ಎಸ್ ಬಿಐನಿಂದ ಜನಧನ್ ಖಾತೆದಾರರಿಗೆ ಎರಡು ಲಕ್ಷದ ಅಪಘಾತ ವಿಮೆ, ಇತರೇ ಗ್ರಾಹಕರಿಗೆ 1 ಲಕ್ಷದ ಇನ್ಶೂರೆನ್ಸ್ ಉಚಿತ

06-11-21 06:57 pm       HK News Desk   ದೇಶ - ವಿದೇಶ

ಕೇಂದ್ರ ಸರಕಾರದ ಯೋಜನೆಯಡಿ ಜನಧನ್ ಖಾತೆ ಮಾಡಿದವರಿಗೆ ಮತ್ತೊಂದು ಸಿಹಿಸುದ್ದಿ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ರುಪೇ ಜನಧನ್ ಕಾರ್ಡ್ ಮಾಡಿದವರಿಗೆ ಎರಡು ಲಕ್ಷದ ವರೆಗೆ ಉಚಿತ ಇನ್ಶೂರೆನ್ಸ್ ಸ್ಕೀಮ್ ಅನ್ನು ಕೇಂದ್ರ ಸರಕಾರ ಜಾರಿಗೆ ತಂದಿದೆ.

ನವದೆಹಲಿ, ನ.6: ಕೇಂದ್ರ ಸರಕಾರದ ಯೋಜನೆಯಡಿ ಜನಧನ್ ಖಾತೆ ಮಾಡಿದವರಿಗೆ ಮತ್ತೊಂದು ಸಿಹಿಸುದ್ದಿ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ರುಪೇ ಜನಧನ್ ಕಾರ್ಡ್ ಮಾಡಿದವರಿಗೆ ಎರಡು ಲಕ್ಷದ ವರೆಗೆ ಉಚಿತ ಇನ್ಶೂರೆನ್ಸ್ ಸ್ಕೀಮ್ ಅನ್ನು ಕೇಂದ್ರ ಸರಕಾರ ಜಾರಿಗೆ ತಂದಿದೆ. ಅಲ್ಲದೆ, 2018ರ ಆಗಸ್ಟ್ 28ರ ಒಳಗೆ ಎಸ್ ಬಿಐ ಖಾತೆ ತೆರೆದಿರುವ ಎಲ್ಲ ಗ್ರಾಹಕರಿಗೂ ಒಂದು ಲಕ್ಷ ರೂ. ಉಚಿತ ಅಪಘಾತ ವಿಮೆಯನ್ನು ಪ್ರಕಟಿಸಿದೆ.

ತಳಮಟ್ಟದ ಬಡವರು ಕೂಡ ಬ್ಯಾಂಕ್ ಖಾತೆ ಹೊಂದಿರಬೇಕು ಎನ್ನುವ ದೃಷ್ಟಿಯಿಂದ ಮೋದಿ ಸರಕಾರ ಜನಧನ್ ಖಾತೆ ಯೋಜನೆಯನ್ನು ಜಾರಿಗೆ ತಂದಿತ್ತು. ಶೂನ್ಯ ಮೊತ್ತದಲ್ಲಿ ಬ್ಯಾಂಕ್ ಖಾತೆಯನ್ನು ತೆರೆಯಲು ಅವಕಾಶ ನೀಡಲಾಗಿತ್ತು. ಆನಂತರ, ಸರಕಾರದ ಎಲ್ಲ ಸೌಲಭ್ಯ, ಯೋಜನೆಗಳಿಗೂ ಇದೇ ಖಾತೆಯನ್ನು ಅಳವಡಿಸಲು ಅವಕಾಶ ಮಾಡಲಾಗಿತ್ತು. ಖಾತೆ ತೆರೆಯುವ ಸಂದರ್ಭದಲ್ಲೇ ರೂಪೇ ಡೆಬಿಟ್ ಕಾರ್ಡ್ ಕೊಡಲಾಗಿತ್ತು. ಅದರಲ್ಲಿ ಇನ್ ಬಿಲ್ಟ್ ರೀತಿಯಲ್ಲಿ ಒಂದು ಲಕ್ಷ ಮೊತ್ತದ ಅಪಘಾತದ ವಿಮೆಯನ್ನು ಸೇರಿಸಲಾಗಿತ್ತು.

ಇದೀಗ ಎಸ್ ಬಿಐ ಬ್ಯಾಂಕ್ ತನ್ನ ಗ್ರಾಹಕರಿಗೆ ಉಚಿತ ಇನ್ಶೂರೆನ್ಸ್ ಮೊತ್ತವನ್ನು ಒಂದರಿಂದ ಎರಡು ಲಕ್ಷಕ್ಕೆ ಏರಿಸಿದೆ. ಇದೇ ವೇಳೆ, ಇತರೇ ಗ್ರಾಹಕರಿಗೂ ಉಚಿತ ಒಂದು ಲಕ್ಷ ರೂ. ಅಪಘಾತ ವಿಮೆಯನ್ನು ಪ್ರಕಟಿಸಿದೆ. ಎಸ್ ಬಿಐ ಜನಧನ್ ಖಾತೆಯಲ್ಲಿ ಅಪಘಾತ ವಿಮೆಯನ್ನು ಪಡೆಯಲು ಅರ್ಜಿ ಸಲ್ಲಿಸುವ ಸಂದರ್ಭ ವ್ಯಕ್ತಿಯ ಮರಣದ ಬಗ್ಗೆ ಸರ್ಟಿಫಿಕೇಟ್, ಅಪಘಾತ ಆಗಿರುವ ಬಗ್ಗೆ ದಾಖಲಾಗಿರುವ ಎಫ್ಐಆರ್ ಜೊತೆಗಿರಿಸಬೇಕು. ಅಪಘಾತ ನಡೆದು 90 ದಿನಗಳ ಒಳಗೆ ಈ ದಾಖಲೆಗಳನ್ನು ಸಲ್ಲಿಸಿ, ವಿಮಾ ಸೌಲಭ್ಯವನ್ನು ಪಡೆಯಬಹುದಾಗಿದೆ.

ಇದಲ್ಲದೆ, ಜನಧನ್ ಖಾತೆಯಿಂದ ಸರಕಾರದ ವಿವಿಧ ಯೋಜನೆಗಳಾದ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ, ಪ್ರಧಾನ ಮಂತ್ರಿ ಜೀವನ್ ಸುರಕ್ಷಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ನೇರ ಹಣ ಪಾವತಿ ಯೋಜನೆ, ಮುದ್ರಾ ಸಾಲ ಯೋಜನೆಯಲ್ಲಿಯೂ ಸೌಲಭ್ಯವನ್ನು ಪಡೆಯಬಹುದಾಗಿದೆ. 

State Bank of India or SBI constantly comes up with new solutions for the benefits of its customers. This year, the biggest lender of India has launched a service whereby which, its customers can enjoy free insurance benefits of up to Rs 2 lakh. The nominee can claim the insurance amount even if the mishap occurs outside India. The insurance amount is Rs 1 lakh for customers who opened their accounts before August 28, 2018, whereas, people who opened their Jan Dhan accounts after this date can avail accident death coverage of up to Rs 2 lakh. The scheme is applicable for those who apply for ‘SBI RuPay Jan Dhan Card‘.