಾ ಟ್ವೀಟ್ ಮಾಡಿದ್ದಾರೆ.
Celebrating the relentless efforts of India’s vaccinators against COVID-19, we have added a ticker to show vaccinations happening in near real-time. We are currently clocking over 42,000 vaccinations/minute or 700/second. Check new feature - https://t.co/YhG7gjKdEm #VaccineSeva pic.twitter.com/0nKWiqeZxd
— Dr. RS Sharma (@rssharma3) September 17, 2021
ಆಗಸ್ಟ್ 17 ರಂದು ಒಂದೇ ದಿನ 88.13 ಲಕ್ಷ ಡೋಸ್ ಲಸಿಕೆ ನೀಡಲಾಗಿದೆ. ಈವರೆಗೂ ಇದೇ ಅತ್ಯಂತ ಹೆಚ್ಚು ಲಸಿಕೆ ನೀಡಿದ ದಿನವಾಗಿತ್ತು. ಆದರೆ, ಇಂದು ಮಧ್ಯಾಹ್ನದವರೆಗೂ 1 ಕೋಟಿ ಲಸಿಕೆ ನೀಡಲಾಗಿದ್ದು, ದಿನದ ಅಂತ್ಯಕ್ಕೆ 2 ಕೋಟಿ ಡೋಸ್ ಗೂ ಅಧಿಕ ಲಸಿಕೆ ನೀಡುವ ನಿರೀಕ್ಷೆ ಹೊಂದಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ 71ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ಬಿಜೆಪಿ ವತಿಯಿಂದ 20 ದಿನಗಳ ಮೆಗಾ ಕೋವಿಡ್ ಲಸಿಕಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಇದು ಅಕ್ಟೋಬರ್ 7ರವರೆಗೆ ಮುಂದುವರೆಯಲಿದೆ. ಸೇವಾ ಮತ್ತು ಸಮರ್ಪಣಾ ಅಭಿಯಾನವಾಗಿ ಮೋದಿ ಜನ್ಮ ದಿನದಂದು ದೇಶಾದ್ಯಂತ ಕೋವಿಡ್-19 ಲಸಿಕಾ ಅಭಿಯಾನ ನಡೆಸುವಂತೆ ಬಿಜೆಪಿ ಕಾರ್ಯಕರ್ತರಿಗೆ ಸೂಚಿಸಿದೆ.
ಹಿಂದಿನ ಜಿಎಸ್‌ಟಿ ಸಭೆಯಲ್ಲಿ, ಕೋವಿಡ್ -19 ಔಷಧಿಗಳಾದ ರೆಮ್‌ಡೆಸಿವಿರ್ ಮತ್ತು ಆಮ್ಲಜನಕ ಕಾನ್ಸಂಟ್ರೇಟರ್ ಗಳು ಮತ್ತು ವೈದ್ಯಕೀಯ ಆಮ್ಲಜನಕದಂತಹ ಸರಕುಗಳಿಗೆ ತೆರಿಗೆ ದರವನ್ನು ಕಡಿತಗೊಳಿಸಲಾಗಿತ್ತು.
As the government raced to deliver a vaccination record on Prime Minister Narendra Modi's birthday today, the country clocked over 42,000 vaccinations a minute, a senior health official said. Vaccinations crossed one crore in the afternoon - for the fourth time in less than a month - signalling a bigger milestone by the end of the day.
11-09-25 10:11 pm
Bangalore Correspondent
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 10:42 pm
Mangaluru Correspondent
Mangalore, Harish Kumar: ಎರಡು ನಿಮಿಷದ ಆಜಾನ್ ನಿ...
11-09-25 09:38 pm
Mangalore Airport, Road, Accident: ಮಂಗಳೂರು ಏರ...
11-09-25 06:14 pm
Dharmasthala, YouTube, SIT: ಧರ್ಮಸ್ಥಳ ವಿರುದ್ಧ...
11-09-25 02:45 pm
ಬಿಜೆಪಿ ಬಗ್ಗೆ ಪುತ್ತಿಲ ಪರಿವಾರದ ಅಸಮಾಧಾನ ; ಭರವಸೆ...
11-09-25 01:40 pm
11-09-25 09:13 pm
Mangalore Correspondent
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm