ಇಟಲಿಯಲ್ಲಿ ಮೋದಿ ಮೋಡಿ ; ಪೋಪ್ ಫ್ರಾನ್ಸಿಸ್ ಭೇಟಿ, ಮಾತುಕತೆ, ಗುಜರಾತಿ – ಮರಾಠಿಗರ ಜೊತೆ ಬೆರೆತ ಪ್ರಧಾನಿ

30-10-21 04:22 pm       Headline Karnataka News Desk   ದೇಶ - ವಿದೇಶ

ಇಟೆಲಿ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ವ್ಯಾಟಿಕನ್ ಸಿಟಿಯಲ್ಲಿ ಕೆಥೋಲಿಕ್ ಕ್ರಿಸ್ತಿಯನ್ನರ ಚರ್ಚ್ ಮುಖ್ಯಸ್ಥ 5ನೇ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿಯಾಗಿದ್ದಾರೆ.

ರೋಮ್, ಅ.30: ಇಟೆಲಿ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ವ್ಯಾಟಿಕನ್ ಸಿಟಿಯಲ್ಲಿ ಕೆಥೋಲಿಕ್ ಕ್ರಿಸ್ತಿಯನ್ನರ ಚರ್ಚ್ ಮುಖ್ಯಸ್ಥ 5ನೇ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿಯಾಗಿದ್ದಾರೆ. ಫ್ರಾನ್ಸಿಸ್ 2013ರಲ್ಲಿ ಪೋಪ್ ಆದಬಳಿಕ ಅವರನ್ನು ಭಾರತದ ಪ್ರಧಾನಿ ಇದೇ ಮೊದಲ ಬಾರಿಗೆ ಭೇಟಿ ಮಾಡಿದ್ದಾರೆ.

ಕೋವಿಡ್ ಸಾಂಕ್ರಾಮಿಕ ರೋಗ ಮತ್ತು ಪ್ರಚಲಿತ ಜಾಗತಿಕ ಪರಿಸ್ಥಿತಿ ಹಾಗೂ ಶಾಂತಿ ಕಾಪಾಡುವ ನೆಲೆಯಲ್ಲಿ ಒಂದು ಗಂಟೆ ಕಾಲ ಇವರಿಬ್ಬರು ಮಾತುಕತೆ ನಡೆಸಿದ್ದಾರೆ. 20 ನಿಮಿಷ ಕಾಲ ಭೇಟಿ ಮತ್ತು ಮಾತುಕತೆ ನಿಗದಿಯಾಗಿತ್ತು. ಆದರೆ, ಒಂದು ಗಂಟೆ ವರೆಗೂ ಮಾತುಕತೆ ನಡೆಸಿದ್ದಲ್ಲದೆ, ಪೋಪ್ ಅವರನ್ನು ಭಾರತಕ್ಕೆ ಬರುವಂತೆ ಮೋದಿ ಆಹ್ವಾನ ನೀಡಿದ್ದಾರೆ. ಮೋದಿ ಜೊತೆಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಮತ್ತು ವಿದೇಶಾಂಗ ಸಚಿವ ಎಸ್.ಜೈಶಂಕರ್ ಇದ್ದರು. ಕೊನೆಯ ಬಾರಿಗೆ 1999 ರಲ್ಲಿ ವಾಜಪೇಯಿ ಪ್ರಧಾನಿ ಆಗಿದ್ದಾಗ, ಪೋಪ್ ಎರಡನೇ ಜಾನ್ ಪೌಲ್ ಭಾರತಕ್ಕೆ ಭೇಟಿ ನೀಡಿದ್ದರು.  

ಅ.30 ಮತ್ತು 31ರಂದು ನಡೆಯುವ ಜಿ20 ಸಮಾವೇಶಕ್ಕಾಗಿ ಪ್ರಧಾನಿ ಮೋದಿ ರೋಮ್ ತೆರಳಿದ್ದಾರೆ. ಸಮಾವೇಶದಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ಪ್ರಧಾನಿಯವರು ಇಟೆಲಿಯಲ್ಲಿ ನೆಲೆಸಿರುವ ಭಾರತೀಯ ಮೂಲದವರನ್ನು ಭೇಟಿಯಾಗಿದ್ದಾರೆ. ಮೋದಿಯವರನ್ನು ಮರಾಠಿ ಮತ್ತು ಗುಜರಾತ್ ಮೂಲದ ಸಮುದಾಯದ ನಿಯೋಗ ಭೇಟಿಯಾಗಿ ಮಾತುಕತೆ ನಡೆಸಿದೆ.

ಮೋದಿ, ಗುಜರಾತ್ ಮತ್ತು ಮರಾಠಿ ಸಮುದಾಯದ ನಿಯೋಗವನ್ನು ಭೇಟಿಯಾಗಿ ಹರ್ಷಚಿತ್ತರಾಗಿ ಮಾತುಕತೆ ನಡೆಸುತ್ತಿರುವ ವಿಡಿಯೋವನ್ನು ಮಹಾರಾಷ್ಟ್ರದ ಬಿಜೆಪಿ ಅಧ್ಯಕ್ಷ ದೇವೇಂದ್ರ ಫಡ್ನವಿಸ್ ಟ್ವೀಟ್ ಮಾಡಿದ್ದಾರೆ. ಅದರಲ್ಲಿ ಮೋದಿ ಮರಾಠಿ ಮತ್ತು ಗುಜರಾತಿ ಭಾಷೆಯಲ್ಲಿ ಜನರ ಜೊತೆ ವ್ಯವಹರಿಸುತ್ತಿರುವುದು ಕಂಡುಬಂದಿದೆ. ಹರಿಓಂ ಕಾಲಿಯಾ ಎಂಬವರು ಮೋದಿ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು 20 ವರ್ಷಗಳಿಂದ ಇಟಲಿಯಲ್ಲಿದ್ದು ಯೋಗ ಟೀಚರ್ ಆಗಿದ್ದೇನೆ ಎಂದಿದ್ದಾರೆ. ಅವರ ಜೊತೆಗಿದ್ದ ಮೂವರು ಶಿಷ್ಯರು ಶಿವಸ್ತುತಿ ಹೇಳಿದ್ದು ಮೋದಿಯವರ ಮುಖದಲ್ಲಿ ಮಂದಹಾಸ ಎಬ್ಬಿಸಿತ್ತು.

ಗುಜರಾತಿ ಮಹಿಳೆಯೊಬ್ಬರು ಮೋದಿಗೆ ಅಭಿನಂದಿಸುತ್ತಾ , ನರೇಂದ್ರ ಭಾಯಿ ಕೇಮ್ ಚೋ ಎಂದು ಕೇಳಿದ್ದಾರೆ. ಪ್ರತಿಕ್ರಿಯಿಸಿದ ಮೋದಿ, ಮಜಾ ಮಾ (ಚೆನ್ನಾಗಿದ್ದೇನೆ) ಎಂದು ಹೇಳಿದ್ದಾರೆ. ಮೋದಿ ಪ್ರತಿ ಬಾರಿ ಅಮೆರಿಕ ಇನ್ನಿತರ ದೇಶಗಳಿಗೆ ತೆರಳಿದರೆ ಅಲ್ಲಿನ ಭಾರತೀಯ ಸಮುದಾಯದವರ ನಿಯೋಗದ ಜೊತೆ ಮಾತುಕತೆ ನಡೆಸುತ್ತಾರೆ. ಅವರ ಜೊತೆ ಬೆರೆತು ಕುಶಲೋಪರಿ ಮಾತನಾಡುವುದನ್ನು ರೂಢಿಸಿಕೊಂಡಿದ್ದಾರೆ.

 Prime Minister Narendra Modi has invited Pope Francis to India after a one-on-one meeting in Vatican City on Saturday. He was accompanied by National Security Advisor Ajit Doval and Foreign Minister Dr S Jaishankar. The meeting was scheduled only for 20 minutes but went on for an hour.