ಬ್ರೇಕಿಂಗ್ ನ್ಯೂಸ್
05-10-21 08:06 pm Headline Karnataka News Network ದೇಶ - ವಿದೇಶ
ಲಕ್ನೋ, ಅ.5: ಹಿಂಸಾಚಾರ ಪೀಡಿತ ಲಖೀಮ್ ಪುರ್ ಖೇರಿಗೆ ನಿಷೇಧಾಜ್ಞೆ ಉಲ್ಲಂಘಿಸಿ ಭೇಟಿ ನೀಡಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿಯನ್ನು ಪೊಲೀಸರು ಬಂಧಿಸಿದ್ದು, ಇನ್ನೂ ಸೀತಾಪುರದ ಗೆಸ್ಟ್ ಹೌಸ್ ನಲ್ಲಿ ಗೃಹ ಬಂಧನದಲ್ಲಿಯೇ ಇರಿಸಿದ್ದಾರೆ. ಅವರನ್ನು ಸೋಮವಾರ ನಸುಕಿನ ನಾಲ್ಕು ಗಂಟೆಗೆ ಪೊಲೀಸರು ಅಡ್ಡಗಟ್ಟಿ, ವಶಕ್ಕೆ ಪಡೆದಿದ್ದರು.
ಹಿಂಸಾಚಾರ ಹಿನ್ನೆಲೆಯಲ್ಲಿ ಲಖೀಂಪುರ್ ಖೇರಿಯಲ್ಲಿ 144 ಸೆಕ್ಷನ್ ಹೇರಲಾಗಿದ್ದು, ಅಲ್ಲಿಗೆ ಯಾವುದೇ ಇತರ ಭಾಗದ ನಾಯಕರು ತೆರಳುವಂತಿಲ್ಲ ಎಂದು ನಿರ್ಬಂಧ ಹೇರಲಾಗಿದೆ. ಹಿಂಸಾಚಾರದಲ್ಲಿ ಎಂಟು ಮಂದಿ ಮಡಿದಿದ್ದು, ಅವರ ಮನೆಗೆ ಭೇಟಿ ನೀಡುವ ಸಲುವಾಗಿ ಪ್ರಿಯಾಂಕ ಗಾಂಧಿ ಆಗಮಿಸಿದ್ದರು. ಆದರೆ, ಅವರನ್ನು ಲಕ್ನೋದಲ್ಲಿಯೇ ವಶಕ್ಕೆ ಪಡೆಯಲು ಪೊಲೀಸರು ಮುಂದಾಗಿದ್ದರು. ಆದರೆ, ಪೊಲೀಸರ ಕಣ್ತಪ್ಪಿಸಿ ಕಾಂಗ್ರೆಸ್ ನಾಯಕರ ವಾಹನದಲ್ಲಿ ತೆರಳಿದ್ದು, ಪೊಲೀಸರು ಐದು ಗಂಟೆಗಳ ಕಾಲ ಬೆನ್ನಟ್ಟಿ ಪ್ರಿಯಾಂಕರನ್ನು ವಶಕ್ಕೆ ಪಡೆದು ಸೀತಾಪುರ್ ಗೆಸ್ಟ್ ಹೌಸಿಗೆ ಕರೆ ತಂದಿದ್ದರು.

ಪೊಲೀಸರು ಗೆಸ್ಟ್ ಹೌಸ್ ಅನ್ನೇ ಜೈಲನ್ನಾಗಿ ಪರಿವರ್ತಿಸಿ ಪ್ರಿಯಾಂಕ ಗಾಂಧಿಯನ್ನು ಗೃಹ ಬಂಧನ ಇರಿಸಿದ್ದಾರೆ. ಪ್ರಿಯಾಂಕ ಬಿಡುಗಡೆಗಾಗಿ ಅಲ್ಲಿಯೇ ಹೊರಗಡೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದ್ದಾರೆ. ನಿರ್ಬಂಧವನ್ನು ಉಲ್ಲಂಘಿಸಿದ್ದಕ್ಕಾಗಿ ಸೆಕ್ಷನ್ 151 ಮತ್ತು 107 ಮೇಲೆ ಅವರ ವಿರುದ್ಧ ಕೇಸು ಹಾಕಲಾಗಿದೆ. ನಿರ್ಬಂಧ ಉಲ್ಲಂಘನೆ ಮತ್ತು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಆಕೆಯನ್ನು ಬಂಧಿಸಿದ್ದು, ಬಿಡುಗಡೆಗಾಗಿ ಮುಂದೆ ಈ ರೀತಿ ಕಾನೂನು ಉಲ್ಲಂಘಿಸುವುದಿಲ್ಲ ಎಂದು ಬಾಂಡ್ ಬರೆದು ಕೊಡಬೇಕಾಗಿದೆ.
Over a day after Priyanka Gandhi was detained, sources have said that the Congress leader has been formally arrested for violating Section 144 of the Indian Penal Code, for disrupting peace and under other sections. Gandhi was detained on her way to meet farmers in the violence-hit Lakhimpur Kheri district in Uttar Pradesh. She was going to meet the families of farmers who were killed in violence when she was detained on Sunday night.
02-11-25 11:09 pm
HK News Desk
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
03-11-25 12:37 pm
Mangalore Correspondent
ಧರ್ಮಸ್ಥಳ ಪ್ರಕರಣ ; ಗುರುತು ಪತ್ತೆಯಾಗದ 38 ಪ್ರಕರಣಗ...
02-11-25 10:23 pm
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
ವೆನ್ಲಾಕ್, ಲೇಡಿಗೋಷನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ...
02-11-25 06:51 pm
ಪುತ್ತೂರಿನಲ್ಲಿ ಆಟೋ - ಕಾರು ಮುಖಾಮುಖಿ ಡಿಕ್ಕಿ ; ಆಟ...
01-11-25 11:05 pm
03-11-25 12:33 pm
Mangalore Correspondent
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm