ಬ್ರೇಕಿಂಗ್ ನ್ಯೂಸ್
01-10-21 01:37 pm Headline Karnataka News Network ದೇಶ - ವಿದೇಶ
ನವದೆಹಲಿ, ಅ.1: ಸ್ವಾತಂತ್ರ್ಯ ಕಾಲದಿಂದಲೂ ಸರಕಾರದ ತೆಕ್ಕೆಯಲ್ಲಿದ್ದ ಏರ್ ಇಂಡಿಯಾ ವಿಮಾನ ಸಂಸ್ಥೆಯನ್ನು ಟಾಟಾ ಸನ್ಸ್ ಕಂಪನಿಗೆ ವಹಿಸಲು ವೇದಿಕೆ ರೆಡಿಯಾಗಿದೆ. ಎಲ್ಲವೂ ಅಂದ್ಕೊಂಡಂತೇ ಆದಲ್ಲಿ ಡಿಸೆಂಬರ್ ವೇಳೆಗೆ ಏರ್ ಇಂಡಿಯಾ ಮತ್ತೆ ಟಾಟಾ ಏರ್ ಲೈನ್ಸ್ ಆಗಲಿದೆ.
ಬಿಡ್ಡಿಂಗ್ ಪ್ರಕ್ರಿಯೆ ಮುಗಿದಿದ್ದು, ಸದ್ಯದಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಷಾ ನೇತೃತ್ವದಲ್ಲಿ ನಡೆಯುವ ಸಂಪುಟ ಸಭೆಯಲ್ಲಿ ಏರ್ ಇಂಡಿಯಾವನ್ನು ಅಧಿಕೃತವಾಗಿ ಟಾಟಾ ಕಂಪನಿಯ ತೆಕ್ಕೆಗೆ ನೀಡುವ ಘೋಷಣೆಯನ್ನು ಮಾಡಲಿದ್ದಾರೆ. ಏರ್ ಇಂಡಿಯಾವನ್ನು ತಮ್ಮ ವಶಕ್ಕೆ ಪಡೆಯಲು ಟಾಟಾ ಸನ್ಸ್ ಮತ್ತು ಸ್ಪೈಸ್ ಜೆಟ್ ಮುಂದಾಗಿದೆ. ಆದರೆ, ಟಾಟಾ ಕಂಪನಿಯ ಬಿಡ್ಡಿಂಗ್ ಹೆಚ್ಚಿದ್ದು, ತಾನೇ ಹುಟ್ಟುಹಾಕಿದ್ದ ಕಂಪನಿಯನ್ನು 67 ವರ್ಷಗಳ ಬಳಿಕ ತನ್ನದೇ ವಶಕ್ಕೆ ಪಡೆಯಲು ಸಜ್ಜಾಗಿದೆ.
ಏರ್ ಇಂಡಿಯಾ ಸ್ಥಾಪಿಸಿದ್ದೇ ಟಾಟಾ
ಟಾಟಾ ಸಂಸ್ಥೆಯವರು ಸ್ವಾತಂತ್ರ್ಯ ಪೂರ್ವದಲ್ಲೇ ಟಾಟಾ ಏರ್ ಲೈನ್ಸ್ ಹುಟ್ಟುಹಾಕಿದ್ದರು. 1932ರಲ್ಲಿ ಏರ್ ಲೈನ್ಸ್ ಸ್ಥಾಪಿಸಿ, ಮೊದಲ ಬಾರಿಗೆ ದೇಶೀಯವಾಗಿ ಖಾಸಗಿ ವಿಮಾನ ಯಾನವನ್ನು ಆರಂಭಿಸಿದ್ದರು. ಆದರೆ, ದೇಶಕ್ಕೆ ಸ್ವಾತಂತ್ರ್ಯ ಸಿಗುತ್ತಲೇ ವಿಮಾನ ಸಂಚಾರವನ್ನು ರಾಷ್ಟ್ರೀಕರಣಗೊಳಿಸಿ ಸರಕಾರದ ಹಿಡಿತಕ್ಕೆ ತೆಗೆದುಕೊಳ್ಳಲಾಗಿತ್ತು. ಅದರಂತೆ, ಟಾಟಾ ಏರ್ ಲೈನ್ಸ್ ಸರಕಾರಿ ಸಂಸ್ಥೆಯಾದ ಬಳಿಕ ಏರ್ ಇಂಡಿಯಾ ಆಗಿ ಬದಲಾಗಿತ್ತು. ಈಗಾಗ್ಲೇ ಏರ್ ಇಂಡಿಯಾ ಮಾರಾಟ ಪ್ರಕ್ರಿಯೆಯನ್ನು ಸರಕಾರ ಅಂತಿಮಗೊಳಿಸಿದ್ದು, ಈ ಮೂಲಕ 1.75 ಲಕ್ಷ ಕೋಟಿ ಮೊತ್ತವನ್ನು ಸರಕಾರ ಹಂಚಿಕೆ ಮಾಡುವ ಗುರಿ ಹೊಂದಿದೆ. ಕಳೆದ ಬಜೆಟ್ ನಲ್ಲಿ ಈ ಬಗ್ಗೆ ಪ್ರಕಟಿಸಿದ್ದಲ್ಲದೆ, 2022ರೊಳಗೆ ವಿಮಾನ ಯಾನವನ್ನು ಸಂಪೂರ್ಣ ಖಾಸಗೀಕರಣ ಮಾಡುವುದಕ್ಕೆ ಅನುಮೋದನೆ ನೀಡಿತ್ತು.
ಕಳೆದ ಡಿಸೆಂಬರ್ ತಿಂಗಳಲ್ಲಿ ಏರ್ ಇಂಡಿಯಾ ಖಾಸಗೀಕರಣದ ಬಗ್ಗೆ ಸರಕಾರದಿಂದ ಬಿಡ್ ಮಾಡಲಾಗಿತ್ತು. ಟಾಟಾ ಸನ್ಸ್, ಸ್ಪೈಸ್ ಜೆಟ್ ಸೇರಿದಂತೆ ನಾಲ್ಕು ಕಂಪನಿಗಳು ಬಿಡ್ ಮಾಡಿದ್ದವು. ಈಗ ಇವರೆಡು ಕಂಪನಿಗಳು ಮಾತ್ರ ಉಳಿದುಕೊಂಡಿದ್ದು, ಟಾಟಾ ಕಂಪನಿ ಬಹುತೇಕ ಏರ್ ಇಂಡಿಯಾವನ್ನು ಮರಳಿ ವಶಕ್ಕೆ ಪಡೆದು ಭಾರತದ ವಿಮಾನ ಕ್ಷೇತ್ರದಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆಯಲು ಮುಂದಾಗಿದೆ.
ಏರ್ ಇಂಡಿಯಾ ನಷ್ಟಕ್ಕೇನು ಕಾರಣ ?
ಏರ್ ಇಂಡಿಯಾ, 2007ರಲ್ಲಿ ಯುಪಿಎ ಅವಧಿಯಲ್ಲಿ 111 ಬೋಯಿಂಗ್ ಮತ್ತು ಏರ್ ಬಸ್ ಗಳನ್ನು ಖರೀದಿಸಿತ್ತು. ಅಲ್ಲದೆ, ಕೆಲವು ಲಾಭದಾಯಕ ರೂಟ್ ಗಳನ್ನು ಏರ್ ಬಸ್ ಗೆ ಬಿಟ್ಟುಕೊಡಲಾಗಿತ್ತು ಎನ್ನಲಾಗುತ್ತಿದೆ. ಆನಂತರ, ಏರ್ ಇಂಡಿಯಾಗೆ ನಷ್ಟ ಎದುರಾಗಿದ್ದು, ಅದನ್ನು ತೀರಿಸಲು ಬ್ರಿಟನ್ ಬ್ಯಾಂಕಿನಲ್ಲಿ ಸಾಲ ಮಾಡಲಾಗಿತ್ತು. ಇದರಿಂದಾಗಿ ನಷ್ಟದ ಹಾದಿಯಲ್ಲೇ ಬಂದಿದ್ದ ಏರ್ ಇಂಡಿಯಾ, 2019ರಲ್ಲಿ 60 ಸಾವಿರ ಕೋಟಿ ನಷ್ಟದಲ್ಲಿತ್ತು ಎನ್ನಲಾಗಿತ್ತು (ಬಿಸಿನೆಸ್ ಟುಡೇ ಮಾಹಿತಿ). ಏರ್ ಇಂಡಿಯಾವನ್ನು ಖಾಸಗಿ ಕಂಪನಿಗೆ ಮಾರಲಾಗದಿದ್ದರೆ, ನಡೆಸಲು ಅಸಾಧ್ಯ ಎಂದಿದ್ದರು ಆಗಿನ ವಿಮಾನ ಯಾನ ಸಚಿವ ಹರ್ದೀಪ್ ಸಿಂಗ್ ಪುರಿ. ನಷ್ಟದ ಕಾರಣ ಕಾರ್ಮಿಕರಿಗೆ ಸಂಬಳ ಕೊಡುವುದಕ್ಕೂ ಕಷ್ಟ ಎದುರಾಗಿದ್ದಲ್ಲದೆ, ಒಂದು ಹಂತದಲ್ಲಿ ನೌಕರರು ಪ್ರತಿಭಟನೆಗೂ ಇಳಿದಿದ್ದರು. ಹಾಗಾಗಿ, ಏರ್ ಇಂಡಿಯಾ ಕಾರ್ಮಿಕರೇ ತಮ್ಮ ಸಂಸ್ಥೆಯನ್ನು ಟಾಟಾದವರು ಪಡೆಯಲಿ ಎಂದು ತುದಿಗಾಲಲ್ಲಿ ನಿಂತಿದ್ದರು. ಆನಂತರ, ಕಳೆದ ಎರಡು ವರ್ಷಗಳಲ್ಲಿ ಕೊರೊನಾ ಕಾರಣದಿಂದ ಏರ್ ಇಂಡಿಯಾ ಮತ್ತಷ್ಟು ನಷ್ಟದತ್ತ ಸಾಗಿತ್ತು. ಆದರೆ, 2006ರ ವರೆಗೂ ಏರ್ ಇಂಡಿಯಾ ಲಾಭದಾಯಕ ಕಂಪನಿಯಾಗಿತ್ತು ಅನ್ನೋದು ಕೂಡ ಗಮನಾರ್ಹ.
ಸದ್ಯಕ್ಕೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ಪಾಲಿನ ಸಂಪೂರ್ಣ 100 ಶೇಕಡಾ ಷೇರನ್ನು ಮಾರಲು ಯೋಜನೆ ಹಾಕಿದ್ದರೆ, ಏರ್ ಇಂಡಿಯಾಗೆ ಸೇರಿದ ಏರ್ಪೋರ್ಟ್ ಸೇವೆಗಳಲ್ಲಿ 50 ಶೇಕಡಾವನ್ನು ಖಾಸಗಿ ತೆಕ್ಕೆಗೆ ನೀಡಲಾಗುತ್ತದೆ. ಈಗಾಗ್ಲೇ ಟಾಟಾ ಕಂಪನಿಯವರು ಕಡಿಮೆ ವೆಚ್ಚದ ಏರ್ ಏಶ್ಯಾ ಇಂಡಿಯಾ ಮತ್ತು ಏರ್ ವಿಸ್ತಾರ್ (ಸಿಂಗಾಪುರ್ ಏರ್ ಲೈನ್ಸ್ ಜೊತೆ) ಎನ್ನುವ ಎರಡು ಮಾದರಿಯ ವಿಮಾನ ಸೇವೆಗಳನ್ನು ಹೊಂದಿದ್ದಾರೆ. ಹಾಗಿದ್ದರೂ, ಭಾರತದ ಒಟ್ಟು ವಿಮಾನ ಸೇವೆಯಲ್ಲಿ ಏರ್ ಇಂಡಿಯಾದ್ದೇ ಪ್ರಾಬಲ್ಯ ಇತ್ತು. ಈಗ ಏರ್ ಇಂಡಿಯಾವನ್ನು ತಮ್ಮ ತೆಕ್ಕೆಗೆ ಪಡೆದಲ್ಲಿ ಟಾಟಾ ಏರ್ ಲೈನ್ಸ್ ಜಗತ್ತಿನ ಮುಂಚೂಣಿ ವಿಮಾನ ಕಂಪನಿಗಳ ಸಾಲಿಗೆ ಸೇರಲಿದೆ. ಈ ಹಿಂದೆ, ಜೆಆರ್ ಡಿ ಟಾಟಾ ವಿಮಾನ ಕಂಪನಿಯನ್ನು ಸ್ಥಾಪಿಸಿ, ಭಾರತದಲ್ಲಿ ವೈಮಾನಿಕ ಕ್ಷೇತ್ರಕ್ಕೆ ಕಾಲಿರಿಸಿದ್ದರು. 1953ರಲ್ಲಿ ವಿಮಾನ ಸೇವೆ ರಾಷ್ಟ್ರೀಕರಣ ಆಗಿದ್ದರೂ, 1977ರ ವರೆಗೂ ಜೆಆರ್ ಡಿ ಟಾಟಾ ಅವರೇ ಅದರ ಚೇರ್ಮನ್ ಆಗಿ ಮುಂದುವರಿದಿದ್ದರು.
ವಿಶೇಷ ಅಂದ್ರೆ, ಯಾರೇ ಏರ್ ಇಂಡಿಯಾ ಅಧಿಪತ್ಯ ಪಡೆದರೂ, ಆಟೊಮೆಟಿಕ್ ಆಗಿ ಜಗತ್ತಿನಾದ್ಯಂತ ಇರುವ 1800 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಮತ್ತು 4400 ದೇಶೀಯ ವಿಮಾನ ನಿಲ್ದಾಣಗಳಲ್ಲಿ ಲ್ಯಾಂಡಿಂಗ್ ಮತ್ತು ಪಾರ್ಕಿಂಗ್ ಸ್ಲಾಟ್ ಗಳನ್ನು ನಿಯಂತ್ರಣಕ್ಕೆ ಪಡೆಯಲಿದ್ದಾರೆ. ಇದಲ್ಲದೆ, ಏರ್ ಇಂಡಿಯಾದ ಹಿಡಿತದಲ್ಲಿರುವ ಅಷ್ಟೂ ಪ್ರಯಾಣಿಕ ವಿಮಾನಗಳು ಮತ್ತು ಕಾರ್ಗೋ ಸಾರಿಗೆಯೂ ಅದರ ನಿಯಂತ್ರಣಕ್ಕೆ ಬರಲಿದೆ.
Air India privatisation: Tata sons is all set to get Maharaja, according to reports. The conglomerate has won the bid for national carrier Air India Bloomberg reported. A panel of ministers has accepted the conglomerate’s proposal to take over the airline, the report said. An official announcement is expected soon, it further mentioned.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 07:56 pm
Mangalore Correspondent
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm