ಬರಿಗಾಲಿನಲ್ಲೇ ಸರಳ ಸಂತನ ಭಾರತ ದರ್ಶನ ; ಹಾಜಬ್ಬರ ಅಕ್ಷರ ಪ್ರೀತಿ ಕಂಡು ರಾಷ್ಟ್ರಪತಿಗೇ ಅಚ್ಚರಿ! ವಾಟ್ಸಪ್ ಸ್ಟೇಟಸ್ ಹಾಕಿ ಕರಾವಳಿ ಜನರ ಸಂತಸ

08-11-21 06:01 pm       Headline Karnataka News Network   ದೇಶ - ವಿದೇಶ

ಅಕ್ಷರಸಂತ ಎಂದೇ ಹೆಸರಾಗಿರುವ ಕರಾವಳಿಯ ನೈಜರೂಪದ ಸಂತ ಹರೇಕಳ ಹಾಜಬ್ಬ ಆನಂದ ತುಂದಿಲರಾಗಿದ್ದಾರೆ. ತನ್ನ ಕಾಲನ್ನು ತಾನೇ ನಂಬದ ರೀತಿ ನಡೆದುಕೊಂಡಿದ್ದಾರೆ. ಬರಿಗಾಲಲ್ಲೇ ಇಂದು ರಾಷ್ಟ್ರಪತಿ ಭವನ ಪ್ರವೇಶ ಮಾಡಿದ ಹರೇಕಳ ಹಾಜಬ್ಬರು ರಾಷ್ಟ್ರಪತಿ ರಾಮನಾಥ ಕೋವಿಂದ್ ಸ್ವತಃ ಚಕಿತಗೊಳ್ಳುವ ರೀತಿ ತಮ್ಮ ನಿಜರೂಪವನ್ನು ದೇಶಕ್ಕೆ ಪರಿಚಯಿಸಿದ್ದಾರೆ.

ಮಂಗಳೂರು, ನ.8: ಅಕ್ಷರಸಂತ ಎಂದೇ ಹೆಸರಾಗಿರುವ ಕರಾವಳಿಯ ನೈಜರೂಪದ ಸಂತ ಹರೇಕಳ ಹಾಜಬ್ಬ ಆನಂದ ತುಂದಿಲರಾಗಿದ್ದಾರೆ. ತನ್ನ ಕಾಲನ್ನು ತಾನೇ ನಂಬದ ರೀತಿ ನಡೆದುಕೊಂಡಿದ್ದಾರೆ. ಬರಿಗಾಲಲ್ಲೇ ಇಂದು ರಾಷ್ಟ್ರಪತಿ ಭವನ ಪ್ರವೇಶ ಮಾಡಿದ ಹರೇಕಳ ಹಾಜಬ್ಬರು ರಾಷ್ಟ್ರಪತಿ ರಾಮನಾಥ ಕೋವಿಂದ್ ಸ್ವತಃ ಚಕಿತಗೊಳ್ಳುವ ರೀತಿ ತಮ್ಮ ನಿಜರೂಪವನ್ನು ದೇಶಕ್ಕೆ ಪರಿಚಯಿಸಿದ್ದಾರೆ.

ದೇಶದ ಅತ್ಯುನ್ನತ ನಾಲ್ಕನೇ ನಾಗರಿಕ ಪುರಸ್ಕಾರ, ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಲು ಇಂದು ರಾಷ್ಟ್ರಪತಿ ಭವನಕ್ಕೆ ಹಾಜಬ್ಬರು ತೆರಳಿದ್ದರು. ಎಂದಿನಂತೆ ಸಾದಾ ಬಿಳಿ ಅಂಗಿ, ಮುಕ್ಕಾಲು ಕಾಲಿನ ಬಿಳಿ ಪಂಚೆ ಧರಿಸಿಕೊಂಡು ಬರಿಗಾಲಿನಲ್ಲೇ ರಾಷ್ಟ್ರಪತಿ ಭವನಕ್ಕೆ ತೆರಳಿದ್ದ ಹಾಜಬ್ಬ ತಮ್ಮ ಸರಳ ವ್ಯಕ್ತಿತ್ವವನ್ನು ಇಡೀ ದೇಶಕ್ಕೆ ತೋರಿಸಿದ್ದಾರೆ. ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.

ಚಪ್ಪಲಿಯನ್ನೂ ಧರಿಸದೆ, ತಮ್ಮ ಎಂದಿನ ಭಯಮಿಶ್ರಿತ ಮನಸ್ಸಿನಲ್ಲೇ ರಾಷ್ಟ್ರಪತಿ ಬಳಿ ತೆರಳಿದ ಹಾಜಬ್ಬರನ್ನು ಕಂಡು ಸ್ವತಃ ರಾಷ್ಟ್ರಪತಿಯವರೇ ದಂಗಾಗಿದ್ದು ಇವರ ಸರಳತೆಗೆ ಮಾರು ಹೋಗಿದ್ದಾರೆ. ರಾಷ್ಟ್ರಪತಿಯವರನ್ನು ನೋಡುತ್ತಾ ಕೈಮುಗಿಯುದರಲ್ಲೇ ತಲ್ಲೀನರಾಗಿದ್ದ ಹಾಜಬ್ಬರನ್ನು ರಾಷ್ಟ್ರಪತಿಯವರು ಕ್ಯಾಮೆರಾ ನೋಡುವಂತೆ ಸೂಚಿಸಿದರೂ, ಹಾಜಬ್ಬ ಮಾತ್ರ ಕೈಮುಗಿದು ವಂದಿಸುವುದರಲ್ಲೇ ಇದ್ದರು.

ಅದಕ್ಕೂ ಮೊದಲೇ ಹಾಜಬ್ಬರು ಪ್ರಶಸ್ತಿ ಸ್ವೀಕರಿಸಲು ಬರುತ್ತಿದ್ದ ಹಾಜಬ್ಬರ ಹಾವಭಾವ, ವೇಷಭೂಷಣವನ್ನು ರಾಷ್ಟ್ರಪತಿಯವರು ತದೇಕಚಿತ್ತದಿಂದ ಗಮನಿಸುತ್ತಿದ್ದರು. ಟಿವಿ ಕ್ಯಾಮರಾಗಳು ಕೂಡ ಹಾಜಬ್ಬರನ್ನು ಝೂಮ್ ಮಾಡಿ ತೋರಿಸಿದ್ದು, ದೇಶಾದ್ಯಂತ ಹಾಜಬ್ಬರು ಟಿವಿ ಚಾನೆಲ್ ಗಳಲ್ಲಿ ಬಿತ್ತರವಾಗಿದ್ದಾರೆ. ಪ್ರಶಸ್ತಿ ಸ್ವೀಕಾರದ ಬಳಿಕ ಹಾಜಬ್ಬರ ಬಗ್ಗೆ ರಾಷ್ಟ್ರಪತಿ ಕೋವಿಂದ್, ತಮ್ಮ ಫೇಸ್‌ಬುಕ್‌ ನಲ್ಲಿ ಪೋಸ್ಟ್ ಮಾಡಿದ್ದಾರೆ. ಮಂಗಳೂರಿನಲ್ಲಿ ಕಿತ್ತಳೆ ಹಣ್ಣನ್ನು ಮಾರಿ, ಅದರಿಂದಲೇ ಹಣ ಸಂಗ್ರಹಿಸಿ ಶಾಲೆ ಕಟ್ಟಿಸಿದ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಪ್ರಶಸ್ತಿ ಒಲಿದಿದೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಪೋಸ್ಟ್ ಮಾಡಿದ್ದಾರೆ.

ಕರಾವಳಿಯಲ್ಲಿ ಹಾಜಬ್ಬ ಸಂಭ್ರಮ

ತಮ್ಮೂರಿನ 65ರ ಅಜ್ಜ ಹಾಜಬ್ಬ ಅತ್ತ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುತ್ತಿದ್ದಂತೆಯೇ ಕರಾವಳಿಯಲ್ಲಿ ಸಂಭ್ರಮ ಮನೆ ಮಾಡಿದೆ. ಹಾಜಬ್ಬರನ್ನು ರಾಷ್ಟ್ರಪತಿಗಳು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ ಚಿತ್ರಗಳು, ವಿಡಿಯೋಗಳನ್ನು ಕರಾವಳಿಯ ಹೆಚ್ಚಿನ ಜನರು ತಮ್ಮ ವಾಟ್ಸಪ್ ಸ್ಟೇಟಸ್ ನಲ್ಲಿ ಹಾಕ್ಕೊಂಡಿದ್ದಾರೆ. ಕೆಲವರು ಹಾಜಬ್ಬರ ಚಿತ್ರಗಳನ್ನು ತಮ್ಮ ಫೋಟೋ ಬದಲಿಗೆ ಡಿಪಿಗಳಲ್ಲೇ ಹಾಕಿದ್ದಾರೆ. ಆಮೂಲಕ ತಮ್ಮೂರಿನ ಅಕ್ಷರಸಂತ ರಾಷ್ಟ್ರದ ಅತ್ಯುನ್ನತ ಗೌರವ ಸ್ವೀಕರಿಸುತ್ತಿರುವುದನ್ನು ತಾವೇ ಪ್ರಶಸ್ತಿ ತೆಗೆದುಕೊಂಡ ರೀತಿ ಜನರು ಸಂಭ್ರಮಿಸಿದ್ದಾರೆ. ಮತ, ಭೇದ ಮರೆತು ಹಾಜಬ್ಬರ ಫೋಟೋಗಳನ್ನು ಹಾಕ್ಕೊಂಡಿದ್ದು ವಿಶೇಷ.

ಮಂಗಳೂರಿನ ಸಾಮಾನ್ಯ ವ್ಯಕ್ತಿ ಅತ್ಯುನ್ನತ ಪ್ರಶಸ್ತಿ ಪಡೆದಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಖುಷಿಪಟ್ಟಿದ್ದಾರೆ. ಹಾಜಬ್ಬರು ನವದೆಹಲಿಯಲ್ಲಿ ಪ್ರಶಸ್ತಿ ಸ್ವೀಕಾರ ಮಾಡುತ್ತಿರುವುದರ ನೇರ ದೃಶ್ಯಗಳನ್ನು ಹಾಜಬ್ಬರ ಹರೇಕಳದ ಶಾಲೆಯಲ್ಲಿ ಮಕ್ಕಳಿಗೆ ತೋರಿಸಲಾಯಿತು. ಹಾಜಬ್ಬರು ಪ್ರಶಸ್ತಿ ಸ್ವೀಕಾರ ಮಾಡುತ್ತಿದ್ದಂತೆಯೇ ಮಕ್ಕಳ ಚಪ್ಪಾಳೆ ಹೊಡೆದು ತಾವೇ ಪ್ರಶಸ್ತಿ ಪಡೆದುಕೊಂಡ ರೀತಿ ಸಂಭ್ರಮಿಸಿದ್ದಾರೆ. 

Harekala Hajabba a person who used to sell oranges received the 'Padma Shri' civilian honor from the President of India, Ram Nath Kovind. He has been awarded on Monday, November 8 in New Delhi. Hajabba got this award for creating a revolution in the field of education by opening a school in his native place which is Harekala. He opened the school from his savings and is also contributing to its growth year after year.  On January 25, 2020 it was announced that Hajabba will be awarded with the Padma Shri award. The function was not held at that time due to the Covid situation. He received a letter that said that he will be getting certificate signed by the President in March 2020 but as mentioned above, the ceremony was delayed.