ಬುರ್ಖಾ ಬಿಟ್ಟು ಜೀನ್ಸ್ ಧರಿಸಿದ್ದಕ್ಕಾಗಿ ಹುಡುಗಿಯನ್ನು ಮನೆಯಿಂದ ಹೊರತಳ್ಳಿ, ಆಕೆಯ ತಂದೆಗೆ ಹಲ್ಲೆ !

01-11-21 07:32 pm       Headline Karnataka News Desk   ದೇಶ - ವಿದೇಶ

ಮುಸ್ಲಿಮ್ ಹುಡುಗಿಯೊಬ್ಬಳು ಬುರ್ಖಾ ಬದಲಿಗೆ ಜೀನ್ಸ್ ಧರಿಸಿದ್ದಾಳೆಂದು ಅವಾಚ್ಯವಾಗಿ ನಿಂದಿಸಿ ಹೊರಕ್ಕೆ ತಳ್ಳಿದ್ದಲ್ಲದೆ, ಇದನ್ನು ಪ್ರಶ್ನೆ ಮಾಡಿದ ಆಕೆಯ ತಂದೆಯ ಮೇಲೆ ಹಲ್ಲೆಗೈದ ಘಟನೆ ಅಸ್ಸಾಮ್ ರಾಜ್ಯದ ಬಿಸ್ವಾಂತ್ ಜಿಲ್ಲೆಯಲ್ಲಿ ನಡೆದಿದೆ. ಘಟನೆ ಬಗ್ಗೆ ಯುವತಿ ದೂರಿನಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಗುವಾಹಟಿ, ನ.1: ಮುಸ್ಲಿಮ್ ಹುಡುಗಿಯೊಬ್ಬಳು ಬುರ್ಖಾ ಬದಲಿಗೆ ಜೀನ್ಸ್ ಧರಿಸಿದ್ದಾಳೆಂದು ಅವಾಚ್ಯವಾಗಿ ನಿಂದಿಸಿ ಹೊರಕ್ಕೆ ತಳ್ಳಿದ್ದಲ್ಲದೆ, ಇದನ್ನು ಪ್ರಶ್ನೆ ಮಾಡಿದ ಆಕೆಯ ತಂದೆಯ ಮೇಲೆ ಹಲ್ಲೆಗೈದ ಘಟನೆ ಅಸ್ಸಾಮ್ ರಾಜ್ಯದ ಬಿಸ್ವಾಂತ್ ಜಿಲ್ಲೆಯಲ್ಲಿ ನಡೆದಿದೆ. ಘಟನೆ ಬಗ್ಗೆ ಯುವತಿ ದೂರಿನಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ನೂರುಲ್ ಅಮೀನ್ ಮತ್ತು ಆತನ ಮಗ ರಫೀಕುಲ್ ಇಸ್ಲಾಮ್ ಬಂಧಿತರು. ನೂರುಲ್ ಅಮೀನ್ ತನ್ನ ಮನೆಯಲ್ಲೇ ಮೊಬೈಲ್ ಸಂಬಂಧಿತ ಉಪಕರಣಗಳನ್ನು ಮಾರಾಟ ಮಾಡುವ ವ್ಯವಹಾರ ನಡೆಸುತ್ತಿದ್ದ. ಅಲ್ಲಿಯ ಪರಿಸರದ ನಿವಾಸಿಯಾಗಿದ್ದ ಹುಡುಗಿಯೊಬ್ಬಳು ಇಯರ್ ಫೋನ್ ಖರೀದಿಸುವುದಕ್ಕಾಗಿ ಅಲ್ಲಿಗೆ ತೆರಳಿದ್ದಳು. ಆದರೆ, ಹುಡುಗಿ ಜೀನ್ಸ್ ಪ್ಯಾಂಟ್ ಹಾಕಿದನ್ನು ನೋಡಿದ ನೂರುಲ್ ಮತ್ತು ಆತನ ಮಗ ಸೇರಿಕೊಂಡು ಅವಾಚ್ಯವಾಗಿ ನಿಂದಿಸಿದ್ದಾರೆ.

ನೀನೊಬ್ಬಳು ನಡತೆಗೆಟ್ಟ ಹೆಣ್ಣಾಗಿದ್ದು, ನಮ್ಮ ಸಂಪ್ರದಾಯದಂತೆ ಬುರ್ಖಾ ಧರಿಸುವುದು ಬಿಟ್ಟು ಈ ರೀತಿಯ ಡ್ರೆಸ್ ಧರಿಸಿದ್ದೀಯಲ್ಲ.. ನೀನು ಮನೆಯ ಒಳಗೆ ಬರಬಾರದೆಂದು ದೂಡಿ, ಮನೆಯಿಂದ ಹೊರಕ್ಕೆ ತಳ್ಳಿದ್ದಾರೆ. ಅವಾಚ್ಯವಾಗಿ ನಿಂದಿಸಿ ಹೊರಹಾಕಿದ್ದನ್ನು ಪ್ರಶ್ನಿಸಲು, ಹುಡುಗಿಯ ತಂದೆ ಆನಂತರ ಅಲ್ಲಿಗೆ ತೆರಳಿದಾಗ, ಆರೋಪಿ ತಂದೆ- ಮಗ ಸೇರಿಕೊಂಡು ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಯುವತಿ ನೀಡಿದ ದೂರಿನಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬಿಸ್ವಂತ್ ಜಿಲ್ಲೆಯ ಎಸ್ಪಿ ಲೀನಾ ಧೋಲೆ ಹೇಳಿದ್ದಾರೆ. ಆರೋಪಿಗಳನ್ನು ಬಂಧಿಸಿದ ಬಳಿಕ ಅವರು ಕೂಡ ಪ್ರತಿ ದೂರು ನೀಡಿದ್ದು, ಹುಡುಗಿ ತಂದೆಯೂ ನಮ್ಮ ಮೇಲೆ ಕೈಮಾಡಿದ್ದಾನೆಂದು ದೂರಿದ್ದಾರೆ. 

A Muslim man allegedly abused a girl, also a Muslim, and pushed her out of his house in Biswanath district of Assam, reportedly because she was wearing jeans instead of a burqa.  Later, the man’s son allegedly assaulted the girl’s father when the latter had gone to complain about the matter