ಬ್ರೇಕಿಂಗ್ ನ್ಯೂಸ್
26-09-21 09:54 pm Headline Karnataka News Network ದೇಶ - ವಿದೇಶ
ಮುಂಬೈ, ಸೆ.26: ಮಾನ್ಯಾವರ್ ಬ್ರಾಂಡ್ ಬಟ್ಟೆಗಳ ಜಾಹೀರಾತಿನಲ್ಲಿ ಹಿಂದುಗಳ ಸಾಂಪ್ರದಾಯಿಕ ಕನ್ಯಾದಾನ ವಿಧಿಯನ್ನು ಬಳಸಿಕೊಂಡಿದ್ದನ್ನು ವಿರೋಧಿಸಿ ಹಿಂದು ಸಂಘಟನೆಗಳ ಕಾರ್ಯಕರ್ತರು ಬಟ್ಟೆ ಮಳಿಗೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ವೇದಾಂತ್ ಫ್ಯಾಶನ್ಸ್ ಲಿಮಿಟೆಡ್ ಗೆ ಸೇರಿದ ಮಾನ್ಯಾವರ್ ಬ್ರಾಂಡಿನ ಬಟ್ಟೆಗಳ ಪ್ರಚಾರಕ್ಕೆ ಕನ್ಯಾದಾನ ವಿಧಿಯನ್ನು ಜಾಹೀರಾತು ರೂಪದಲ್ಲಿ ಬಳಕೆ ಮಾಡಲಾಗಿತ್ತು. ನವಿ ಮುಂಬೈನ ವಾಶಿ ಏರಿಯಾದಲ್ಲಿ ಬಟ್ಟೆ ಮಳಿಗೆಯ ಮುಂದೆ ಹಿಂದು ಸಂಘಟನೆಗಳ ಕಾರ್ಯಕರ್ತರು ಸೇರಿ ಪ್ರತಿಭಟನೆ ನಡೆಸಿದ್ದಾರೆ.

ಹಿಂದು ಜನಜಾಗೃತಿ ಸಮಿತಿ ಹೆಸರಲ್ಲಿ ಪ್ಲೇಕಾರ್ಡ್ ಹಿಡಿದು ಘೋಷಣೆ ಕೂಗಿದ ಪ್ರತಿಭಟನಾಕಾರರು ಕೂಡಲೇ ಜಾಹೀರಾತನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಈ ಸಂದರ್ಭ ಮಾತನಾಡಿದ ಡಾ.ಉದಯ್ ಧೂರಿ, ಈ ರೀತಿ ಹಿಂದುಗಳ ಮದುವೆ ಸಂದರ್ಭದಲ್ಲಿ ನಡೆಸುವ ಕನ್ಯಾದಾನ ವಿಧಿಯನ್ನು ಜಾಹೀರಾತು ಪ್ರಚಾರಕ್ಕೆ ಬಳಸಿಕೊಂಡಿದ್ದು ತಪ್ಪು. ಈ ಮೂಲಕ ಕನ್ಯಾದಾನವನ್ನು ಜನರಿಗೆ ತಪ್ಪಾಗಿ ಬಿಂಬಿಸಲಾಗಿದೆ. ಇದರಿಂದ ಹಿಂದುಗಳ ಭಾವನೆಗೆ ಘಾಸಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಬಟ್ಟೆ ಮಳಿಗೆಯ ಕಂಪನಿಯವರು ಬೇಷರತ್ ಕ್ಷಮೆ ಕೇಳಬೇಕು. ಅಲ್ಲದೆ, ಜಾಹೀರಾತನ್ನೂ ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಜನರು ಕೂಡ ಕಂಪನಿಯವರು ಕ್ಷಮೆ ಕೇಳೋ ವರೆಗೂ ಮಾನ್ಯಾವರ್ ಬಟ್ಟೆಗಳನ್ನು ಬಹಿಷ್ಕರಿಸಬೇಕು ಎಂದು ಕರೆ ನೀಡಿದ್ದಾರೆ.
A pro-Hindu outfit staged a protest outside the showroom of a clothing brand in Navi Mumbai against its advertisement featuring the marriage ritual of 'kanyadaan', claiming that it hurt religious sentiments of the community.
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
05-10-26 08:56 pm
HK News Staffer
ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆ ; ಲವ್ ಜ...
05-10-26 01:49 pm
ನಾನು ಸಾವಿಗೆ ಅಂಜಲ್ಲ, ವಿಮಾನ ಪತನವೇ ಉದ್ದೇಶವಾಗಿತ್ತ...
05-10-26 11:40 am
Ramesh Chennithala: ಕೇರಳದಲ್ಲಿ ಪಿಡಬ್ಲ್ಯೂಡಿ ರಸ್...
04-10-26 07:07 pm
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
05-10-26 10:53 pm
Mangaluru Staffer
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
05-10-26 08:26 pm
HK News Staffer
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm
Udupi News, Indrali Railway Station, Nizamudd...
05-10-26 12:28 pm
Belthangady News, Banakal Accident, Mudigere...
05-10-26 10:49 am
bantwal rain: ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಅಬ್...
05-10-26 10:04 am