ರಷ್ಯಾದಲ್ಲಿ ವಿಮಾನ ಪತನ; ಕನಿಷ್ಠ 16 ಮಂದಿ ಸಾವು

11-10-21 11:43 am       Headline Karnataka News Network   ದೇಶ - ವಿದೇಶ

ರಷ್ಯಾದ ವಿಮಾನವೊಂದು ಪತನವಾಗಿ ಕನಿಷ್ಠ 16 ಮಂದಿ ಸಾವನ್ನಪ್ಪಿದ್ದಾರೆ.

ಮಾಸ್ಕೋ, ಅಕ್ಟೋಬರ್‌ 11: ರಷ್ಯಾದ ವಿಮಾನವೊಂದು ಪತನವಾಗಿದ್ದು ಈ ವಿಮಾನ ಅಪಘಾತದಿಂದ ಕನಿಷ್ಠ 16 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಸುಮಾರು 23 ಮಂದಿ ಈ ರಷ್ಯಾದ ವಿಮಾನದಲ್ಲಿ ಇದ್ದರು ಎಂದು ಹೇಳಲಾಗಿದೆ. ಈ ಪೈಕಿ ಕನಿಷ್ಠ 16 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇನ್ನು ಏಳು ಮಂದಿಗೆ ಗಾಯವಾಗಿದೆ ಎಂದು ಕೂಡಾ ವರದಿಯು ಹೇಳಿದೆ.

ರಷ್ಯಾದ ಮೆನ್ಜೆಲಿನ್ಸ್ಕ್‌ ನಗರದ ಟಾಟರ್ಜ್ತಾನ್‌ ಎಂಬಲ್ಲಿ 23 ಮಂದಿ ಪ್ರಯಾಣಿಕರು ಇದ್ದ ಲೆಟ್‌ ಎಲ್‌-410 ಟರ್ಬೋಲೆಟ್‌ ವಿಮಾನ ಪತನಗೊಂಡಿದೆ ಎಂದು ತಿಳಿದು ಬಂದಿದೆ. ಇಂದು ಮುಂಜಾನೆ ಸುಮಾರು 9:11 (ಮಾಸ್ಕೋ ಸಮಯ) ಕ್ಕೆ ಈ ಲೆಟ್‌ ಎಲ್‌-410 ಟರ್ಬೋಲೆಟ್‌ ವಿಮಾನ ಪತನಗೊಂಡಿದೆ ಎಂದು ವರದಿಯು ಮಾಹಿತಿ ನೀಡಿದೆ.

ರಷ್ಯಾದ ಲೆಟ್‌ ಎಲ್‌-410 ಟರ್ಬೋಲೆಟ್‌ ವಿಮಾನದಲ್ಲಿದ್ದ 23 ಮಂದಿ ಪ್ರಯಾಣಿಕರ ಪೈಕಿ 21 ಮಂದಿ ಡೈವರ್‌ಗಳಾಗಿದ್ದರು ಎಂದು ಹೇಳಲಾಗಿದೆ. ಈ ವಿಮಾನ ದುರಂತದಲ್ಲಿ ಏಳು ಮಂದಿಗೆ ಗಾಯವಾಗಿದೆ.

ಈ ವಿಮಾನ ಪತನಗೊಂಡ ಚಿತ್ರವನ್ನು ರಷ್ಯಾದ ತುರ್ತು ಪರಿಸ್ಥಿತಿ ಸಚಿವಾಲಯವು ಬಿಡುಗಡೆ ಮಾಡಿದ್ದು, ಬದುಕುಳಿದ ಏಳು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ವಿವರಿಸಿದೆ.

"ರಷ್ಯಾದ ಮೆನ್ಜೆಲಿನ್ಸ್ಕ್‌ ನಗರದ ಟಾಟರ್ಜ್ತಾನ್‌ ಎಂಬಲ್ಲಿ ಪತನಗೊಂಡ ಈ ರಷ್ಯಾದ ವಿಮಾನವು ಸಂಪೂರ್ಣವಾಗಿ ಜಖಂ ಆಗಿದೆ. ಬದುಕುಳಿದ ಏಳು ಮಂದಿಯನ್ನು ಕೂಡಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಪೈಕಿ ಓರ್ವ ಗಾಯಾಳುವಿನ ಸ್ಥಿತಿಯು ಚಿಂತಾಜನಕವಾಗಿದೆ," ಎಂದು ರಷ್ಯಾ ಆರೋಗ್ಯ ಸಚಿವಾಲಯ ತಿಳಿಸಿದೆ.

ಇನ್ನು ಈ ಬಗ್ಗೆ ಅಲ್ಲಿನ ಸ್ಥಳೀಯ ಮಾಧ್ಯಮಗಳು ಮಾಡಿದ ವರದಿಗಳ ಪ್ರಕಾರ ಈ ವಿಡಿಯೋವು ರಷ್ಯಾದ ಸೇನೆ, ನಾಗರಿಕ ಯಾನ ಮತ್ತು ನೌಕಾಪಡೆಗೆ ಸಹಾಯ ಮಾಡಲು ಇರುವ ಒಂದು ಸ್ವಯಂ ಸೇವಕ ಸಂಸ್ಥೆಗೆ ಸೇರಿದ್ದು ಆಗಿದೆ. ಹಾಗೆಯೇ ಇದು ಕ್ರೀಡಾ ಮತ್ತು ರಕ್ಷಣಾ ಸಂಸ್ಥೆಯಾಗಿದೆ ಎಂದು ಕೂಡಾ ರಷ್ಯಾದ ಸ್ಥಳೀಯ ಮಾಧ್ಯಮಗಳು ವಿವರಿಸಿದೆ.

ಈ ವರ್ಷದ ಆರಂಭದಲ್ಲಿ ರಷ್ಯಾದಲ್ಲಿ ಎರಡು ಎಲ್‌-410 ವಿಮಾನಗಳು ಪತನವಾಗಿದೆ.

Sixteen people were killed after an aircraft carrying parachutists crashed in central Russia on Sunday, the emergencies ministry said. The L-410 plane carrying 22 people crashed around 9:23 a.m. local time (0623 GMT) during a flight over the republic of Tatarstan, the ministry said on its Telegram channel.