ಬ್ರೇಕಿಂಗ್ ನ್ಯೂಸ್
24-09-21 01:28 pm Shreeraksha, Boldsky ದೇಶ - ವಿದೇಶ
'ಹೆಣ್ಣು ಮಗುವಿಲ್ಲದ ಮನೆ, ಚಂದ್ರನಿಲ್ಲದ ಬಾನಿನಂತೆ' ಎಂಬ ಮಾತನ್ನು ಕೇಳಿರುತ್ತೀರಿ. ಈ ಒಂದು ವಾಕ್ಯವೇ ಸಾಕು, ಹೆಣ್ಣು ಮಗುವಿನ ಅಥವಾ ಪುತ್ರಿಯರ ಮಹತ್ವವನ್ನು ಸಾರಲು. ಇಂತಹ ಪುತ್ರಿಯರಿಗಾಗಿ ಒಂದು ದಿನವನ್ನು ಮೀಸಲಿಡಲಾಗಿದೆ. ಅದೇ ಅಂತಾರಾಷ್ಟ್ರೀಯ ಪುತ್ರಿಯರ ದಿನ.
ವಿವಿಧ ದೇಶಗಳಲ್ಲಿ ವಿಭಿನ್ನ ದಿನಾಂಕದಂದು ಪುತ್ರಿಯರ ದಿನವನ್ನ ಆಚರಣೆ ಮಾಡಲಾಗುತ್ತದೆ. ಭಾರತದಲ್ಲಿ ಸೆಪ್ಟೆಂಬರ್ ತಿಂಗಳ ನಾಲ್ಕನೇ ಭಾನುವಾರ ಅಂತಾರಾಷ್ಟ್ರೀಯ ಪುತ್ರಿಯರ ದಿನ. ಈ ವರ್ಷ ಅಂದರೆ 2021ರಲ್ಲಿ ಅಂತಾರಾಷ್ಟ್ರೀಯ ಮಗಳ ದಿನ ಸೆಪ್ಟೆಂಬರ್ 26ರಂದು ಬಂದಿದೆ.
ಯಾಕೆ ಈ ಆಚರಣೆ?:
ಗಂಡಾಗಲಿ, ಹೆಣ್ಣಾಗಲಿ ಮಕ್ಕಳೆಂದರೆ ದೇವರು ನಮಗೆ ಕೊಟ್ಟ ಅಮೂಲ್ಯ ಉಡುಗೊರೆಯಾಗಿದೆ. ಅದರಲ್ಲೂ ಹೆಚ್ಚಿನವರು ಹೊರೆಯಾಗಿ ಕಾಣುವ ಹೆಣ್ಣು ಮಗು, ಬದುಕಿನ ಅವಿಭಾಜ್ಯ ಅಂಗವೆಂದರೆ ತಪ್ಪಾಗಲ್ಲ. ಮಗಳಾಗಿ, ಅಕ್ಕ-ತಂಗಿಯಾಗಿ, ಮಡದಿಯಾಗಿ, ಕೊನೆಗೆ ತಾನೂ ತಾಯಿಯಾಗುವ ಅಭೂತಪೂರ್ವ ಶಕ್ತಿ ಹೆಣ್ಣು. ಹೇಗೆ ಅಮ್ಮಂದಿರ ದಿನ, ಅಪ್ಪಂದಿರ ದಿನವನ್ನು ಆ ಸುಂದರ ಸಂಬಂಧದ ಮಹತ್ವ ತಿಳಿಸಲು ಆಚರಣೆ ಮಾಡಲಾಗುತ್ತದೆಯೋ, ಅದೇ ರೀತಿ ಪುತ್ರಿಯರ ಮಹತ್ವ ಸಾರಲು, ಬದುಕಲ್ಲಿ ಅವರೆಷ್ಟು ವಿಶೇಷ ಎಂಬುದು ತಿಳಿಸಿಕೊಡಲು ಈ ದಿನವನ್ನು ಆಚರಣೆ ಮಾಡಲಾಗುತ್ತದೆ.
ಇತಿಹಾಸ:
ಮನೆಯಲ್ಲಿ ಮಕ್ಕಳಿದ್ದರೆ ಸಾಕು, ಅದೇ ಒಂದು ರೀತಿಯ ಹಬ್ಬ, ಅದು ಹೆಣ್ಣಿರಲಿ ಅಥವಾ ಗಂಡಿರಲಿ, ಆದರೆ ಇಂದಿನ ಪಿತೃಪ್ರಧಾನ ಸಮಾಜ ವ್ಯವಸ್ಥೆಯಲ್ಲಿ ಹೆಣ್ಣು ಮಕ್ಕಳನ್ನು ಗಂಡು ಮಕ್ಕಳಿಗಿಂತ ಕೀಳೆಂಬ ದೃಷ್ಟಿಯಲ್ಲಿ ನೋಡುತ್ತಿರುವುದು ವಿಪರ್ಯಾಸವೇ ಸರಿ. ಇತ್ತೀಚಿನ ದಿನಗಳಲ್ಲಿ ಇಂತಹವರ ಪ್ರಮಾಣ ಕಡಿಮೆಯಾದರೂ, ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಇನ್ನೂ ಈ ತಾರತಮ್ಯ ನಡೆಯುತ್ತಲೇ ಇದೆ. ಆದ್ದರಿಂದ ಈ ಲಿಂಗ ತಾರತಮ್ಯವನ್ನು ಹೋಗಲಾಡಿಸಿ ಸಮಾನತೆಯನ್ನು ಸಾರುವ ದೃಷ್ಟಿಯಿಂದ ವಿವಿಧ ದೇಶಗಳು ಮಗಳ ದಿನವನ್ನು ರಾಷ್ಟ್ರೀಯ ಉತ್ಸವವಾಗಿ ಆಚರಿಸಲು ನಿರ್ಧಾರ ಮಾಡಿದ್ದವು. ಸರಕಾರ ಮತ್ತು ಕಾನೂನಿನ ಮುಂದೆ ಪ್ರತಿ ನಾಗರಿಕ ಸರಿಸಮಾನ ಎಂಬುದನ್ನು ಪ್ರತಿಯೊಬ್ಬರಿಗೆ ಮನವರಿಕೆ ಮಾಡಿಸುವುದು ಇದರ ಉದ್ದೇಶ.
ಮಹತ್ವವೇನು?:
ಮಗಳ ಪಾತ್ರ, ವಿಶೇಷವಾಗಿ ಕುಟುಂಬ ಸದಸ್ಯರ ನಡುವಿನ ಸಂಬಂಧವನ್ನು ಕಾಪಾಡಿಕೊಳ್ಳುವಲ್ಲಿ ಗಮನಾರ್ಹವಾಗಿದೆ. ಕೆಲವು ಕುಟುಂಬಗಳಲ್ಲಿ, ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳೇ ಬೇಕೆಂದು ಬಯಸುವುದುಂಟು, ಇದು ಶಿಶು ಹತ್ಯೆಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಆದರೆ ಈ ಆಚರಣೆ ವರ್ಷದಿಂದ ವರ್ಷಕ್ಕೆ ಪರಿಣಾಮಕಾರಿಯಾಗುತ್ತಿದ್ದು, ಮೌಢ್ಯ, ಪೂರ್ವಗ್ರಹಗಳನ್ನು ಬದಿಗೆ ಸರಿಸುತ್ತ ಕಾಲ ಹೇಗೆ ಬದಲಾಗುತ್ತಿದೆ ಎಂಬುದನ್ನು ತೋರಿಸಿಕೊಡುವಲ್ಲಿ ಯಶಸ್ವಿಯಾಗಿದೆ. ಹೆಣ್ಣುಮಕ್ಕಳಿರುವ ಕುಟುಂಬಗಳು ಈ ದಿನವನ್ನು ಸಂತೋಷದಿಂದ ಆಚರಿಸುತ್ತಾರೆ.
ಆಚರಣೆ ಹೇಗೆ?
ತಮ್ಮ ಬದುಕಿನ ಸಂತೋಷವಾದ ಪುತ್ರಿಯರ ದಿನವನ್ನು ತಮಗಿಷ್ಟ ಬಂದಂತೆ ಆಚರಿಸಲಾಗುತ್ತದೆ. ಈ ದಿನ ರಜಾದಿನವಾದ ಭಾನುವಾರವಾಗಿರುವುದರಿಂದ ಪುತ್ರಿಯರು ಮತ್ತು ಪೋಷಕರು ಜತೆಗೂಡಿ ಸಂಭ್ರಮದಿಂದ ಆಚರಿಸುತ್ತಾರೆ. ಇದು ಕುಟುಂಬದಿಂದ ಕುಟುಂಬಕ್ಕೆ ಭಿನ್ನವಾಗಿದ್ದು ಪುತ್ರಿ ಮತ್ತು ಪೋಷಕರ ನಡುವೆ ಎಂತಹ ಅನುಬಂಧವಿದೆ ಎಂಬುದರ ಮೇಲೆ ನಿರ್ಧರಿತವಾಗುತ್ತದೆ. ಕೆಲವರು ಕುಟುಂಬದ ದೊಡ್ಡ ಹಬ್ಬವಾಗಿ ಇದನ್ನು ಆಚರಿಸಬಹುದು. ದೂರದಲ್ಲಿರುವ ಪುತ್ರಿಯರಿಗೆ ಗ್ರೀಟಿಂಗ್ ಕಾರ್ಡ್ , ಅದರ ಜತೆಗೊಂಡು ಉಡುಗೊರೆ ಕಳಿಸಬಹುದು. ಜೊತೆಗಿರುವ ಮಗಳಿಗೆ ಆಕೆಗಿಷ್ಟವಾದುದನ್ನು ಕೊಡಿಸಬಹುದು. ಪಿಕ್‌ನಿಕ್‌ಗೆ ಕರೆದೊಯ್ಯಬಹುದು ಅಥವಾ ಮಗಳ ಇಷ್ಟದಂತೆ ಈ ದಿನವನ್ನು ಆಚರಿಸಬಹುದು.
26-11-24 10:46 pm
Bangalore Correspondent
Shivamogga, Monkey fever, Dinesh Gundu Rao: ಮ...
26-11-24 10:23 pm
BJP, Vijayendra: ಉಪ ಚುನಾವಣೆ ಸೋಲು ; ಪಕ್ಷದ ಕಾರ್...
26-11-24 06:56 pm
MLA Gaviyappa, Congress: ಗ್ಯಾರಂಟಿ ಸ್ಕೀಂನಿಂದಾಗ...
26-11-24 06:11 pm
Davanagere News, Heart Attack: ಗಂಡ ಹೃದಯಾಘಾತಕ್...
26-11-24 11:52 am
26-11-24 09:43 pm
HK News Desk
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
26-11-24 11:23 pm
Udupi Correspondent
Mangalore, Suicide, Belthangady: ಬೆಳ್ತಂಗಡಿ ;...
26-11-24 10:58 pm
Mangalore Baby, Lady goschen Hospital: ಲೇಡಿಗೋ...
26-11-24 10:50 pm
Tamil Actor Surya, Jyothika, Udupi temple: ಕೊ...
26-11-24 08:23 pm
Mangalore, Police Anupam Agarwal IPS, DYFI; ಸ...
26-11-24 05:37 pm
26-11-24 03:10 pm
Mangalore Correspondent
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm
Rowdy sheeter Dawood, Mangalore Crime, Police...
23-11-24 10:49 am
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm