ಬ್ರೇಕಿಂಗ್ ನ್ಯೂಸ್
10-11-21 10:28 am Headline Karnataka News Desk ದೇಶ - ವಿದೇಶ
ನವದೆಹಲಿ, ನ.10: ಕರ್ನಾಟಕ ರಾಜಕೀಯದಲ್ಲಿ ಬಿಟ್ ಕಾಯಿನ್ ಹಗರಣ ಬಿರುಗಾಳಿ ಎಬ್ಬಿಸುತ್ತಿದ್ದರೆ, ಜಾಗತಿಕ ಮಾರುಕಟ್ಟೆಯಲ್ಲಿ ಬಿಟ್ ಕಾಯಿನ್ ದರದಲ್ಲೇ ಬಿರುಗಾಳಿ ಎದ್ದಿದೆ. ನ.9ರ ಸೋಮವಾರದ ಒಂದೇ ದಿನದಲ್ಲಿ ಬಿಟ್ ಕಾಯಿನ್ ಮೌಲ್ಯ ನಾಗಾಲೋಟಕ್ಕೆ ಏರಿದ್ದು ಇತಿಹಾಸದಲ್ಲೇ ಕಂಡರಿಯದಷ್ಟು ನೆಗೆತ ಕಂಡುಬಂದಿದೆ.
24 ಗಂಟೆಗಳಲ್ಲಿ 2.5 ಪರ್ಸೆಂಟ್ ಏರಿಕೆಯಾಗಿದ್ದು, ಒಂದು ತಿಂಗಳಿನಿಂದಲೂ 66 ಸಾವಿರ ಡಾಲರ್ ಇದ್ದ ಬಿಟ್ ಕಾಯಿನ್ ಒಂದೇ ದಿನ 67500 ಡಾಲರ್ ಗೆ ಏರಿಕೆಯಾಗಿದೆ. ಕಳೆದ ಒಂದು ವಾರದಲ್ಲಿ ಕ್ರಿಪ್ಟೋ ಕರೆನ್ಸಿ ಮೌಲ್ಯ ಏಳು ಪರ್ಸೆಂಟ್ ಏರಿಕೆಯಾಗಿದೆ. ಅತಿ ಹೆಚ್ಚು ಬೇಡಿಕೆಯ ಬಿಟ್ ಕಾಯಿನ್ ಕೊಳ್ಳುವವರ ಸಂಖ್ಯೆ ಭಾರೀ ಏರಿಕೆಯಾಗಿದ್ದು, ಈ ಕಾರಣದಿಂದ ಅದರ ಮೌಲ್ಯವೂ ನಾಗಾಲೋಟದತ್ತ ನೆಗೆತ ಕಂಡಿದೆ.
ಇಂದು ಬೆಳಗ್ಗೆ ಇಟಿಎಚ್ ಬಿಟ್ ಕಾಯಿನ್ ಮೌಲ್ಯ 6700 ಡಾಲರ್, ಆನಂತರ ಮಧ್ಯಾಹ್ನ ಹೊತ್ತಿಗೆ 67818 ಡಾಲರ್ ಹಂತಕ್ಕೆ ತಲುಪಿತ್ತು. ಇದೇ ಮೊದಲ ಬಾರಿಗೆ ಒಂದು ದಿನದ ಅಂತರದಲ್ಲಿ ಇಷ್ಟೊಂದು ಏರಿಕೆಯಾಗಿದ್ದು, ಬಿಟ್ ಕಾಯಿನ್ ಹೊಂದಿರುವ ಜನರಲ್ಲಿ ಕುತೂಹಲ ಸೃಷ್ಟಿಯಾಗಿದೆ. ಮೊದಲ ಬಾರಿಗೆ ಮಾರುಕಟ್ಟೆಗೆ ಪರಿಚಯ ಆಗಿದ್ದ ಬಿಟ್ ಕಾಯಿನ್ ಇಟಿಎಫ್ ದರದಲ್ಲಿ ಈಗ ಭಾರೀ ಏರಿಕೆಯಾಗಿದೆ. ಸದ್ಯಕ್ಕೆ ಬಿಟ್ ಕಾಯಿನ್ ಒಟ್ಟು ಮಾರುಕಟ್ಟೆ ಮೌಲ್ಯ 3 ಟ್ರಿಲಿಯನ್ ಡಾಲರ್ ಮೊತ್ತಕ್ಕೆ ಏರಿಕೆಯಾಗಿದೆ.
ಹತ್ತು ವರ್ಷಗಳ ಹಿಂದೆ ಚಾಲ್ತಿಗೆ ಬಂದಿದ್ದ ಇಟಿಎಫ್ ಬಿಟ್ ಕಾಯಿನ್ ಕಳೆದ ಒಂದು ವರ್ಷದಲ್ಲಿ 130 ಪರ್ಸೆಂಟ್ ಏರಿಕೆಯಾಗಿದೆ. ವರ್ಷದ ಹಿಂದೆ ಇದರ ಒಂದು ಕಾಯಿನ್ ಮೌಲ್ಯ 11,500 ಡಾಲರ್ ಇತ್ತು. ಆದರೆ, ಒಂದೇ ವರ್ಷದಲ್ಲಿ ಬಿಟ್ ಕಾಯಿನ್ ಬಿರುಗಾಳಿ ನಾಗಾಲೋಟದತ್ತ ಸಾಗಿದ್ದು ನಾಲ್ಕು ಪಟ್ಟು ಮೌಲ್ಯ ವರ್ಧನೆಯಾಗಿದೆ. ಇಟಿಎಫ್ ಬಿಟ್ ಕಾಯಿನ್ ರೀತಿಯಲ್ಲೇ ಐದಾರು ಬಗೆಯ ಕ್ರಿಪ್ಟೋ ಕರೆನ್ಸಿಗಳು ಚಾಲ್ತಿಗೆ ಬಂದಿದ್ದು, ಇಥೇರಿಯಂ, ಬೈನಾನ್ಸ್ ಕೂಡ ದರದಲ್ಲಿ ಭಾರೀ ಏರಿಕೆ ಕಂಡಿವೆ.
ಬಿಟ್ ಕಾಯಿನ್ ಬಳಿಕ ಎರಡನೇ ಅತಿ ಹೆಚ್ಚು ಬೇಡಿಕೆಯ ಕ್ರಿಪ್ಟೋ ಕರೆನ್ಸಿಯಾಗಿರುವ ಇಥೇರಿಯಂ ಒಂದೇ ದಿನಕ್ಕೆ 1.82 ಶೇಕಡಾ ಏರಿಕೆಯಾಗಿದ್ದು ಇದರ ಮೌಲ್ಯ 4,792 ಡಾಲರ್ ಆಗಿದೆ. ಇಥೇರಿಯಂ 4700 ಡಾಲರ್ ಮೌಲ್ಯದ ಗೆರೆಯನ್ನು ದಾಟಿದ್ದು ಇದೇ ಮೊದಲಾಗಿದ್ದು, ಬಿಟ್ ಕಾಯಿನ್ ರೀತಿಯಲ್ಲೇ ಭಾರೀ ಏರಿಕೆ ಕಾಣುತ್ತಿದೆ. ಬೈನಾನ್ಸ್ ಕಾಯಿನ್ ಕೂಡ 1.15 ಪರ್ಸೆಂಟ್ ಏರಿಕೆಯಾಗಿದ್ದು ಒಂದು ಕಾಯಿನ್ ಮೌಲ್ಯ 649 ಡಾಲರ್ ನಷ್ಟಾಗಿದೆ. ಸೊಲಾನಾ ಕಾಯಿನ್ ಒಂದು ದಿನದಲ್ಲಿ 2.65 ಶೇಕಡಾ ಏರಿಕೆ ಕಂಡು ಅದರ ಮೌಲ್ಯ 247 ಡಾಲರ್ ಆಗಿದೆ.
ಕ್ರಿಪ್ಟೋ ಕರೆನ್ಸಿಯ ದರದಲ್ಲಿ ಭಾರೀ ಏರಿಕೆ ಆಗುತ್ತಿರುವುದನ್ನು ಕಂಡು ಜನಮಾನ್ಯರು ಕೂಡ ಖರೀದಿಯಲ್ಲಿ ತೊಡಗಿದ್ದಾರೆ. ಭಾರತದಲ್ಲಿ ಕ್ರಿಪ್ಟೋ ಕರೆನ್ಸಿಗೆ ಇನ್ನೂ ಮಾನ್ಯತೆ ನೀಡಲಾಗಿಲ್ಲ. ಹೀಗಾಗಿ ಡಾಲರ್ ಅಥವಾ ಇನ್ನಾವುದೇ ಬೇರೆ ಕರೆನ್ಸಿಗಳಲ್ಲಿ ಮಾತ್ರ ಅವುಗಳ ಖರೀದಿ ಸಾಧ್ಯ. ಹಾಗಿದ್ದರೂ, ಭಾರತೀಯರು ಕ್ರಿಪ್ಟೋ ಕರೆನ್ಸಿಯ ಖರೀದಿಯಲ್ಲಿ ಜಗತ್ತಿನಲ್ಲೇ ಮುಂದಿದ್ದಾರೆ. ಭಾರತೀಯ ಖರೀದಿ ಆಸಕ್ತಿಯ ಕಾರಣದಿಂದ ಕೇಂದ್ರ ಸರಕಾರ ಕ್ರಿಪ್ಟೋಕರೆನ್ಸಿಗೆ ಮಾನ್ಯತೆ ನೀಡುವ ಬಗ್ಗೆ ಕಾನೂನು ತರಲಿದೆ ಎನ್ನುವ ಮಾತು ಕೇಳಿಬರುತ್ತಿದೆ.
Bitcoin is hovering around $67,000 Tuesday morning after it hit a new all-time high Monday evening when it went over $68,000. Bitcoin’s latest new record is an impressive feat considering just a year ago the currency hovered around $15,000 per coin. Ethereum — the next most popular crypto — has seen a recent surge as well, and on Monday notched another new all-time high when its price went above $4,800. The surge in Bitcoin’s value in recent weeks follows the much anticipated first Bitcoin ETF debuting on the New York Stock Exchange, and a record-breaking October for the stock market in general.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm