ದೆಹಲಿ ಸ್ಮೋಗ್ ; ಮಾಲಿನ್ಯ ತಡೆಗೆ ಲಾಕ್ಡೌನ್ ಮಾಡಿ, ತುರ್ತು ಕ್ರಮ ಕೈಗೊಳ್ಳಿ ; ಕೇಂದ್ರಕ್ಕೆ ಸುಪ್ರೀಂ ವಾರ್ನಿಂಗ್

14-11-21 01:39 pm       HK News Desk   ದೇಶ - ವಿದೇಶ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿಪರೀತ ಮಾಲಿನ್ಯದ ಬಗ್ಗೆ ಎಚ್ಚೆತ್ತ ಸುಪ್ರೀಂ ಕೋರ್ಟ್, ಗಾಳಿಯ ಗುಣಮಟ್ಟ ಸುಧಾರಣೆಗೆ ತುರ್ತು ಕ್ರಮ ಕೈಗೊಳ್ಳಲು ಕೇಂದ್ರ ಸರಕಾರ ಮತ್ತು ದೆಹಲಿ ಸರಕಾರಕ್ಕೆ ಸೂಚನೆ ನೀಡಿದೆ.

ನವದೆಹಲಿ, ನ.14: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿಪರೀತ ಮಾಲಿನ್ಯದ ಬಗ್ಗೆ ಎಚ್ಚೆತ್ತ ಸುಪ್ರೀಂ ಕೋರ್ಟ್, ಗಾಳಿಯ ಗುಣಮಟ್ಟ ಸುಧಾರಣೆಗೆ ತುರ್ತು ಕ್ರಮ ಕೈಗೊಳ್ಳಲು ಕೇಂದ್ರ ಸರಕಾರ ಮತ್ತು ದೆಹಲಿ ಸರಕಾರಕ್ಕೆ ಸೂಚನೆ ನೀಡಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ಎರಡು ದಿನ ಲಾಕ್ಡೌನ್ ಅಥವಾ ಇನ್ನಾವುದೇ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಸರಕಾರಕ್ಕೆ ಸಲಹೆ ಮಾಡಿದ್ದಾರೆ.

ಪಂಜಾಬ್ ನಲ್ಲಿ ರೈತರು ಹೊಲಕ್ಕೆ ಬೆಂಕಿ ಹಾಕುತ್ತಿರುವುದು ಕಾರಣ ಇರಬಹುದು. ದೀಪಾವಳಿ ಪಟಾಕಿ ಉರಿಸಿದ್ದು ಅಥವಾ ಕಾರ್ಖಾನೆಗಳು ಬಿಡುವ ಹೊಗೆ ಕಾರಣ ಆಗಿರಬಹುದು. ಆದರೆ, ದೆಹಲಿಯಲ್ಲಿ ಜನರು ಸಹಜವಾಗಿ ಉಸಿರಾಡದ ಸ್ಥಿತಿ ಆಗಿದೆ. ಈ ರೀತಿಯ ಸ್ಥಿತಿಯಿಂದ ಹೊರಬರಲು ಎರಡು ದಿನ ಲಾಕ್ಡೌನ್ ಮಾಡಬಹುದು. ಅಥವಾ ಇನ್ನಾವುದೇ ತುರ್ತು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಜನರು ಹೇಗೆ ಇಲ್ಲಿ ಬದುಕಬೇಕು ಎಂದು ಸಿಜೆಐ ರಮಣ ಸರಕಾರಕ್ಕೆ ಚಾಟಿ ಬೀಸಿದ್ದಾರೆ.

ದೆಹಲಿಯ ಮಾಲಿನ್ಯದ ಬಗ್ಗೆ ತುರ್ತು ಕ್ರಮ ಕೈಗೊಳ್ಳುವಂತೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಎಲ್ಲ ಸ್ಥಳೀಯಾಡಳಿತಕ್ಕೂ ಸೂಚನೆ ರವಾನಿಸಿತ್ತು. ಈ ಬಗ್ಗೆ ಸುಪ್ರೀಂ ಕೋರ್ಟ್ ಪ್ರಶ್ನೆ ಮಾಡಿದ್ದು, ಮಾಲಿನ್ಯ ವಿಪರೀತ ಮಟ್ಟಕ್ಕೆ ತಲುಪಿದೆ. ತುರ್ತು ಕ್ರಮ ಏನು ಕೈಗೊಂಡಿದ್ದೀರಿ ಎಂದು ಪ್ರಶ್ನೆ ಮಾಡಿದೆ. ಇದಕ್ಕುತ್ತರಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪಂಜಾಬ್, ಹರ್ಯಾಣದಲ್ಲಿ ರೈತರು ಹೊಲದಲ್ಲಿ ಬೆಂಕಿ ಹಾಕಿರುವುದರಿಂದ ದಟ್ಟ ಹೊಗೆ ಆವರಿಸಿದೆ ಎಂದು ಸಮಜಾಯಿಷಿ ನೀಡಲು ಮುಂದಾದರು.

ಕೇಂದ್ರ ಸರಕಾರದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ಮಾತಿಗೆ ತಡೆ ಒಡ್ಡಿದ ನ್ಯಾಯಾಧೀಶರು, ನೀವು ರೈತರನ್ನೇ ಹೊಣೆಯಾಗಿಸಬೇಡಿ. ಹೊಲಕ್ಕೆ ಬೆಂಕಿ ಹಾಕುವುದನ್ನು ಯಾಕೆ ಸ್ವಲ್ಪ ವಿಳಂಬ ಮಾಡುವಂತೆ ಮಾಡಬಾರದು. ದೆಹಲಿಯಲ್ಲಿ ದಟ್ಟ ಹೊಗೆ ಆವರಿಸಿದ್ದರಿಂದ ಹೊರಗೆ ಉಸಿರಾಟಕ್ಕೇ ಸಮಸ್ಯೆಯಾಗಿದೆ. ಇಂಥದರಲ್ಲಿ ನಿಮ್ಮ ರಾಜಕೀಯ ಮಾಡುತ್ತೀರಾ.. ಕೂಡಲೇ ಈ ಬಗ್ಗೆ ತುರ್ತು ಸಭೆ ಕರೆದು ಏನಾದ್ರೂ ನಿರ್ಧಾರ ತಗೊಳ್ಳಿ. ಒಂದೆರಡು ದಿನ ಲಾಕ್ಡೌನ್ ಮಾಡಿದ್ರೂ ಆಗಬಹುದು. ಎರಡು ದಿನದಲ್ಲಿ ಮಾಲಿನ್ಯ ಅಂಶ 500ರಿಂದ 200ಕ್ಕೆ ಇಳಿಯಬೇಕು. ಅದಕ್ಕೆ ಏನಾಗಬೇಕೋ ಅದನ್ನು ತುರ್ತಾಗಿ ಮಾಡಿ ಎಂದು ವಾರ್ನ್ ಮಾಡಿದ್ದಾರೆ.

ಇದೇ ವೇಳೆ, ದೆಹಲಿ ಸರಕಾರ ರಾಜಧಾನಿಯಲ್ಲಿ ಮಾಲಿನ್ಯ ತಡೆಯಲು ಸ್ಮೋಗ್ ಟವರ್ ಅಳವಡಿಕೆ ಸೇರಿದಂತೆ ಮಾಲಿನ್ಯ ತಡೆಗೆ ಯೋಜನೆ ರೂಪಿಸುವಂತೆ ಕೋರ್ಟ್ ಸೂಚನೆ ನೀಡಿದೆ.

The Supreme Court on Saturday suggested that the Centre and the Delhi government may consider imposing a lockdown of two days in the national capital in view of the high pollution levels. The court's observations came while hearing a case in this matter.