ಕೋವಿಡ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ ; ಐಸಿಯುನಲ್ಲಿದ್ದ 11 ಮಂದಿ ಸಜೀವ ದಹನ !

06-11-21 06:48 pm       HK News Desk   ದೇಶ - ವಿದೇಶ

ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯ ಸರಕಾರಿ ಕೋವಿಡ್ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ಬೆಂಕಿ ಕಾಣಿಸಿಕೊಂಡು 11 ಮಂದಿ ರೋಗಿಗಳು ದುರಂತ ಸಾವು ಕಂಡಿದ್ದಾರೆ.

ಮುಂಬೈ, ನ.6: ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯ ಸರಕಾರಿ ಕೋವಿಡ್ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ಬೆಂಕಿ ಕಾಣಿಸಿಕೊಂಡು 11 ಮಂದಿ ರೋಗಿಗಳು ದುರಂತ ಸಾವು ಕಂಡಿದ್ದಾರೆ.

ಸದ್ರಿ ಐಸಿಯು ವಾರ್ಡ್ ನಲ್ಲಿ 17 ಮಂದಿ ಇದ್ದರು. ಈ ಪೈಕಿ ಕೆಲವರನ್ನು ಬೇರೆ ವಿಭಾಗಕ್ಕೆ ಸ್ಥಳಾಂತರ ಮಾಡಲಾಗಿದೆ. ಮೂರ್ನಾಲ್ಕು ಮಂದಿ ಗಾಯಗೊಂಡಿದ್ದು, ಹನ್ನೊಂದು ಮಂದಿ ಸಾವಿಗೀಡಾಗಿದ್ದಾರೆ ಎಂದು ಅಹ್ಮದ್ ನಗರ ಜಿಲ್ಲಾಧಿಕಾರಿ ರಾಜೇಂದ್ರ ಭೋಂಸ್ಲೆ ತಿಳಿಸಿದ್ದಾರೆ.

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಘಟನೆ ಬಗ್ಗೆ ತನಿಖೆಗೆ ಆದೇಶ ಮಾಡಿದ್ದು, ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಜಿಲ್ಲಾಧಿಕಾರಿ ಹೇಳಿಕೆ ಪ್ರಕಾರ, ಶಾರ್ಟ್ ಸರ್ಕಿಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗುತ್ತಿದೆ. ಬೆಂಕಿಯಿಂದಾಗಿ ಹೊಗೆ ಆವರಿಸಿದ್ದು, ರೋಗಿಗಳನ್ನು ಬಚಾವ್ ಮಾಡಲು ವೈದ್ಯರು ಮತ್ತು ಇತರ ಸಿಬಂದಿ ಹರಸಾಹಸ ಪಟ್ಟಿದ್ದಾರೆ. ಇದರ ವಿಡಿಯೋಗಳು ವೈರಲ್ ಆಗಿದ್ದು, ಹೃದಯ ವಿದ್ರಾವಕ ದೃಶ್ಯಗಳು ಸೆರೆಯಾಗಿವೆ.

ಘಟನೆ ಬಗ್ಗೆ ಭಾರೀ ಆತಂಕ ವ್ಯಕ್ತಪಡಿಸಿರುವ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್, ಯಾರು ಹೊಣೆಯಾಗಿದ್ದಾರೋ ಅವರಿಗೆ ಸೂಕ್ತ ಶಿಕ್ಷೆಯಾಗಬೇಕು. ಆಸ್ಪತ್ರೆಗಳಲ್ಲಿ ಬೆಂಕಿ ನಿರೋಧಕ ಯಂತ್ರಗಳನ್ನು ಹೊಂದಿರಬೇಕು ಎಂಬ ನಿಯಮ ಇದ್ದರೂ, ಇಲ್ಲಿ ಇಷ್ಟು ಗಂಭೀರ ಸ್ಥಿತಿ ಎದುರಾಗಲು ಏನು ಕಾರಣ ಅನ್ನುವುದರ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಪ್ರಧಾನಿ ಮೋದಿ ಕೂಡ, ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. 

Eleven patients died after a fire broke out in the ICU (intensive care unit) of the Civil Hospital in Maharashtra's Ahmednagar on Saturday morning. Three to four others have been injured and are being treated. The fire was in the hospital's COVID-19 ward, in which 17 patients had been admitted. The remaining patients have been shifted to a Covid ward in another hospital, District Collector Rajendra Bhosle told reporters, adding that a 'fire audit' of the structure had been conducted.