ಬ್ರೇಕಿಂಗ್ ನ್ಯೂಸ್
06-11-21 02:32 pm HK News Desk ದೇಶ - ವಿದೇಶ
ನವದೆಹಲಿ, ನ.6: ತೈಲದ ಮೇಲಿನ ವ್ಯಾಟ್ ತೆರಿಗೆಯನ್ನು ಇಳಿಸುವಂತೆ ಕೇಂದ್ರ ಸರಕಾರ ಮಾಡಿದ್ದ ಸಲಹೆಯನ್ನು ಬಿಜೆಪಿ ಸೇರಿದಂತೆ ಎನ್ ಡಿಎ ಒಕ್ಕೂಟದ ಘಟಕ ಪಕ್ಷಗಳು ಅಧಿಕಾರ ನಡೆಸುತ್ತಿರುವ ರಾಜ್ಯಗಳು ಮಾತ್ರ ಸ್ವೀಕರಿಸಿದ್ದು, ತೆರಿಗೆ ಇಳಿಕೆ ಮಾಡಿದೆ. ಆದರೆ, ವಿರೋಧಿ ಪಕ್ಷಗಳ ಆಡಳಿತದ ರಾಜ್ಯಗಳಲ್ಲಿ ಇನ್ನೂ ಈ ಬಗ್ಗೆ ನಿರ್ಧಾರ ಕೈಗೊಂಡಿಲ್ಲ.
ಕೇಂದ್ರ ಸರಕಾರ ಪೆಟ್ರೋಲಿಗೆ 5 ರೂ. ಮತ್ತು ಡೀಸೆಲ್ ಮೇಲೆ 10 ರೂ. ತೆರಿಗೆಯನ್ನು ಇಳಿಕೆ ಮಾಡಿತ್ತು. ಅದೇ ವೇಳೆ, ರಾಜ್ಯಗಳು ತಮ್ಮ ಪಾಲಿನ ವ್ಯಾಟ್ ತೆರಿಗೆಯನ್ನು ಇಳಿಸಲು ಸಲಹೆ ಮಾಡಿತ್ತು. ಆದರೆ, ಬಿಜೆಪಿ ಮತ್ತು ಎನ್ ಡಿಎ ಘಟಕ ಪಕ್ಷಗಳು ಅಧಿಕಾರ ನಡೆಸುತ್ತಿರುವ ಗುಜರಾತ್, ಉತ್ತರ ಪ್ರದೇಶ, ಕರ್ನಾಟಕ, ತ್ರಿಪುರಾ, ಗೋವಾ, ಉತ್ತರಾಖಂಡ್, ಮಣಿಪುರ್, ಅಸ್ಸಾಮ್, ಬಿಹಾರ ಮತ್ತು ಹರ್ಯಾಣ ಸರಕಾರಗಳು ಮಾತ್ರ ತೆರಿಗೆಯನ್ನು ಇಳಿಸಿ, ಜನರ ಹೊರೆಯನ್ನು ತಗ್ಗಿಸುವ ಕೆಲಸ ಮಾಡಿದೆ.
ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಕಮ್ಯುನಿಸ್ಟ್ ಪಕ್ಷಗಳ ಆಡಳಿತದ ಪಂಜಾಬ್, ಪಶ್ಚಿಮ ಬಂಗಾಳ, ತಮಿಳುನಾಡು, ಚತ್ತೀಸ್ ಗಢ, ಜಾರ್ಖಂಡ್, ಕೇರಳ ರಾಜ್ಯಗಳು ಇನ್ನೂ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇದೇ ವೇಳೆ, ಎನ್ ಡಿಎ ಕೂಟದ ಹೊರತಾದ ಬಿಜು ಜನತಾದಳ ಪಕ್ಷ ಆಡಳಿತ ನಡೆಸುವ ಒಡಿಶಾದಲ್ಲಿಯೂ ವ್ಯಾಟ್ ತೆರಿಗೆಯನ್ನು ಇಳಿಸಲಾಗಿದೆ. ಈಶಾನ್ಯ ರಾಜ್ಯಗಳಾದ ಮಿಜೋರಾಂ, ನಾಗಾಲ್ಯಾಂಡ್ ರಾಜ್ಯಗಳಲ್ಲಿಯೂ ದರ ಇಳಿಕೆಯಾಗಿದೆ. ಕೇಂದ್ರಾಡಳಿತ ಪ್ರದೇಶಗಳಾದ ಪುದುಚೇರಿ, ಜಮ್ಮ ಕಾಶ್ಮೀರ, ಪಾಂಡಿಚೇರಿಗಳಲ್ಲಿಯೂ ತೈಲ ದರವನ್ನು ಇಳಿಸಲಾಗಿದೆ.
ಇದೇ ವೇಳೆ, ಪ್ರತಿಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯಗಳು ತೈಲ ದರವನ್ನು ಇಳಿಸುವ ಗೊಡವೆಗೆ ಹೋಗಿಲ್ಲ. ಇದೇ ವೇಳೆ, ಕೇರಳ ಹಣಕಾಸು ಮಂತ್ರಿ ಕೆ.ಎನ. ವೇಣುಗೋಪಾಲ್, ಕೇಂದ್ರ ಸರಕಾರದ ನಿರ್ಧಾರವನ್ನೇ ಟೀಕೆ ಮಾಡಿದ್ದಾರೆ. ಕೇಂದ್ರ ಸರಕಾರವು ದೇಶಾದ್ಯಂತ ಜನರ ಆಕ್ರೋಶವನ್ನು ತಣಿಸಲು ಮುಖ ಉಳಿಸಿಕೊಳ್ಳುವುದಕ್ಕಾಗಿ ಸಣ್ಣ ಪ್ರಮಾಣದ ಇಳಿಕೆ ಮಾಡಿದೆ. ಇದು ಜನರ ಕಣ್ಣಿಗೆ ಮಣ್ಣೆರಚುವ ತಂತ್ರ ಎಂದು ಟೀಕಿಸಿದ್ದಾರೆ. ಕೇಂದ್ರ ಸರಕಾರವು ಹೆಚ್ಚುವರಿ ತೆರಿಗೆಯನ್ನು ಹೊಂದಿದ್ದು, ಕೇರಳದಲ್ಲಿ ರಾಜ್ಯ ತೆರಿಗೆಯನ್ನು ಇಳಿಸಿದಲ್ಲಿ ಹಣಕಾಸು ತೊಂದರೆಗೆ ಸಿಲುಕುತ್ತೇವೆ ಎಂದಿದ್ದಾರೆ.
ಮುಂದಿನ ವರ್ಷ ಉತ್ತರ ಪ್ರದೇಶ, ಗೋವಾ, ಪಂಜಾಬ್ ನಲ್ಲಿ ಚುನಾವಣೆ ನಡೆಯಲಿದ್ದು ಅದರ ಹಿನ್ನೆಲೆಯಲ್ಲಿ ತೈಲ ದರದಲ್ಲಿ ಇಳಿಕೆ ಮಾಡಲಾಗಿದೆ ಎನ್ನಲಾಗುತ್ತಿದೆ. ಬಿಜೆಪಿ ಆಡಳಿತದ ಹೆಚ್ಚಿನ ರಾಜ್ಯಗಳು ತಲಾ ಏಳು ರೂ.ಗಳಂತೆ ತೆರಿಗೆಯನ್ನು ಇಳಿಸಿದ್ದು ಉತ್ತರ ಪ್ರದೇಶದಲ್ಲಿ ಮಾತ್ರ ತಲಾ 12 ರೂ. ಇಳಿಕೆ ಮಾಡಲಾಗಿದೆ. ಬಿಹಾರದಲ್ಲಿ ಪೆಟ್ರೋಲಿಗೆ 3.20, ಡೀಸೆಲಿಗೆ 3.90 ರೂ. ಇಳಿಸಿದ್ದರೆ, ಉತ್ತರಾಖಂಡದಲ್ಲಿ ತಲಾ ಎರಡು ರೂ. ಇಳಿಕೆ ಮಾಡಲಾಗಿದೆ. ಮಧ್ಯಪ್ರದೇಶದಲ್ಲಿ ತಲಾ ನಾಲ್ಕು ರೂ. ತೆರಿಗೆ ಇಳಿಸಲಾಗಿದೆ. ಇದರಂತೆ, ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಬಹುತೇಕ ಇಳಿಕೆಯಾಗಿದೆ.
Petrol and diesel prices recently saw a huge dip as the government slashed excise duty on both the fuels. Petrol price was cut down by Rs 5 while diesel price went down by Rs 10 across India on the eve of Diwali. On this note, several BJP as well as NDA-ruled states also slashed the Value Added Tax (VAT) on fuel prices, to make them even cheaper. However, most Opposition-ruled states were yet to take a decision even after two days following the Centre’s stint. The move was an apparent attempt to provide relief to citizens reeling under the impact of increasing fuel prices.
13-07-25 08:37 pm
HK News Desk
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
ಬೀದಿನಾಯಿಗಳಿಗೆ ಬಿರಿಯಾನಿ ಭಾಗ್ಯ ; ಶಾಲೆಗಳಲ್ಲಿ ಮಕ...
12-07-25 07:07 pm
ಧರ್ಮಸ್ಥಳ ಘಟನೆ ; ಒಬ್ಬ ವ್ಯಕ್ತಿಯ ಪರವಾಗಿ ವಕೀಲರು ದ...
11-07-25 06:36 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm