ರೈತರಿಗೆ ಬೆಂಬಲಿಸಿದ್ದ ವಾಜಪೇಯಿ ಭಾಷಣದ ವಿಡಿಯೋ ಹಂಚಿಕೊಂಡ ಸಂಸದ ವರುಣ್ ಗಾಂಧಿ

14-10-21 07:10 pm       Headline Karnataka News Network   ದೇಶ - ವಿದೇಶ

ರಾಷ್ಟ್ರೀಯ ನಾಯಕರ ಕೆಂಗಣ್ಣಿಗೆ ಗುರಿಯಾಗಿರುವ ಬಿಜೆಪಿ ಸಂಸದ ವರುಣ್ ಗಾಂಧಿ ಇದೀಗ ಮಾಜಿ ಪ್ರಧಾನಿ ವಾಜಪೇಯಿಯವರು 1980 ರಲ್ಲಿ ರೈತರ ಪರ ಮಾಡಿದ್ದ ಭಾಷಣದ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.

ನವದೆಹಲಿ, ಅ.14: ಇತ್ತೀಚೆಗೆ ಲಖೀಮ್ ಪುರ್ ಖೇರಿಯಲ್ಲಿ ರೈತರ ಮೇಲಿನ ದಾಳಿ ಘಟನೆಯನ್ನು ಖಂಡಿಸಿ ಪಕ್ಷದ ರಾಷ್ಟ್ರೀಯ ನಾಯಕರ ಕೆಂಗಣ್ಣಿಗೆ ಗುರಿಯಾಗಿರುವ ಬಿಜೆಪಿ ಸಂಸದ ವರುಣ್ ಗಾಂಧಿ ಇದೀಗ ಮಾಜಿ ಪ್ರಧಾನಿ ವಾಜಪೇಯಿಯವರು 1980 ರಲ್ಲಿ ರೈತರ ಪರ ಮಾಡಿದ್ದ ಭಾಷಣದ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.

ವಾಜಪೇಯಿ ಅವರು ರೈತರ ಮೇಲೆ ದಬ್ಬಾಳಿಕೆ ನಡೆಸದಂತೆ ಅಂದಿನ ಇಂದಿರಾ ಗಾಂಧಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದರು. ವಾಜಪೇಯಿ ರೈತರನ್ನು ಬೆಂಬಲಿಸಿದ್ದ ವಿಡಿಯೋ ತುಣುಕನ್ನು ಹಂಚಿಕೊಂಡಿರುವ ವರುಣ್ ಗಾಂಧಿ ಪರೋಕ್ಷವಾಗಿ ಕೇಂದ್ರ ನಾಯಕರಿಗೆ ಟಾಂಗ್ ನೀಡಿದ್ದಾರೆ.

ಕೇಂದ್ರ ಸರಕಾರದ ಮೂರು ಪ್ರಸ್ತಾವಿತ ಕಾನೂನುಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವೆ, ರೈತರು ಕೇಂದ್ರ ಸರಕಾರದ ಜೊತೆ ನಡೆಸಿರುವ ಹಲವು ಸುತ್ತಿನ ಮಾತುಕತೆಗಳು ವಿಫಲವಾಗಿವೆ. ಇದೀಗ ವಾಜಪೇಯಿಯವರು ರೈತರ ಬಗ್ಗೆ ಆಡಿದ್ದ ಮಾತುಗಳನ್ನು ವರುಣ್ ಗಾಂಧಿ ಟ್ವೀಟ್ ಮಾಡುವ ಮೂಲಕ ಹಳೆಯದನ್ನು ಮೆಲುಕು ಹಾಕುವಂತೆ ಸಲಹೆ ಮಾಡಿದ್ದಾರೆ.

ವಿಶಾಲ ಹೃದಯದ ನಾಯಕನ ಜಾಣ್ಮೆಯ ಮಾತುಗಳು ಎಂದು ಬಣ್ಣಿಸಿ, ವಾಜಪೇಯಿ ಮಾತುಗಳ ತುಣುಕನ್ನು ಟ್ವೀಟ್ ಮಾಡಿದ್ದಾರೆ. ಆಗ ವಿರೋಧ ಪಕ್ಷದಲ್ಲಿದ್ದ ವಾಜಪೇಯಿ, ಸರಕಾರವು ರೈತರನ್ನು ದಮನಿಸಿದರೆ, ಕಾನೂನು ಪ್ರಯೋಗಿಸಿ ಹತ್ತಿಕ್ಕಲು ಯತ್ನಿಸಿದರೆ ನಾವು ರೈತರ ಜೊತೆಗೆ ನಿಲ್ಲಲು ಹಿಂಜರಿಯಲ್ಲ. ರೈತರು ಸರಕಾರದ ಗೊಡ್ಡು ಬೆದರಿಕೆಗೆ ಹಿಂಜರಿಯದಿರಿ ಎಂದು ಹೇಳಿದ್ದರು.

ಇತ್ತೀಚೆಗೆ ಲಖೀಮ್ ಪುರ್ ಖೇರಿಯಲ್ಲಿ ನಡೆದ ಹಿಂಸಾಚಾರ ಮತ್ತು ರೈತರ ಮೇಲೆ ಜೀಪು ಹರಿಸಿದ ವಿಡಿಯೋ ತುಣುಕನ್ನು ಟ್ವೀಟ್ ಮಾಡಿದ್ದ ವರುಣ್ ಗಾಂಧಿ, ತಪ್ಪಿತಸ್ಥರನ್ನು ಬಂಧಿಸುವಂತೆ ಒತ್ತಾಯಿಸಿದ್ದರು. ಅದರ ಬೆನ್ನಲ್ಲೇ ವರುಣ್ ಗಾಂಧಿ ಅವರನ್ನು ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯತ್ವದಿಂದ ತೆಗೆದು ಹಾಕಲಾಗಿತ್ತು. 

BJP MP Varun Gandhi - dumped from his party's National Executive this month after calling  for justice for the families of farmers killed in UP's Lakhimpur Kheri, and speaking out in support of other farmers protesting the centre's new laws - is in no mood to back down. This morning Mr Gandhi tweeted an undated video of (a very young-looking) Atal Bihari Vajpayee, in which the late former Prime Minister warns the government against intimidating farmers.