ಬ್ರೇಕಿಂಗ್ ನ್ಯೂಸ್
09-11-21 07:15 pm Headline Karnataka News Network ದೇಶ - ವಿದೇಶ
ನವದೆಹಲಿ, ನ.9: ಮಂಗಳೂರು ಮೂಲದ ಖ್ಯಾತ ವೈದ್ಯ ಡಾ.ಬಿ.ಎಂ. ಹೆಗ್ಡೆ, ಸಾಹಿತಿ ಚಂದ್ರಶೇಖರ ಕಂಬಾರ, ಜನಪದ ಕಲಾವಿದೆ ಮಾತಾ ರಂಗಮ್ಮ ಜೋಗತಿ, ರಂಗಸ್ವಾಮಿ, ಲಕ್ಷ್ಮೀನಾರಾಯಣ ಕಶ್ಯಪ್ ಸೇರಿ ರಾಜ್ಯದ ಐವರು ಸಾಧಕರಿಗೆ ಪದ್ಮವಿಭೂಷಣ, ಪದ್ಮಭೂಷಣ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಖ್ಯಾತ ಗಾಯಕರಾಗಿ ವರ್ಷದ ಹಿಂದೆ ಅಗಲಿದ್ದ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಮರಣೋತ್ತರ ನೆಲೆಯಲ್ಲಿ ಪದ್ಮವಿಭೂಷಣ ನೀಡಲಾಗಿದೆ.
ಪುರಾತತ್ವ ಕ್ಷೇತ್ರದ ದಂತಕಥೆ ಬಿ.ಬಿ.ಲಾಲ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರನ್ನು ಇಂದು ರಾಷ್ಟ್ರಪತಿ ಭವನದಲ್ಲಿ 2021ನೇ ಸಾಲಿನ ಅತ್ಯುನ್ನತ ನಾಗರಿಕ ಪುರಸ್ಕಾರವಾದ ಪದ್ಮವಿಭೂಷಣ, ಪದ್ಮಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಶಿಲ್ಪಕಲಾ ಕ್ಷೇತ್ರದ ಸಾಧನೆಯನ್ನು ಪರಿಗಣಿಸಿ ಒಡಿಶಾ ಮೂಲದ ಖ್ಯಾತ ಶಿಲ್ಪಿ ಸುದರ್ಶನ್ ಸಾಹೂ, ಲೋಕಸಭೆಯ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನಿಸಲಾಯಿತು. ಎಂಟು ಬಾರಿ ಸಂಸದೆಯಾಗಿದ್ದ ಸುಮಿತ್ರಾ ಮಹಾಜನ್ ಕಳೆದ ಬಾರಿ ಲೋಕಸಭೆ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದರು. ಹಿರಿಯ ಐಎಎಸ್ ಅಧಿಕಾರಿ ನೃಪೇಂದ್ರ ಮಿಶ್ರಾ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಲಾಯಿತು. ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೋಯ್ ಅವರಿಗೆ ಮರಣೋತ್ತರ ನೆಲೆಯಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಿದ್ದು ಗೊಗೋಯ್ ಪತ್ನಿ ರಾಷ್ಟ್ರಪತಿಯವರಿಂದ ಪ್ರಶಸ್ತಿ ಸ್ವೀಕರಿಸಿದರು.
ರಾಜಸ್ಥಾನದ ಪಾಲಿ ಭಾಷೆಯ ಲೇಖಕ ಅರ್ಜುನ್ ಸಿಂಗ್ ಶೇಖಾವತ್, ಸಂಸ್ಕೃತ ವ್ಯಾಕರಣ ತಜ್ಞ ರಾಮ್ ಯತ್ನ ಶುಕ್ಲಾ, ದೆಹಲಿ ಮೂಲದ ಸಮಾಜಸೇವಕ ಜಿತೇಂದರ್ ಸಿಂಗ್ ಶುಂಠಿ, ಸ್ಟೀಪಲ್ ಚೇಸ್ ಅತ್ಲೀಟ್ ಸುಧಾ ಸಿಂಗ್, ಬಿಹಾರದ ಹಿರಿಯ ಹಿಂದಿ ಲೇಖಕಿ ಮೃದುಲಾ ಸಿನ್ಹಾ(ಮರಣೋತ್ತರ), ಕೊಯಮತ್ತೂರಿನ ಗೇರ್ ಮ್ಯಾನ್ ಪಿ. ಸುಬ್ರಹ್ಮಣಿಯನ್, ಪಶ್ಚಿಮ ಬಂಗಾಳದ ಸಮಾಜ ಸೇವಕ ಗುರು ಮಾ ಕಮಲಿ ಸೊರೇನ್, ಭೋಪಾಲ್ ನ ಬುಡಕಟ್ಟು ಜನಪದ ಸಂಸ್ಕೃತಿ ವಿದ್ವಾಂಸ ಕಪಿಲ್ ತಿವಾರಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಯಿತು.
ಭಾರತದ ಪ್ರಮುಖ ತಾರಾ ಅತ್ಲೀಟ್ ಕೆ.ವೈ ವೆಂಕಟೇಶ್, ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಪಾಲ್ಗೊಂಡಿದ್ದ ಲೆಫ್ಟಿನೆಂಟ್ ಕರ್ನಲ್ ಕ್ವಾಜಿ ಸಜ್ಜದ್ ಆಲಿ ಜಹೀರ್ ಅವರಿಗೆ ಪದ್ಮಶ್ರೀ ಪ್ರದಾನಿಸಲಾಯಿತು. ಅಸ್ಸಾಮ್ ಸಾಮಾಜಿಕ ಕಾರ್ಯಕರ್ತೆ ಲಖಿಮಿ ಬರುವಾ, ಕರ್ನಾಟಕ ಶಾಸ್ತ್ರೀಯ ಸಂಗೀತ ವಿದುಷಿ ಬಾಂಬೆ ಜಯಶ್ರೀ ಅಮರನಾಥ್, ಡೆಹ್ರಾಡೂನ್ ಮೂಲದ ಹಿರಿಯ ಕೀಲು ಮತ್ತು ಮೂಳೆ ತಜ್ಞ ಭೂಪೇಂದ್ರ ಕುಮಾರ್ ಸಿಂಗ್, ಶ್ರೀನಗರದ ಹಿರಿಯ ಹಿಂದಿ ಲೇಖಕ, ಪತ್ರಕರ್ತ ಚಮನ್ ಲಾಲ್ ಸಫ್ರು, ಹರಿಯಾಣದ ಹಿಂದಿ ಸಾಹಿತಿ ಜೈಭಗವಾನ್ ಗೋಯಲ್, ರಾಜಸ್ಥಾನದ ಜನಪದ ಗಾಯಕ ಲಾಖಾ ಖಾನ್ ಅವರಿಗೆ ಪದ್ಮಶ್ರೀ ಪ್ರಶಸ್ತಿಗಳನ್ನು ನೀಡಲಾಯಿತು.
ಕಳೆದ ಜನವರಿಯಲ್ಲಿ ಕೇಂದ್ರ ಸರಕಾರ ಖ್ಯಾತ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂ (ಮರಣೋತ್ತರ) ಸೇರಿ 119 ಮಂದಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಪದ್ಮಶ್ರೀ, ಪದ್ಮವಿಭೂಷಣ, ಪದ್ಮಭೂಷಣ ಪ್ರಶಸ್ತಿ ಘೋಷಿಸಿತ್ತು. ಕೋವಿಡ್ ಕಾರಣದಿಂದ ಪ್ರಶಸ್ತಿ ಪ್ರದಾನ ನಡೆದಿರಲಿಲ್ಲ.
ಜಪಾನ್ ದೇಶದ ಮಾಜಿ ಪ್ರಧಾನಿ ಶಿಂಜೋ ಅಬೆ, ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂ, ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಬೆಳ್ಳೆ ಮೋನಪ್ಪ ಹೆಗ್ಡೆ, ಮರಳು ಶಿಲ್ಪಿ ಸುದರ್ಶನ್ ಸಾಹೂ, ವಾಸ್ತುಶಿಲ್ಪಿ ಬಿ.ಬಿ ಲಾಲ್, ವಿಜ್ಞಾನ ಕ್ಷೇತ್ರದ ಸಾಧನೆಗಾಗಿ ನರೀಂದರ್ ಸಿಂಗ್, ಆಧ್ಯಾತ್ಮ ಕ್ಷೇತ್ರದಲ್ಲಿ ದೆಹಲಿಯ ಮೌಲಾನಾ ವಹೀದುದ್ದೀನ್ ಖಾನ್ ಅವರಿಗೆ ಎರಡನೇ ಅತ್ಯುನ್ನತ ನಾಗರಿಕ ಪುರಸ್ಕಾರ ಪದ್ಮವಿಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.
Renowned cardiologist, professional educator and author Dr Belle Monappa (BM) Hegde was conferred with the Padma Vibhushan, India's second-highest civilian award by President of India Ram Nath Kovind on Tuesday November 9. Dr Hegde was awarded the Padma Bhushan earlier in 2010 and was the recipient of the prestigious Dr B C Roy award in 1999. He has authored several books on medical practice and ethics. Hegde was conferred the Padma Vibushan for his work in the area medicine.
26-11-24 10:46 pm
Bangalore Correspondent
Shivamogga, Monkey fever, Dinesh Gundu Rao: ಮ...
26-11-24 10:23 pm
BJP, Vijayendra: ಉಪ ಚುನಾವಣೆ ಸೋಲು ; ಪಕ್ಷದ ಕಾರ್...
26-11-24 06:56 pm
MLA Gaviyappa, Congress: ಗ್ಯಾರಂಟಿ ಸ್ಕೀಂನಿಂದಾಗ...
26-11-24 06:11 pm
Davanagere News, Heart Attack: ಗಂಡ ಹೃದಯಾಘಾತಕ್...
26-11-24 11:52 am
26-11-24 09:43 pm
HK News Desk
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
26-11-24 11:23 pm
Udupi Correspondent
Mangalore, Suicide, Belthangady: ಬೆಳ್ತಂಗಡಿ ;...
26-11-24 10:58 pm
Mangalore Baby, Lady goschen Hospital: ಲೇಡಿಗೋ...
26-11-24 10:50 pm
Tamil Actor Surya, Jyothika, Udupi temple: ಕೊ...
26-11-24 08:23 pm
Mangalore, Police Anupam Agarwal IPS, DYFI; ಸ...
26-11-24 05:37 pm
26-11-24 03:10 pm
Mangalore Correspondent
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm
Rowdy sheeter Dawood, Mangalore Crime, Police...
23-11-24 10:49 am
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm