ಚೆನ್ನೈಗೆ ಮತ್ತೆ ಮಳೆ ಆಪತ್ತು ಮುನ್ಸೂಚನೆ, ಆರು ಜಿಲ್ಲೆಗಳಲ್ಲಿ ರೆಡ್ ಎಲರ್ಟ್ ಘೋಷಣೆ !

17-11-21 10:16 pm       Hk Desk, Bengaluru   ದೇಶ - ವಿದೇಶ

ಚೆನ್ನೈ ನಗರ ಸೇರಿದಂತೆ ತಮಿಳುನಾಡಿನಲ್ಲಿ ಮತ್ತೆ ಭಾರೀ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬುಧವಾರ ಒಂದೇ ರಾತ್ರಿ ಬಿರುಗಾಳಿ ಸಹಿತ ಮಳೆಯಾಗಲಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ತಮಿಳುನಾಡು ಸರಕಾರಕ್ಕೆ ಸೂಚನೆ ನೀಡಲಾಗಿದೆ.

ಚೆನ್ನೈ, ನ.17: ಚೆನ್ನೈ ನಗರ ಸೇರಿದಂತೆ ತಮಿಳುನಾಡಿನಲ್ಲಿ ಮತ್ತೆ ಭಾರೀ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬುಧವಾರ ಒಂದೇ ರಾತ್ರಿ ಬಿರುಗಾಳಿ ಸಹಿತ ಮಳೆಯಾಗಲಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ತಮಿಳುನಾಡು ಸರಕಾರಕ್ಕೆ ಸೂಚನೆ ನೀಡಲಾಗಿದೆ. ಇದರಂತೆ, ಚೆನ್ನೈ ವ್ಯಾಪ್ತಿಯ ಎರಡು ಜಲಾಶಯಗಳಿಂದ ನೀರನ್ನು ಹೊರ ಬಿಡಲಾಗಿದೆ.

ಬಂಗಾಳ ಕೊಲ್ಲಿಯಲ್ಲಿ ಮತ್ತೆ ವಾಯು ಭಾರ ಕುಸಿತ ಆಗಿದ್ದು, ತಮಿಳುನಾಡು ಕರಾವಳಿಯತ್ತ ಚಲಿಸುತ್ತಿದೆ. ಇದರಿಂದಾಗಿ ತಮಿಳುನಾಡು ಮತ್ತು ಬೆಂಗಳೂರು ಭಾಗದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಚೆನ್ನೈ ಸೇರಿದಂತೆ ಆಸುಪಾಸಿನ ಜಿಲ್ಲೆಗಳಾದ ತಿರುವಲ್ಲೂರು, ಕಾಂಚೀಪುರಂ, ಚೆಂಗಲ್ ಪೇಟೆ, ಕುದ್ದಲೂರು ಮತ್ತು ವಿಲ್ಲುಪುರಂ ಜಿಲ್ಲೆಗಳಲ್ಲಿ ರೆಡ್ ಎಲರ್ಟ್ ಘೋಷಣೆ ಮಾಡಲಾಗಿದೆ.

ತಮಿಳುನಾಡಿನ ಇತರ ಜಿಲ್ಲೆಗಳು ಮತ್ತು ಆಂಧ್ರಪ್ರದೇಶದಲ್ಲೂ ಭಾರೀ ಮಳೆಯಾಗುವ ಸಾಧ್ಯತೆ ಬಗ್ಗೆ ಮುನ್ಸೂಚನೆ ನೀಡಲಾಗಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಚೆನ್ನೈನ ಚೆಂಬರಂಬಾಕ್ಕಂ ಮತ್ತು ಪುಝಲ್ ಎಂಬೆರಡು ಜಲಾಶಯಗಳಿಂದ ಎರಡು ಸಾವಿರ ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗಿದ್ದು, ನದೀ ಪಾತ್ರಗಳ ನಿವಾಸಿಗಳು ಎಚ್ಚರದಲ್ಲಿರುವಂತೆ ಸೂಚಿಸಲಾಗಿದೆ.

ಚೆನ್ನೈನಲ್ಲಿ ಕಳೆದ ಎರಡು ವಾರದಿಂದ ಭಾರೀ ಮಳೆಯಾಗುತ್ತಿದ್ದು, 14 ಜನರು ಸಾವು ಕಂಡಿದ್ದಾರೆ. ರೈಲು, ವಿಮಾನ ಸಂಚಾರದಲ್ಲೂ ವ್ಯತ್ಯಯ ಆಗಿತ್ತು. ವಾರ ಕಾಲ ಚೆನ್ನೈ ನಗರ ವ್ಯಾಪ್ತಿಯಲ್ಲಿ ಮಳೆ ನೀರು ನಿಂತು ಭಾರೀ ಸಂಕಷ್ಟ ಎದುರಾಗಿತ್ತು. ಮಳೆಯಿಂದಾಗಿ ಚೆನ್ನೈ ಆಸುಪಾಸಿನಲ್ಲಿ 65 ಸಾವಿರ ಮನೆಗಳಿಗೆ ಹಾನಿಯಾಗಿದೆ. ಇದೀ ಮತ್ತೆ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. 

Even as Chennai is slowly recovering from the impact of the last week rains, the Meteorological Department has forecast another heavy rainfall for the city and its neighbouring districts on Thursday due to Low Pressure Area over South-east Bay of Bengal. A red alert has been issued for the city and its neighbouring districts from Thursday morning 8.30 am to Friday morning 8.30 am. This means, extremely heavy rainfall is forecast, according to the Met Department.