ಕಾರ್ಯಕಾರಿ ಸದಸ್ಯತ್ವ ತೆಗೆದ ಬೆನ್ನಲ್ಲೇ ಟ್ವಿಟರ್ ನಲ್ಲಿ ಬಿಜೆಪಿ ಪದವನ್ನೇ ಅಳಿಸಿದ ಸಂಸದ ಸುಬ್ರಹ್ಮಣ್ಯನ್ ಸ್ವಾಮಿ !

08-10-21 02:45 pm       Headline Karnataka News Network   ದೇಶ - ವಿದೇಶ

ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯನ್ ಸ್ವಾಮಿ ತನ್ನ ಟ್ವಿಟರ್ ಪ್ರೊಫೈಲ್ ನಲ್ಲಿದ್ದ ಬಿಜೆಪಿ ಎನ್ನುವ ಪದವನ್ನೂ ತೆಗೆದು ಹಾಕಿದ್ದಾರೆ.

ನವದೆಹಲಿ, ಅ.8: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಮಂಡಳಿಯ ಸದಸ್ಯತ್ವದಿಂದ ತಮ್ಮನ್ನು ತೆಗೆದು ಹಾಕಿದ ಬೆನ್ನಲ್ಲೇ ಬಿಜೆಪಿ ಹಿರಿಯ ಮುಖಂಡ, ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯನ್ ಸ್ವಾಮಿ ತನ್ನ ಟ್ವಿಟರ್ ಪ್ರೊಫೈಲ್ ನಲ್ಲಿದ್ದ ಬಿಜೆಪಿ ಎನ್ನುವ ಪದವನ್ನೂ ತೆಗೆದು ಹಾಕಿದ್ದಾರೆ. ಬಿಜೆಪಿ ನೇಶನಲ್ ಎಕ್ಸಿಕ್ಯುಟಿವ್ ಮೆಂಬರ್ ಎಂದಿದ್ದನ್ನೂ ತೆಗೆದು ಹಾಕಿದ್ದಾರೆ.

ಟ್ವಿಟರ್ ನಲ್ಲಿ ಕೇವಲ ರಾಜ್ಯಸಭಾ ಎಂಪಿ, ಮಾಜಿ ಕೇಂದ್ರ ಸಚಿವ, ಹಾರ್ವರ್ಡ್ ಯುನಿವರ್ಸಿಟಿಯಲ್ಲಿ ಇಕನಾಮಿಕ್ಸ್ ಪಿಎಚ್ ಡಿ ಎಂದಷ್ಟೇ ಬರೆದುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸರಕಾರದ ಆರ್ಥಿಕ ನೀತಿಗಳ ಬಗ್ಗೆ ಟೀಕಿಸುತ್ತಿದ್ದ ಸುಬ್ರಹ್ಮಣ್ಯನ್ ಸ್ವಾಮಿ ಅವರನ್ನು ಎರಡು ದಿನಗಳ ಹಿಂದೆ ರಾಷ್ಟ್ರೀಯ ಕಾರ್ಯಕಾರಿಣಿಯ 80 ಸದಸ್ಯರ ಮಂಡಳಿಯಿಂದ ತೆಗೆದು ಹಾಕಲಾಗಿತ್ತು. ಕೃಷಿ ಕಾಯ್ದೆ ಮತ್ತು ಲಖೀಮ್ ಪುರ್ ಹಿಂಸಾಚಾರದ ಬಗ್ಗೆ ಪ್ರಶ್ನೆ ಎತ್ತಿದ್ದ ವರುಣ್ ಗಾಂಧಿ ಮತ್ತು ಅವರ ತಾಯಿ ಮನೇಕಾ ಗಾಂಧಿ ಅವರನ್ನೂ ಕಾರ್ಯಕಾರಿ ಸದಸ್ಯತ್ವದಿಂದ ತೆಗೆದು ಹಾಕಲಾಗಿದೆ.

ಎರಡು ದಿನಗಳ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು 80 ಸದಸ್ಯರ ಕಾರ್ಯಕಾರಿ ಮಂಡಳಿಯ ಪಟ್ಟಿಯನ್ನು ಬಿಡುಗಡೆ ಮಾಡಿದ್ದರು. ಅದರಲ್ಲಿ ಸುಬ್ರಹ್ಮಣ್ಯನ್ ಸ್ವಾಮಿ, ವರುಣ್ ಗಾಂಧಿ ಸೇರಿದಂತೆ ಹಲವರ ಹೆಸರನ್ನು ಕೈಬಿಡಲಾಗಿದೆ. ಇದಲ್ಲದೆ, ಕೇಂದ್ರ ಸಚಿವ ರಾವ್ ಇಂದರ್ಜಿತ್ ಸಿಂಗ್, ಪ್ರಹ್ಲಾದ್ ಪಟೇಲ್, ಸುರೇಶ್ ಪ್ರಭು, ರಾಜಸ್ಥಾನ ಮಾಜಿ ಸಿಎಂ ವಸುಂಧರಾ ರಾಜೇ ಸಿಂದಿಯಾ ಪುತ್ರ ದುಷ್ಯಂತ್ ಸಿಂಗ್, ವಿಜಯ್ ಗೋಯಲ್, ವಿನಯ್ ಕಟಿಯಾರ್, ಎಸ್.ಎಸ್. ಅಹ್ಲುವಾಲಿಯಾ ಹೆಸರನ್ನೂ ಕಾರ್ಯಕಾರಿ ಮಂಡಳಿಯಿಂದ ಕೈಬಿಡಲಾಗಿದೆ.

ವರ ಬದಲಿಗೆ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ, ಅಶ್ವಿನಿ ವೈಷ್ಣವ್, ದೆಹಲಿ ಸಂಸದ ರಮೇಶ್ ವಿಧುರಿ ಸೇರ್ಪಡೆಯಾಗಿದ್ದಾರೆ. ಸಚಿವರಾದ ಧರ್ಮೇಂದ್ರ ಪ್ರಧಾನ್, ಪಿಯೂಷ್ ಗೋಯಲ್, ನಿರ್ಮಲಾ ಸೀತಾರಾಮನ್ ಮಂಡಳಿಯಲ್ಲಿ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ.

ನನಗೇನು ಚಿಂತೆಯಿಲ್ಲ – ವರುಣ್ ಗಾಂಧಿ

ತನ್ನನ್ನು ಕಾರ್ಯಕಾರಿ ಮಂಡಳಿಯಿಂದ ಕೈಬಿಟ್ಟಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ವರುಣ್ ಗಾಂಧಿ, ನಾನು ಕಾರ್ಯಕಾರಿ ಮಂಡಳಿಯಲ್ಲಿ ಇದ್ದೇನೋ, ಇಲ್ಲವೋ ಎನ್ನುವುದನ್ನು ಚಿಂತಿಸುವುದೇ ಇಲ್ಲ. ಕಳೆದ ಐದು ವರ್ಷಗಳಲ್ಲಿ ಒಂದೂ ಮೀಟಿಂಗಿನಲ್ಲಿ ಭಾಗವಹಿಸಿದ್ದೂ ಇಲ್ಲ. ಹೀಗಾಗಿ ನನಗೇನೂ ಕೊರತೆ ಅನ್ನಿಸುವುದಿಲ್ಲ ಎಂದು ಹೇಳಿದ್ದಾರೆ.

 

BJP leader Subramanian Swamy removed the party's name from his Twitter bio after he was dropped from the BJP’s national executive committee on Thursday. The former Union minister removed “BJP National Exec. member” from his bio.