ಬ್ರೇಕಿಂಗ್ ನ್ಯೂಸ್
18-11-21 12:24 pm HK News Desk ದೇಶ - ವಿದೇಶ
"ಬ್ಲಡ್ ಮೈಕ್ರೋ ಮೂನ್" ಅಥವಾ ಸಮೀಪದಲ್ಲಿ ಗೋಚರಿಸುವ ಸಂಪೂರ್ಣ ಚಂದ್ರಗ್ರಹಣವು ಶತಮಾನದ ಅತ್ಯಂತ ದೀಘ್ರಾವಧಿಯ ಚಂದ್ರಗ್ರಹಣವಾಗಿದೆ. 580 ವರ್ಷಗಳ ನಂತರವು ಈ ದೀರ್ಘಾವಧಿಯ ಚಂದ್ರಗ್ರಹಣ ಸಂಭವಿಸಲಿದೆ.
ನಾಸಾ ಪ್ರಕಾರ ಶುಕ್ರವಾರ, ನವೆಂಬರ್ 19 ರ ಬೆಳಿಗ್ಗೆ, ಈ ಚಂದ್ರಗ್ರಹಣವು ಆಗಲಿದೆ. ಶೇಕಡ 97 ರಷ್ಟು ಸಂಪೂರ್ಣ ಚಂದ್ರಗ್ರಹಣ ಆಗಲಿದೆ. ಅಂದರೆ ಚಂದ್ರನ ಮೇಲ್ಮೈ ಬಹುತೇಕ ಭೂಮಿಯ ನೆರಳಿನಲ್ಲಿ ಮುಚ್ಚಿಹೋಗಲಿದೆ. ನವೆಂಬರ್ ಹುಣ್ಣಿಮೆಯಂದು ಶುಕ್ರವಾರ, ನವೆಂಬರ್ 19 ರಂದು ಭಾರತದಲ್ಲಿ 11.30 ರಿಂದ 5.33 ಕ್ಕೆ ಚಂದ್ರಗ್ರಹಣ ಆಗಲಿದೆ. ಈ ಸಂದರ್ಭದಲ್ಲಿ ಚಂದ್ರನು ಬಹಳ ದೊಡ್ಡದಾಗಿ ಕಾಣಲಿದೆ.
ಅಮೆರಿಕದ ಬಟ್ಲರ್ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿರುವ ಇಂಡಿಯಾನಾದ ಹಾಲ್‌ಕಾಂಬ್ ಅಬ್ಸರ್ವೇಟರಿ(ವೀಕ್ಷಣಾಲಯ) ಪ್ರಕಾರ, "ಚಂದ್ರನು ಭೂಮಿಯ ನೆರಳಿನಲ್ಲಿ ಚಲಿಸಿದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಈ ಸಂದರ್ಭದಲ್ಲಿ ಭಾಗಶಃ ಗ್ರಹಣ ಹಂತವು 3 ಗಂಟೆ, 28 ನಿಮಿಷ ಮತ್ತು 24 ಸೆಕೆಂಡುಗಳವರೆಗೆ ಇರುತ್ತದೆ ಮತ್ತು ಸಂಪೂರ್ಣ ಗ್ರಹಣವು 6 ಗಂಟೆ 1 ನಿಮಿಷ ಇರುತ್ತದೆ. ಇದು 580 ವರ್ಷಗಳಲ್ಲಿಯೇ ಅತಿ ದೀರ್ಘವಾದ ಭಾಗಶಃ ಗ್ರಹಣ (Longest Lunar Eclipse 2021) ಆಗಲಿದೆ."
ಈ ಚಂದ್ರಗ್ರಹಣ ಏಕೆ ಅಪರೂಪ?
ಸೂರ್ಯ, ಭೂಮಿ ಮತ್ತು ಚಂದ್ರರು ಪ್ರತಿ ವರ್ಷವೂ ಆಗಾಗ ಒಂದಾಗುತ್ತವೆ. ಆದರೆ ಈ ಶುಕ್ರವಾರದ ಚಂದ್ರಗ್ರಹಣವು ಕೆಲವು ಕಾರಣಗಳಿಗಾಗಿ ಅಪರೂಪವಾಗಿದೆ. ಮೊದಲನೆಯದಾಗಿ ಇದರ ಸಮಯ. ಈ ಚಂದ್ರಗ್ರಹಣವು ಶುಕ್ರವಾರದಂದು ಸುಮಾರು 6.02 ಮತ್ತು 12.30 ಯುಟಿಸಿ (ಭಾರತೀಯ ಸಮಯ 11.30 ರಿಂದ 5.33) ವರೆಗೆ ಇರುತ್ತದೆ. ಇದು ಶತಮಾನಗಳ ಸುದೀರ್ಘ ಚಂದ್ರಗ್ರಹಣಗಳಲ್ಲಿ ಒಂದಾಗಿದೆ. ಇನ್ನು ಇದು ಭೂಮಿಯಿಂದ ಅತ್ಯಂತ ದೂರದಲ್ಲಿದ್ದು, ಈ ಗ್ರಹಣ ಸಂದರ್ಭದಲ್ಲಿ "ಮೈಕ್ರೋಮೂನ್" ಆಗಲಿದೆ. ಅಷ್ಟು ದೂರ ಅಂದರೆ ಕಡಿಮೆ ಗುರುತ್ವಾಕರ್ಷಣೆ ಇರುತ್ತದೆ. ಇದರ ಪರಿಣಾಮವಾಗಿ ಚಂದ್ರನು ನಿಧಾನವಾಗಿ ಚಲಿಸುತ್ತದೆ ಹಾಗೂ ಭೂಮಿಯ ನೆರಳಿನ ಮೂಲಕ ಹೆಚ್ಚು ದೀಘ್ರವಾಗಿ ಸಾಗುತ್ತದೆ. ಇದು ಸಾಮಾನ್ಯವಾಗಿ ತಿಳಿದಿರುವ "ಸೂಪರ್‌ಮೂನ್" ವಿದ್ಯಮಾನಗಳಿಗೆ ವಿರುದ್ಧವಾಗಿದೆ.
ಎರಡನೆಯದಾಗಿ, ಈ ಬಾರಿ ಆಗುವ ಚಂದ್ರ ಗ್ರಹಣದಲ್ಲಿ ಚಂದ್ರ ಗ್ರಹವು ಎಷ್ಟು ಕಾಣುತ್ತದೆ ಎಂಬುವುದು ಗಮನಾರ್ಹವಾಗಿದೆ. ಚಂದ್ರ ಗ್ರಹವು ಶೇಕಡ 97.3 ರಷ್ಟು ಅಂದರೆ ಸರಿಸುಮಾರು ಸಂಪೂರ್ಣವಾಗಿ ಮುಚ್ಚಲಿದೆ. ಶೇಕಡ 97.3 ರಷ್ಟು ಚಂದ್ರ ಗ್ರಹದ ಭಾಗವು ಭೂಮಿಯ ನೆರಳಿನಲ್ಲಿ ಮುಚ್ಚಲ್ಪಡುತ್ತದೆ. ಇದನ್ನು ಅಂಬ್ರಾ ಎಂದು ಕರೆಯಲಾಗುತ್ತದೆ. ಒಟ್ಟಾಗಿ ನಾಸಾ ಪ್ರಕಾರವಾಗಿ ಚಂದ್ರ ಗ್ರಹದ ಒಟ್ಟು ಶೇಕಡ 99.1 ರಷ್ಟು ಭಾಗ ಮುಚ್ಚಲ್ಪಡುತ್ತದೆ.
ಮುಂದೆ ಯಾವಾಗ ಚಂದ್ರಗ್ರಹಣ?
ಇನ್ನು ಇದಾದ ಬಳಿಕ ಮುಂದೆ 8 ನವೆಂಬರ್ 2022 ರಂದು ಚಂದ್ರಗ್ರಹಣವು ಆಗಲಿದೆ. ಈ ಚಂದ್ರಗ್ರಹಣವು ಯುರೋಪ್, ಆಸ್ಟ್ರೇಲಿಯಾ, ಉತ್ತರ-ದಕ್ಷಿಣ ಅಮೆರಿಕ, ಪೆಸಿಫಿಕ್ ಮಹಾಸಾಗರ, ಅಂಟಾರ್ಟಿಕಾ, ಹಿಂದೂ ಮಹಾಸಾಗರ ಮತ್ತು ಏಷ್ಯಾದಂತಹ ಪ್ರಪಂಚದ ಅನೇಕ ಭಾಗಗಳಲ್ಲಿ ಗೋಚರಿಸಲಿದೆ. ಆದರೆ ಹುಣ್ಣಿಮೆಯಂದು ಭೂಮಿಯ ನೆರಳು ಸೂರ್ಯನ ಮೇಲೆ ಬಿದ್ದಾಗ ಸಂಪೂರ್ಣ ಚಂದ್ರಗ್ರಹಣ ಸಂಭವಿಸುತ್ತದೆ. ಆದರೆ, ಚಂದ್ರನ ಒಂದು ಭಾಗ ಮಾತ್ರ ಭೂಮಿಯ ನೆರಳಿನಲ್ಲಿ ಆವರಿಸಿದಾಗ, ಭಾಗಶಃ ಚಂದ್ರಗ್ರಹಣ ಸಂಭವಿಸುತ್ತದೆ.
ಇನ್ನು 2021ರ ನವೆಂಬರ್ 19ರಂದು ಸಂಭವಿಸಲಿರುವ ಭಾಗಶಃ ಚಂದ್ರಗ್ರಹಣವು ಪಶ್ಚಿಮ ಆಫ್ರಿಕಾ, ಪಶ್ಚಿಮ ಯುರೋಪ್, ಉತ್ತರ ಅಮೇರಿಕಾ, ದಕ್ಷಿಣ ಅಮೆರಿಕ, ಏಷ್ಯಾ, ಆಸ್ಟ್ರೇಲಿಯಾ, ಅಟ್ಲಾಂಟಿಕ್ ಸಾಗರ ಮತ್ತು ಪೆಸಿಫಿಕ್ ಸಾಗರದ ವಲಯದಲ್ಲಿ ಗೋಚರಿಸಲಿದೆ. ಸುಮಾರು 50 ದೇಶಗಳಲ್ಲಿ ಚಂದ್ರಗ್ರಹಣವನ್ನು ಅಲ್ಲಿನ ಕಾಲಮಾನ ಪ್ರಕಾರ ವೀಕ್ಷಿಸಬಹುದು. ಎಲ್ಲ ಚಂದ್ರಗ್ರಹಣಗಳಂತೆಯೇ ಇದನ್ನು ಕೂಡ ಬರಿಗಣ್ಣಿಗೆ ವೀಕ್ಷಿಸಬಹುದಾಗಿದೆ.
The longest partial lunar eclipse in 580 years will occur on 19 November and will be visible from parts of Northeast India. The lunar eclipse, the last of 2021, will be the longest since the 15th century. The last time an eclipse this long happened was on 18 February 1440.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
12-07-25 09:25 pm
HK News Desk
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
13-07-25 11:13 pm
Mangalore Correspondent
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
ಬೆಳ್ತಂಗಡಿ ; ಶಿಕ್ಷಕಿಯಾಗಿದ್ದ ವಿವಾಹಿತ ಮಹಿಳೆ ನೇಣು...
13-07-25 05:56 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm