ದೇಶದಲ್ಲಿ ಶುರುವಾಗಿದೆ ಡೆಂಗ್ಯೂ ಅಟ್ಯಾಕ್ ; 11 ರಾಜ್ಯಗಳಲ್ಲಿ ಹೊಸ ಡೆಂಗ್ಯೂ ಜ್ವರದ ಪ್ರಕರಣ

19-09-21 10:38 pm       Headline Karnataka News Network   ದೇಶ - ವಿದೇಶ

ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಅತಿಹೆಚ್ಚು ಅಪಾಯಕಾರಿ ಎಂದು ಗುರುತಿಸಲಾಗಿರುವ ಡೆಂಗ್ಯೂ ಸೋಂಕಿನ ಪ್ರಕರಣಗಳು ದೇಶದ 11 ರಾಜ್ಯಗಳಲ್ಲಿ ವರದಿಯಾಗಿವೆ.

ನವದೆಹಲಿ, ಸಪ್ಟೆಂಬರ್ 19 : ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಅತಿಹೆಚ್ಚು ಅಪಾಯಕಾರಿ ಎಂದು ಗುರುತಿಸಲಾಗಿರುವ ಡೆಂಗ್ಯೂ ಸೋಂಕಿನ ಪ್ರಕರಣಗಳು ದೇಶದ 11 ರಾಜ್ಯಗಳಲ್ಲಿ ವರದಿಯಾಗಿವೆ. ಈ ಹೊಸ ಸೋಂಕಿತ ಪ್ರಕರಣಗಳ ಪತ್ತೆಗೆ ಜ್ವರ ಪತ್ತೆ ಸಹಾಯವಾಣಿ, ಪರೀಕ್ಷಾ ಕಿಟ್ ಹಾಗೂ ಅಗತ್ಯ ಔಷಧಿಗಳನ್ನು ಸಿದ್ಧಪಡಿಸಿಕೊಳ್ಳಿರಿ ಎಂದು ಕೇಂದ್ರ ತಂಡ ಎಚ್ಚರಿಕೆ ನೀಡಿದೆ.

ಕೊವಿಡ್-19 ಸೋಂಕಿನ ಕುರಿತು ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸೋಂಕಿನ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸುವಂತೆ ಸೂಚಿಸಲಾಗಿದೆ. ಮುಂಬರುವ ಸಾಲು ಸಾಲು ಹಬ್ಬಗಳ ಹಿನ್ನೆಲೆ ಸಾರ್ವಜನಿಕವಾಗಿ ಜನರು ಒಂದು ಕಡೆ ಸೇರದಂತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಕ್ಷಿಪ್ರ ಪ್ರತಿಕ್ರಿಯೆ ತಂಡಗಳನ್ನು ರವಾನಿಸುವಂತೆ ಡೆಂಗ್ಯೂ ರೋಗದ ಹೊಸ ತಳಿಯು ವರದಿಯಾದ ರಾಜ್ಯಗಳು ಉನ್ನತ ಮಟ್ಟದ ಸಭೆಯಲ್ಲಿ ಪ್ರಸ್ತಾಪಿಸಿವೆ. ಸೆರೋಟೈಪ್-2 ತಳಿಯ ಡೆಂಗ್ಯೂ ಜ್ವರವು ಹೊಸ ರೀತಿಯ ಅಪಾಯ ಮತ್ತು ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಲಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಎಚ್ಚರಿಸಿದೆ. ಇದರ ಮಧ್ಯೆ ಡೆಂಗ್ಯೂ ರೋಗದ ಲಕ್ಷಣಗಳು, ರೋಗ ಹರಡುವಿಕೆ ನಿಯಂತ್ರಣಕ್ಕೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಪ್ರಚಾರ ಮಾಡುವಂತೆ ರಾಜ್ಯಗಳಿಗೂ ಸೂಚಿಸಲಾಗಿದೆ.

11 ರಾಜ್ಯಗಳಲ್ಲಿ ಹೊಸ ಡೆಂಗ್ಯೂ ಜ್ವರದ ಪ್ರಕರಣ;

ಭಾರತದ 11 ರಾಜ್ಯಗಳಲ್ಲಿ ಸೆರೋಟೈಪ್-2 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಆಂಧ್ರ ಪ್ರದೇಶ, ಗುಜರಾತ್, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ, ತಮಿಳುನಾಡು ಮತ್ತು ತೆಲಂಗಾಣದಲ್ಲಿ ಈ ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಮೊದಲ ಆಗಸ್ಟ್ ಹಾಗೂ ಸೆಪ್ಟೆಂಬರ್ 10ರಂದು ಈ ರಾಜ್ಯಗಳಿಗೆ ರೋಗ ನಿಯಂತ್ರಿಸಲು ಸಲಹಾ ಸೂಚನೆಗಳನ್ನು ಹೊರಡಿಸಿತ್ತು.

The Centre has asked 11 states reporting cases of serotype - II dengue, which is a more detrimental form of the disease, to ensure implementation of preventive measures ahead of the festive season and spread necessary awareness among people about the virus. The 11 states that are reeling under DEN-2 virus are Andhra Pradesh, Gujarat, Karnataka, Kerala, Madhya Pradesh, Uttar Pradesh, Maharashtra, Odisha, Rajasthan, Tamil Nadu, and Telangana.