ಬ್ರೇಕಿಂಗ್ ನ್ಯೂಸ್
19-09-21 09:39 pm Headline Karnataka News Network ದೇಶ - ವಿದೇಶ
ಚಂಡೀಗಢ, ಸೆ.19: ಚರಣ್ ಜಿತ್ ಸಿಂಗ್ ಚನ್ನಿ ಪಂಜಾಜ್ ರಾಜ್ಯದ ಮೊದಲ ದಲಿತ ಸಿಎಂ ಆಗಿ ಆಯ್ಕೆಯಾಗಿದ್ದಾರೆ. ಅಮರಿಂದರ್ ಸಿಂಗ್ ಸರಕಾರದಲ್ಲಿ ತಾಂತ್ರಿಕ ಶಿಕ್ಷಣ ಖಾತೆ ಸಚಿವರಾಗಿದ್ದ ಚರಣ್ ಜಿತ್ ಸಿಂಗ್ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಆಯ್ಕೆ ಮಾಡಿದ್ದು ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ರವಿದಾಸಿಯಾ ಎನ್ನುವ ಸಿಖ್ ಸಮುದಾಯದ ಚರಣ್ ಜಿತ್ ಸಿಂಗ್ ಸಿಖ್ ಧರ್ಮೀಯರಲ್ಲಿಯೇ ಅತಿ ಹಿಂದುಳಿದ ವರ್ಗಕ್ಕೆ ಸೇರಿದವರು. ಪಂಜಾಬ್ ರಾಜ್ಯದಲ್ಲಿ ಮೊದಲ ಬಾರಿಗೆ ದಲಿತ ವ್ಯಕ್ತಿಯೊಬ್ಬರು ಮುಖ್ಯಮಂತ್ರಿ ಸ್ಥಾನಕ್ಕೇರುತ್ತಿದ್ದಾರೆ. ಚರಣ್ ಜಿತ್, ಚಮ್ ಕೌರ್ ಸಾಹಿಬ್ ಮತ ಕ್ಷೇತ್ರದಲ್ಲಿ ಶಾಸಕರಾಗಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಘಟಕದ ರಾಜ್ಯಾಧ್ಯಕ್ಷರಾಗಿದ್ದ ಸುನಿಲ್ ಕುಮಾರ್ ಜಾಖರ್ ಸೇರಿದಂತೆ ಅಂಬಿಕಾ ಸೋನಿ, ನವಜೋತ್ ಸಿಂಗ್ ಸಿಧು ಹೆಸರು ಕೂಡ ಸಿಎಂ ಸ್ಥಾನಕ್ಕೆ ಕೇಳಿಬಂದಿತ್ತು. ಆದರೆ, ಕಾಂಗ್ರೆಸ್ ಹೈಕಮಾಂಡ್ ಅಚ್ಚರಿ ಎನ್ನುವಂತೆ ರಾಜ್ಯದಲ್ಲಿ 33 ಶೇ. ಮತಗಳನ್ನು ಹೊಂದಿರುವ ಹಿಂದುಳಿದ ವರ್ಗದ ಚರಣ್ ಜಿತ್ ಸಿಂಗ್ ಚನ್ನಿ ಅವರನ್ನು ಸಿಎಂ ಆಗಿ ಆಯ್ಕೆ ಮಾಡಿದೆ. ಜಾಟ್ ಸಮುದಾಯದ ನಾಯಕರಾಗಿರುವ ಸುನಿಲ್ ಕುಮಾರ್ ಜಾಖರ್ ಹಿಂದು ಧರ್ಮೀಯರಾಗಿದ್ದು, ರಾಜ್ಯದಲ್ಲಿ 38 ಶೇಕಡಾ ಹಿಂದು ಮತಗಳನ್ನು ಹೊಂದಿದ್ದಾರೆ. ಆದರೆ, ಸಿಖ್ ಧರ್ಮೀಯರು ರಾಜ್ಯದಲ್ಲಿ 62 ಶೇಕಡಾ ಇದ್ದಾರೆ. ಹೀಗಾಗಿ ಅಂಬಿಕಾ ಸೋನಿ ಅವರಿಗೆ ಮುಖ್ಯಮಂತ್ರಿಯಾಗಲು ಆಫರ್ ನೀಡಿದ್ದರೂ, ಅವರು ಸಿಖ್ ಧರ್ಮೀಯರೇ ಸಿಎಂ ಆಗಬೇಕೆಂದು ಮುಖ್ಯಮಂತ್ರಿ ಸ್ಥಾನವನ್ನು ನಿರಾಕರಿಸಿದ್ದರು ಎನ್ನಲಾಗುತ್ತಿದೆ. 1966ರಲ್ಲಿ ಪಂಜಾಬ್ ರಾಜ್ಯ ಘೋಷಣೆಯಾದ ಬಳಿಕ ಹಿಂದು ಧರ್ಮೀಯರು ಮುಖ್ಯಮಂತ್ರಿ ಸ್ಥಾನಕ್ಕೆ ಏರಿರಲಿಲ್ಲ.
ಸಿಎಂ ಸ್ಥಾನಕ್ಕೆ ಚರಣ್ ಜಿತ್ ಸಿಂಗ್ ಹೆಸರು ರಾಜ್ಯ ಕಾಂಗ್ರೆಸ್ ಪಾಲಿಗೆ ಅಚ್ಚರಿಯದ್ದಾಗಿದೆ. ಇಂದು ಮಧ್ಯಾಹ್ನ ಹೊತ್ತಿಗೆ ಸುಖ್ ಜಿಂದರ್ ಸಿಂಗ್ ರಾಂಧವ ಹೆಸರು ಸಿಎಂ ಸ್ಥಾನಕ್ಕೆ ಅಂತಿಮ ಆಗಿದೆ ಎನ್ನಲಾಗಿತ್ತು. ಆದರೆ, 2022ರ ಅಸೆಂಬ್ಲಿ ಚುನಾವಣೆ ದೃಷ್ಟಿ ಇರಿಸಿಕೊಂಡಿರುವ ಕಾಂಗ್ರೆಸ್ ದಲಿತ ಸಿಎಂ ಮಾಡುವ ಮೂಲಕ ಜಾತಿ ಟ್ರಂಪ್ ಕಾರ್ಡ್ ಮುಂದಿಟ್ಟಿದೆ. ಈ ಮೂಲಕ ಹಿಂದುಳಿತ, ದಲಿತ ವರ್ಗದ ಮತಗಳನ್ನು ಪಡೆದು ಮುಂದಿನ ಬಾರಿ ಅಧಿಕಾರ ಪಡೆಯಲು ಕಸರತ್ತು ನಡೆಸಿದೆ. ಅಮರಿಂದರ್ ಸಿಂಗ್ ಸುದೀರ್ಘ ಕಾಲದಲ್ಲಿ ಆಡಳಿತದಲ್ಲಿದ್ದರೂ ಜನರ ಮನ ಗೆಲ್ಲಲು ವಿಫಲವಾಗಿದ್ದರು. ಆಡಳಿತ ವಿರೋಧಿ ಅಲೆ ಇದೆಯೆಂಬ ಮಾಹಿತಿ ಅರಿತಿದ್ದ ಕಾಂಗ್ರೆಸ್, ಬಿಜೆಪಿ ಹಾದಿಯಲ್ಲೇ ನವಜೋತ್ ಸಿಂಗ್ ಸಿಧು ಮೂಲಕ ಮುಖ್ಯಮಂತ್ರಿ ಬದಲಾಯಿಸುವ ಆಟಕ್ಕೆ ಮುಂದಾಗಿತ್ತು. ಸಿಧು ಮತ್ತು ಅಮರಿಂದರ್ ಬಹಿರಂಗವಾಗೇ ಕಾದಾಟಕ್ಕೆ ಇಳಿದಿದ್ದರು. ಆದರೆ, ಕಾಂಗ್ರೆಸ್ ಹೈಕಮಾಂಡ್ ಅಮರಿಂದರ್ ಸಿಂಗ್ ಪರವಾಗಿ ನಿಲ್ಲದೆ ಸಿಧು ಪರ ಒಲವು ತೋರಿದ್ದು ಮುಂದಿನ ಬಾರಿ ಸಿಧುಗೆ ಪಟ್ಟ ಕಟ್ಟುವ ಸುಳಿವು ನೀಡಿದ್ದಾರೆ.
ತೀರಾ ಬಡ ಕುಟುಂಬದಲ್ಲಿ ಹುಟ್ಟಿದ್ದ ಚರಣ್ ಜಿತ್
ಚಮಕೌರ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಚರಣ್ ಜಿತ್ ಸಿಂಗ್ 2015-16ರಲ್ಲಿ ವಿಧಾನಸಭೆಯಲ್ಲಿ ವಿಪಕ್ಷ ನಾಯಕರಾಗಿದ್ದರು. 2017ರಲ್ಲಿ ಅಮರಿಂದರ್ ಸಿಂಗ್ ಸರಕಾರ ಬಂದಾಗ, ತಾಂತ್ರಿಕ ಶಿಕ್ಷಣ ಸಚಿವರಾಗಿದ್ದರು. ಶಾಸಕ ಆಗೋದಕ್ಕೂ ಮುನ್ನ ಖರಾರ್ ಮಹಾನಗರ ಪಾಲಿಕೆಯಲ್ಲಿ ಮೂರು ಬಾರಿ ಗೆದ್ದು ಅಲ್ಲಿ ಅಧ್ಯಕ್ಷರೂ ಆಗಿದ್ದರು. 2007ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ತೀರ ಬಡ ಕುಟುಂಬದಲ್ಲಿ ಜನಿಸಿದ್ದ ಚರಣ್ ಜಿತ್ ಸಿಂಗ್ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಶಾಲೆಯಲ್ಲಿ ಪೂರೈಸಿದ್ದರು.
ಚರಣ್ ತಂದೆ ಹರ್ಸಾ ಸಿಂಗ್ ಕುಟುಂಬವನ್ನು ಬಡತನದಿಂದ ಮೇಲೆ ತರಲು ತುಂಬ ಶ್ರಮ ಪಟ್ಟಿದ್ದರು. ಮಲೇಶ್ಯಾಕ್ಕೆ ತೆರಳಿ ಅಲ್ಲಿ ಒಂದಷ್ಟು ವರ್ಷ ಕೆಲಸ ಮಾಡಿ, ಹಿಂತಿರುಗಿ ಬಂದು ಖರಾರ್ ನಗರದಲ್ಲಿ ಟೆಂಟ್ ಹೌಸ್ ಬಿಸಿನೆಸ್ ಆರಂಭಿಸಿದ್ದರು. ಚನ್ನಿ ಬಾಲ್ಯ ಕಾಲದಲ್ಲಿ ತಂದೆಯ ಜೊತೆಗೆ ಕೆಲಸ ಮಾಡುತ್ತಾ ಟೆಂಟ್ ಬಾಯ್ ಆಗಿಯೂ ಕಾಲ ಕಳೆದಿದ್ದರು. ನಗರದ ಜನ ಚರಣ್ ಜಿತ್ ನನ್ನು ಟೆಂಟ್ ಬಾಯ್ ಅಂತಲೇ ಕರೆಯುತ್ತಿದ್ದರು. ನಗರದಲ್ಲಿ ವ್ಯವಹಾರ ಇದ್ದರೂ, ಹರ್ಸ ಸಿಂಗ್ ತುಂಬ ಜನಾನುರಾಗಿಯಾಗಿದ್ದರು. ತಂದೆಯ ನೆರಳಲ್ಲೇ ಮಗ ಚರಣ್ ಜಿತ್ ರಾಜಕೀಯ ಪ್ರವೇಶ ಮಾಡಿದ್ದ.
Punjab Congress president Navjot Singh Sidhu on Sunday lauded Congress’s move to replace Amarinder Singh with Charanjit Singh Channi, who will be the first Dalit CM of Punjab. Sidhu tweeted, “Historic !! Punjab’s first Dalit CM-Designate … Will be written with Golden letters in History. A tribute to the spirit of the Constitution and the Congress !!” A day after Captain Amarinder Singh stepped down, Charanjit Singh Channi was chosen as the next Punjab Chief Minister. Channi, who will be the first Dalit CM of Punjab, will take oath at 11 am on Monday. “We have presented our stance, unanimously supported by party MLAs, before the Governor. Oath-taking ceremony will be held at 11 am tomorrow,” Channi was quoted as saying by news agency ANI.
26-11-24 10:46 pm
Bangalore Correspondent
Shivamogga, Monkey fever, Dinesh Gundu Rao: ಮ...
26-11-24 10:23 pm
BJP, Vijayendra: ಉಪ ಚುನಾವಣೆ ಸೋಲು ; ಪಕ್ಷದ ಕಾರ್...
26-11-24 06:56 pm
MLA Gaviyappa, Congress: ಗ್ಯಾರಂಟಿ ಸ್ಕೀಂನಿಂದಾಗ...
26-11-24 06:11 pm
Davanagere News, Heart Attack: ಗಂಡ ಹೃದಯಾಘಾತಕ್...
26-11-24 11:52 am
26-11-24 09:43 pm
HK News Desk
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
26-11-24 11:23 pm
Udupi Correspondent
Mangalore, Suicide, Belthangady: ಬೆಳ್ತಂಗಡಿ ;...
26-11-24 10:58 pm
Mangalore Baby, Lady goschen Hospital: ಲೇಡಿಗೋ...
26-11-24 10:50 pm
Tamil Actor Surya, Jyothika, Udupi temple: ಕೊ...
26-11-24 08:23 pm
Mangalore, Police Anupam Agarwal IPS, DYFI; ಸ...
26-11-24 05:37 pm
26-11-24 03:10 pm
Mangalore Correspondent
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm
Rowdy sheeter Dawood, Mangalore Crime, Police...
23-11-24 10:49 am
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm