ಅಫ್ಘನ್ನಲ್ಲಿ ಜನರು ಗಡ್ಡ ಬೋಳಿಸುವಂತಿಲ್ಲ ; ಇಸ್ಲಾಂ ಹೆಸರಲ್ಲಿ ತಾಲಿಬಾನಿಗಳ ಫತ್ವಾ

28-09-21 11:28 am       Headline Karnataka News Network   ದೇಶ - ವಿದೇಶ

ಇಸ್ಲಾಮಿಕ್‌ ಕಾನೂನು ಹೆಸರಲ್ಲಿ ಅಫ್ಘಾನಿಸ್ತಾನದ ಜನರು ಸೆಲೂನ್ ಗಳಲ್ಲಿ ಗಡ್ಡ ಟ್ರಿಮ್‌ ಮಾಡುವುದಾಗಲೀ,  ಬೋಳಿಸುವುದಾಗಲಿ ಮಾಡುವಂತಿಲ್ಲ ಎಂದು ಫತ್ವಾ ಹೊರಡಿಸಿದ್ದಾರೆ.

ಕಾಬೂಲ್, ಸೆ.28: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಷರಿಯಾ ಕಾನೂನಿನಡಿ ಆಡಳಿತ ನಡೆಸಲು ಮುಂದಾಗಿದ್ದಾರೆ. ಇಸ್ಲಾಮಿಕ್‌ ಕಾನೂನು ಹೆಸರಲ್ಲಿ ಅಫ್ಘಾನಿಸ್ತಾನದ ಜನರು ಸೆಲೂನ್ ಗಳಲ್ಲಿ ಗಡ್ಡ ಟ್ರಿಮ್‌ ಮಾಡುವುದಾಗಲೀ,  ಬೋಳಿಸುವುದಾಗಲಿ ಮಾಡುವಂತಿಲ್ಲ ಎಂದು ಫತ್ವಾ ಹೊರಡಿಸಿದ್ದಾರೆ.

ಕಾಬೂಲ್‌ ಹಾಗೂ ಹೆಲ್ಮಂಡ್‌ ಪ್ರಾಂತ್ಯಗಳಲ್ಲಿ ಉಗ್ರರು ಇಂತಹ ಆದೇಶ ಹೊರಡಿಸಿದ್ದಾರೆ. ಗಡ್ಡ ಬೋಳಿಸುವುದು ಇಸ್ಲಾಮಿಕ್‌ ಕಾನೂನಿಗೆ ವಿರುದ್ಧವಾಗಿದೆ. ಹಾಗಾಗಿ ಸಲೂನ್‌ ಮಾಲೀಕರು ಇನ್ನು ಮುಂದೆ ಯಾವುದೇ ಗ್ರಾಹಕರ ಗಡ್ಡ ಬೋಳಿಸುವಂತಿಲ್ಲ, ಟ್ರಿಮ್‌ ಮಾಡುವಂತಿಲ್ಲ. ಆದೇಶ ಪಾಲನೆ ಆಗದಿದ್ದರೆ ಶಿಕ್ಷೆ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ. 

ದೇಶದಲ್ಲಿ ತಾಲಿಬಾನಿಗಳು ಆಡಳಿತ ಹಿಡಿಯುತ್ತಲೇ ದೇಶ ಬಿಟ್ಟು ಹೋಗುತ್ತಿದ್ದ ಜನರಲ್ಲಿ ತಾವು ಹಿಂದಿನ ರೀತಿ ಆಡಳಿತ ಮಾಡುವುದಿಲ್ಲ. ಜನರ ಮೇಲೆ ಕರುಣೆ ತೋರುತ್ತೇವೆ. ಉತ್ತಮ ಆಡಳಿತ ನೀಡಲಾಗುವುದು ಎಂದು ಸರಕಾರ ರಚಿಸುವುದಕ್ಕೂ ಮುನ್ನ ತಾಲಿಬಾನ್ ನಾಯಕರು ಹೇಳಿಕೊಂಡಿದ್ದರು. ಆದರೆ, ಸರಕಾರ ರಚಿಸಿದ ಬಳಿಕ ತಮ್ಮ ನಿಜ ರೂಪ ತೋರಿಸುತ್ತಿದ್ದಾರೆ. 

ನರಕಸದೃಶ ವಾತಾವರಣ, ಜನರ ವಲಸೆ 

ತಾಲಿಬಾನ್‌ ಉಗ್ರರ ಅಟ್ಟಹಾಸ ಮುಂದುವರಿದ ಕಾರಣ ದೇಶದಲ್ಲಿ ನರಕ ಸದೃಶ ವಾತಾವರಣ ಸೃಷ್ಟಿಯಾಗಿದ್ದು, ಕಳೆದ ಕೆಲವು ವಾರಗಳಲ್ಲಿ ಸಾವಿರಾರು ಜನ ಬೇರೆ ದೇಶಕ್ಕೆ ವಲಸೆ ತೆರಳಿದ್ದಾರೆ. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಉದ್ಯೋಗದಿಂದ ವಜಾ, ಭೀತಿಯ ವಾತಾವರಣ, ನಿರುದ್ಯೋಗ ಸೇರಿ ಹಲವು ಕಾರಣಗಳಿಂದಾಗಿ ಜನ ಬೇರೆ ದೇಶಕ್ಕೆ ತೆರಳಿದ್ದಾರೆ. ಇವರಲ್ಲಿ ಹೆಚ್ಚಿನ ಜನ ಇರಾನ್‌ಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

"The Taliban have banned stylish hairstyles and shaving beards in Helmand province in southern Afghanistan," The The Frontier Post reported citing the Taliban's letter.