ಬ್ರೇಕಿಂಗ್ ನ್ಯೂಸ್
08-10-21 11:56 am Mangalore Reporter ದೇಶ - ವಿದೇಶ
ಅರುಣಾಚಲ, ಅ.08: ಭಾರತ ಹಾಗೂ ಚೀನಾ ಪಡೆಗಳ ನಡುವೆ ಕಳೆದ ವಾರ ಮತ್ತೊಂದು ಮುಖಾಮುಖಿ ಸಂಘರ್ಷ ನಡೆದಿದ್ದು, ಈ ಸಂಘರ್ಷದಲ್ಲಿ ಅರುಣಾಚಲ ಪ್ರದೇಶದ ವಾಸ್ತವಿಕ ನಿಯಂತ್ರಣ ರೇಖೆಯ ಸಮೀಪದಲ್ಲಿ ಸುಮಾರು 200 ಮಂದಿ ಚೀನಿ ಸೈನಿಕರನ್ನು ತಡೆಹಿಡಿಯಲಾಗಿದೆ.
ಕಳೆದ ವಾರ ಚೀನಾದ ಗಡಿಗೆ ಸಮೀಪದಲ್ಲಿ ಗಸ್ತು ತಿರುಗುತ್ತಿದ್ದ ಸಮಯದಲ್ಲಿ ಭಾರತ ಮತ್ತು ಚೀನಾ ಪಡೆಗಳ ನಡುವೆ ಘರ್ಷಣೆ ಉಂಟಾಗಿದೆ.ಗಡಿಗೆ ಸಮೀಪ ಬಂದಿದ್ದ ಚೀನಾದ ಸುಮಾರು 200 ಯೋಧರನ್ನು ಭಾರತದ ಪಡೆಗಳು ತಡೆ ಹಿಡಿದಿರುವುದಾಗಿ ತಿಳಿದು ಬಂದಿತ್ತು.

ಉಭಯ ಪಡೆಗಳ ಕಮಾಂಡರ್‌ಗಳು ವಿಚಾರವನ್ನು ಪ್ರಸ್ತುತ ಜಾರಿಯಲ್ಲಿರುವ ನಿಯಮಗಳ ಅನ್ವಯ ಬಗೆಹರಿಸಿಕೊಂಡ ನಂತರದಲ್ಲಿ ಎರಡೂ ದೇಶಗಳ ಪಡೆಗಳು ಹಿಂದಿರುಗಿವೆ. ಕೆಲವು ಗಂಟೆಗಳ ವರೆಗೂ ಭಾರತ-ಚೀನಾ ಪಡೆಗಳ ನಡುವೆ ಘರ್ಷಣೆ ನಡೆದಿದೆ, ಆದರೆ ಘರ್ಷಣೆಯಲ್ಲಿ ಭಾರತದ ಪಡೆಗಳಿಗೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.
ಈ ನಡುವೆ, ಬಾಕಿ ಉಳಿದಿರುವ ಪೂರ್ವ ಲಡಾಖ್ ಭಾಗದ ಗಡಿಯ ವಿಚಾರಗಳನ್ನು ಬಗೆಹರಿಸುವ ಬಗ್ಗೆ ಚೀನಾ ಶೀಘ್ರದಲ್ಲೇ ಕ್ರಮಕೈಗೊಳ್ಳುವ ನಿರೀಕ್ಷೆ ಇರುವುದಾಗಿ ಭಾರತ ಗುರುವಾರ ಹೇಳಿದೆ. ಚೀನಾದ ಕಡೆಯಿಂದ ಆಕ್ರಮಣಕಾರಿ ಮತ್ತು ಏಕಪಕ್ಷೀಯ ಧೋರಣೆಗಳು ಗಡಿಯಲ್ಲಿ ಶಾಂತಿ ಮತ್ತು ಪ್ರಶಾಂತತೆಗೆ ಧಕ್ಕೆಯುಂಟು ಮಾಡುತ್ತದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ವಕ್ತಾರ ಅರಿಂದಮ್ ಬಗಚಿ ಹೇಳಿದ್ದಾರೆ.
The Indian and Chinese troops engaged in yet another face-off last week in which around 200 People’s Liberation Army soldiers were intercepted close to the Line of Actual Control in Arunachal Pradesh.
02-11-25 11:09 pm
HK News Desk
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
02-11-25 11:12 pm
HK News Desk
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲಗೆ 240 ಕೋಟಿ ಮೊತ್ತ...
28-10-25 10:23 pm
02-11-25 10:23 pm
Mangalore Correspondent
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
ವೆನ್ಲಾಕ್, ಲೇಡಿಗೋಷನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ...
02-11-25 06:51 pm
ಪುತ್ತೂರಿನಲ್ಲಿ ಆಟೋ - ಕಾರು ಮುಖಾಮುಖಿ ಡಿಕ್ಕಿ ; ಆಟ...
01-11-25 11:05 pm
ಉಡುಪಿ - ಕಾಸರಗೋಡು 440 ಕೆವಿ ವಿದ್ಯುತ್ ಲೈನ್ ; ಕೃಷ...
01-11-25 11:02 pm
01-11-25 07:25 pm
HK News Desk
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm
ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿಸಿದ್ದ ವ್ಯಕ...
31-10-25 12:55 pm