ಬ್ರೇಕಿಂಗ್ ನ್ಯೂಸ್
06-10-21 06:52 pm Headline Karnataka News Network ದೇಶ - ವಿದೇಶ
ಶ್ರೀನಗರ, ಅ.6: ನನ್ನ ತಂದೆ ಹೋರಾಟಗಾರ. ಯಾವತ್ತೂ ಹೇಳುತ್ತಿದ್ದರು, ನಾನು ದೇಶಕ್ಕಾಗಿ ಸಾಯಲು ರೆಡಿ ಇದ್ದೇನೆ ಎಂದು. ನೀವು ಒಬ್ಬ ವ್ಯಕ್ತಿಯನ್ನು ಕೊಂದಿರಬಹುದು. ನೀವು ಮಖಾನ್ ಲಾಲ್ ಅವರ ಸ್ಪಿರಿಟನ್ನು ಕೊಲ್ಲುವುದಕ್ಕೆ ಸಾಧ್ಯವಿಲ್ಲ.. ಇದು ಕಾಶ್ಮೀರಿ ಉಗ್ರರ ಗುಂಡಿನ ದಾಳಿಗೆ ಸಾವನ್ನಪ್ಪಿದ ಶ್ರೀನಗರದ ಮೆಡಿಕಲ್ ಶಾಪ್ ಮಾಲೀಕ ಮಖಾನ್ ಲಾಲ್ ಪುತ್ರಿ ಸಮೃದ್ಧಿ ಬಿಂದ್ರು ಮಾತು.
ಶ್ರೀನಗರದ ಪ್ರಸಿದ್ಧ ಫಾರ್ಮಸಿಸ್ಟ್ ಆಗಿದ್ದ ಮಖಾನ್ ಲಾಲ್ ಅವರನ್ನು ಯಾರೋ ಕಿಡಿಗೇಡಿಗಳು ಅಂಗಡಿ ಎದುರಲ್ಲೇ ಗುಂಡಿಟ್ಟು ಸಾಯಿಸಿದ್ದರು. ಕಳೆದೊಂದು ವಾರದಲ್ಲಿ ಮೂವರು ಸಾಮಾನ್ಯ ನಾಗರಿಕರನ್ನು ಗುರಿಯಾಗಿಸಿ ಉಗ್ರರು ಗುಂಡಿನ ದಾಳಿ ನಡೆಸಿ ಕೊಂದು ಹಾಕಿದ್ದಾರೆ. ಮಖಾನ್ ಲಾಲ್, ಕಾಶ್ಮೀರಿ ಪಂಡಿತರ ಕುಟುಂಬದವರಾಗಿದ್ದು, ಶ್ರೀನಗರದಲ್ಲಿ ಉಗ್ರರ ಉಪಟಳದ ಮಧ್ಯೆಯೇ ಅವರಿಗೆ ಅಂಜದೆ ಬದುಕಿದ್ದರು.
ತಂದೆಯ ಸಾವಿನ ಬಳಿಕ ಮಾಧ್ಯಮಕ್ಕೆದುರಾದ ಪುತ್ರಿ ಸಮೃದ್ಧಿ ತುಂಬ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ನನ್ನ ತಂದೆಯನ್ನು ಸಾಯಿಸಿರಬಹುದು, ಅವರು ಹೇಳಿಕೊಟ್ಟ ಆದರ್ಶ, ಸ್ಫೂರ್ತಿ ಎಂದೂ ಸಾಯಲ್ಲ. ಗುಂಡು ಹಾರಿಸಿದ್ದು ಯಾರೇ ಆಗಿರಲಿ, ಧೈರ್ಯ ಇದ್ದರೆ ನನ್ನ ಎದುರಿಗೆ ಬರಲಿ. ರಾಜಕಾರಣಿಗಳು ನಿಮ್ಮ ಕೈಗೆ ಕಲ್ಲು ಮತ್ತು ಗನ್ ಕೊಟ್ಟ ರೀತಿ ನನಗೆ ತಂದೆ ಉತ್ತಮ ಶಿಕ್ಷಣ ಕೊಡಿಸಿದ್ದಾರೆ. ನೀವು ಗನ್ ಮತ್ತು ಕಲ್ಲು ಹಿಡಿದು ಹೋರಾಟ ನಡೆಸುವುದಿದ್ದರೆ ಅದು ಹೇಡಿತನ. ಎಲ್ಲ ರಾಜಕಾರಣಿಗಳು ನಿಮ್ಮನ್ನು ಬಳಸಿಕೊಂಡಿದ್ದು ಮಾತ್ರ. ಶಿಕ್ಷಣ ಕೊಡಿಸಿಲ್ಲ. ನೀವು ಮುಂದೆ ಬಂದು ಶಿಕ್ಷಣಕ್ಕಾಗಿ ಹೋರಾಡಿ ಎಂದು ಸಮೃದ್ಧಿ ಉಗ್ರರಿಗೆ ಸವಾಲು ಹಾಕಿದ್ದಾಳೆ.
ನಾನೊಬ್ಬ ಅಸೋಸಿಯೇಟ್ ಪ್ರೊಫೆಸರ್ ಆಗಿದ್ದೇನೆ. ಆದರೆ, ಶುರು ಮಾಡಿದ್ದು ನಾನು ಕೂಡ ಝೀರೋದಿಂದಲೇ. ನನ್ನ ತಂದೆ ಸೈಕಲ್ ತುಳಿಯುತ್ತಾ ಶಾಪ್ ಆರಂಭಿಸಿದ್ದರು. ನನ್ನ ಸೋದರ ಫೇಮಸ್ ಡಾಕ್ಟರ್ ಆಗಿದ್ದಾನೆ. ನನ್ನ ತಾಯಿ ಮೆಡಿಕಲ್ ಶಾಪ್ ನಲ್ಲಿ ಕುಳಿತು ವ್ಯವಹಾರ ನಡೆಸುತ್ತಾರೆ. ಇದೆಲ್ಲವನ್ನೂ ಮಖಾನ್ ಲಾಲ್ ಬಿಂದ್ರು ಎಂಬ ನನ್ನ ತಂದೆ ಕಾಶ್ಮೀರದಲ್ಲಿದ್ದೇ ಮಾಡಿ ತೋರಿಸಿದ್ದಾರೆ. ಅವರೊಬ್ಬ ಕಾಶ್ಮೀರಿ ಪಂಡಿತ. ಯಾವತ್ತೂ ಸಾಯಲ್ಲ. ನಾನು ಹಿಂದು ಆಗಿದ್ದರೂ ಖುರಾನ್ ಓದಿದ್ದೇನೆ. ನೀವು ಬಿಂದ್ರು ಎನ್ನುವ ಒಬ್ಬ ವ್ಯಕ್ತಿಯನ್ನು ಸಾಯಿಸಿರಬಹುದು. ಅವರ ಸ್ಫೂರ್ತಿಯನ್ನು ಸಾಯಿಸಲು ಸಾಧ್ಯವಿಲ್ಲ ಎಂದು ಮಾರ್ಮಿಕ ಮಾತುಗಳನ್ನು ಇಂಡಿಯಾ ಟುಡೇ ಜೊತೆ ಹಂಚಿಕೊಂಡಿದ್ದಾಳೆ.
ಇದೇ ವೇಳೆ, ಉಗ್ರರಿಗೆ ಇದೇ ಹೆಣ್ಮಗಳು ಸವಾಲನ್ನೂ ಹಾಕಿದ್ದಾಳೆ. ನೀವು ಧೈರ್ಯ ಇದ್ದರೆ ನನ್ನ ಮುಂದೆ ಬಂದು ಡಿಬೇಟ್ ಮಾಡಿ. ನೀವು ಕಲ್ಲು ಹೊಡೆದು, ಗುಂಡು ಹಾರಿಸಿ ಸಾಮಾನ್ಯ ಜನರನ್ನು ಕೊಲ್ಲುತ್ತೀರಲ್ಲ. ನಿಮಗೆ ತಾಕತ್ತು ಇದ್ದರೆ, ನನ್ನ ಮುಂದೆ ಬಂದು ಡಿಬೇಟ್ ಮಾಡಿ. ನನ್ನನ್ನು ಎದುರಿಸಿ ಎಂದು ಸಮೃದ್ಧಿ ಬಿಂದ್ರು ಸವಾಲು ಹಾಕಿದ್ದಾಳೆ.
ಮಂಗಳವಾರ ಜಮ್ಮು ಕಾಶ್ಮೀರದ ಶ್ರೀನಗರದ ಪಾಲಿಗೆ ಬ್ಲಡೀ ಡೇ ಆಗಿತ್ತು. ಮಖಾನ್ ಲಾಲ್ ಸೇರಿದಂತೆ ಇನ್ನೊಬ್ಬ ಬೀದಿ ವ್ಯಾಪಾರಿಯನ್ನು ಗುಂಡಿಟ್ಟು ಸಾಯಿಸಲಾಗಿತ್ತು. ಭೇಲ್ ಪುರಿ ಮಾರುತ್ತಿದ್ದ ವ್ಯಕ್ತಿಯನ್ನು ಉಗ್ರರು ಗುಂಡು ಹಾರಿಸಿ, ಸಾಯಿಸಿದ್ದರು. ಬೀದಿ ವ್ಯಾಪಾರಿ ರಸ್ತೆಯಲ್ಲೇ ಬಿದ್ದು ಸ್ಥಳದಲ್ಲೇ ಸಾವು ಕಂಡಿದ್ದ. ಮಖಾನ್ ಲಾಲ್ ಬಿಂದ್ರು ಶ್ರೀನಗರದಲ್ಲಿ ಹಲವು ದಶಕಗಳಿಂದ ಮೆಡಿಕಲ್ ಶಾಪ್ ಹೊಂದಿದ್ದಾರೆ. ಅಲ್ಲದೆ, ಸಾಕಷ್ಟು ಪ್ರಸಿದ್ಧಿಯನ್ನೂ ಪಡೆದಿದ್ದರು. ಅವರ ದೇಹಕ್ಕೆ ನಾಲ್ಕು ಗುಂಡುಗಳು ಹೊಕ್ಕಿದ್ದವು. ಬಳಿಕ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ಅಲ್ಲಿ ಮೃತಪಟ್ಟಿದ್ದರು. ವಾರದ ಹಿಂದೆ ಶ್ರೀನಗರದಲ್ಲಿಯೇ ಇಬ್ಬರು ಸಾಮಾನ್ಯ ನಾಗರಿಕರನ್ನು ಉಗ್ರರು ಗುಂಡು ಹಾರಿಸಿ, ಸಾಯಿಸಿದ್ದರು.
My father was a fighter, always said ‘I’ll die with my shoes on’.” As Simriddi Bindroo faced a sea of media personnel at her house, there was not a tear in her eyes. The daughter of noted pharmacist Makhan Lal Bindroo, who was shot dead by unknown militants at his shop Bindroo Medicate in Srinagar on Tuesday, said her father may have died but his spirit would always live on.
26-11-24 10:46 pm
Bangalore Correspondent
Shivamogga, Monkey fever, Dinesh Gundu Rao: ಮ...
26-11-24 10:23 pm
BJP, Vijayendra: ಉಪ ಚುನಾವಣೆ ಸೋಲು ; ಪಕ್ಷದ ಕಾರ್...
26-11-24 06:56 pm
MLA Gaviyappa, Congress: ಗ್ಯಾರಂಟಿ ಸ್ಕೀಂನಿಂದಾಗ...
26-11-24 06:11 pm
Davanagere News, Heart Attack: ಗಂಡ ಹೃದಯಾಘಾತಕ್...
26-11-24 11:52 am
26-11-24 09:43 pm
HK News Desk
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
26-11-24 11:23 pm
Udupi Correspondent
Mangalore, Suicide, Belthangady: ಬೆಳ್ತಂಗಡಿ ;...
26-11-24 10:58 pm
Mangalore Baby, Lady goschen Hospital: ಲೇಡಿಗೋ...
26-11-24 10:50 pm
Tamil Actor Surya, Jyothika, Udupi temple: ಕೊ...
26-11-24 08:23 pm
Mangalore, Police Anupam Agarwal IPS, DYFI; ಸ...
26-11-24 05:37 pm
26-11-24 03:10 pm
Mangalore Correspondent
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm
Rowdy sheeter Dawood, Mangalore Crime, Police...
23-11-24 10:49 am
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm