ಆಂಧ್ರದಲ್ಲಿ ಭೀಕರ ಜಲಪ್ರಳಯ ; ಕೊಚ್ಚಿ ಹೋದ ಬಸ್ ಗಳು, 25ಕ್ಕೂ ಹೆಚ್ಚು ಸಾವು! ಜಗದೊಡೆಯ ತಿರುಪತಿ ಆವರಿಸಿದ ಪ್ರವಾಹ, ನೂರಕ್ಕೂ ಹೆಚ್ಚು ಜನರು ನಾಪತ್ತೆ ! ಜಲ ದಿಗ್ಬಂಧನದಲ್ಲಿ ಸಾವಿರಾರು ಜನ

20-11-21 12:37 pm       HK News Desk   ದೇಶ - ವಿದೇಶ

ಕಡಪಾ ಜಿಲ್ಲೆಯಲ್ಲಿ ಪ್ರವಾಹಕ್ಕೆ ಸಿಲುಕಿದ ಮೂರು ಸರಕಾರಿ ಬಸ್ ನೀರುಪಾಲಾಗಿದ್ದು 12 ಜನರು ನೋಡ ನೋಡುತ್ತಲೇ ಕೊಚ್ಚಿ ಹೋಗಿದ್ದಾರೆ. 30ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಮೂರು ಬಸ್ ಗಳಲ್ಲಿ 100ಕ್ಕೂ ಹೆಚ್ಚು ಮಂದಿ ಇದ್ದರು ಎನ್ನಲಾಗುತ್ತಿದ್ದು ಎಷ್ಟು ಮಂದಿ ನಾಪತ್ತೆಯಾಗಿದ್ದಾರೆ ಎನ್ನುವ ಖಚಿತ ಲೆಕ್ಕ ಸಿಕ್ಕಿಲ್ಲ.

ಹೈದ್ರಾಬಾದ್, ನ.20: ಕಳೆದ ಮೂರು ದಿನಗಳಿಂದ ಆಂಧ್ರಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ವಿಶ್ವವಿಖ್ಯಾತ ತಿರುಪತಿ ದೇಗುಲದಲ್ಲಿ ಜಲಪ್ರಳಯ ಸೃಷ್ಟಿಯಾಗಿದೆ.‌ ಏಳು ಬೆಟ್ಟಗಳಿಂದ ಸುತ್ತುವರಿದಿರುವ ತಿರುಪತಿ ದೇಗುಲದಲ್ಲಿ ಬೆಟ್ಟಗಳು ಛಿದ್ರಗೊಂಡು ಮಳೆನೀರು ಭೋರ್ಗರೆಯುತ್ತಿದ್ದು ದೇಶದ ವಿವಿಧ ಕಡೆಗಳಿಂದ ಬಂದಿರುವ ಸಾವಿರಾರು ಯಾತ್ರಾರ್ಥಿಗಳು ಸಿಕ್ಕಿಬಿದ್ದಿದ್ದಾರೆ.

ಬೆಟ್ಟಗಳ ನಡುವಿನ ಹೆದ್ದಾರಿಯಲ್ಲಿ ಪ್ರವಾಹದಂತೆ ನೀರು ಹರಿಯುತ್ತಿದ್ದು ಕೆಲವು ಜನರು ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ದೃಶ್ಯಗಳು ಸೆರೆಯಾಗಿವೆ. ನಿಲ್ಲಿಸಿದ್ದ ದ್ವಿಚಕ್ರ ವಾಹನಗಳು, ಕಾರುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಕಳೆದ ಬಾರಿ ಉತ್ತರಾಖಂಡದಲ್ಲಿ ಆಗಿರುವ ದುಸ್ಥಿತಿಯೇ ತಿರುಪತಿಯಲ್ಲಿ ಎದುರಾಗಿದೆ.

ಆಂಧ್ರಪ್ರದೇಶದ ಬಹುತೇಕ ಕಡೆ ರಸ್ತೆ ಹಾಗೂ ರೈಲು ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ. ರಾಯಲಸೀಮೆಯ ಚಿತ್ತೂರು, ಕಡಪಾ, ಕರ್ನೂಲು, ಅನಂತಪುರ ಜಿಲ್ಲೆಯ ವ್ಯಾಪ್ತಿಯಲ್ಲಿ ಭಾರೀ ನಷ್ಟ ಉಂಟಾಗಿದೆ. ಮಳೆಯಿಂದಾಗಿ 25 ಜನರು ದುರಂತ ಸಾವು ಕಂಡಿದ್ದಾರೆ.

ಕಡಪಾ ಜಿಲ್ಲೆಯಲ್ಲಿ ಪ್ರವಾಹಕ್ಕೆ ಸಿಲುಕಿದ ಮೂರು ಸರಕಾರಿ ಬಸ್ ನೀರುಪಾಲಾಗಿದ್ದು 12 ಜನರು ನೋಡ ನೋಡುತ್ತಲೇ ಕೊಚ್ಚಿ ಹೋಗಿದ್ದಾರೆ. 30ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಮೂರು ಬಸ್ ಗಳಲ್ಲಿ 100ಕ್ಕೂ ಹೆಚ್ಚು ಮಂದಿ ಇದ್ದರು ಎನ್ನಲಾಗುತ್ತಿದ್ದು ಎಷ್ಟು ಮಂದಿ ನಾಪತ್ತೆಯಾಗಿದ್ದಾರೆ ಎನ್ನುವ ಖಚಿತ ಲೆಕ್ಕ ಸಿಕ್ಕಿಲ್ಲ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಡಪಾ ಜಿಲ್ಲೆಯ ಮಂದಪಲ್ಲೆ , ಆಕೆಪಾಡು, ನಂದಲೂರು ಗ್ರಾಮದಲ್ಲಿ ಮೂರು ಬಸ್ ಪ್ರವಾಹಕ್ಕೆ ಸಿಲುಕಿದ್ದವು. ನೀರು ಮೇಲೇರುತ್ತಿದ್ದಂತೆ ಬಸ್ ಚಾಲಕ, ಪ್ರಯಾಣಿಕರು ಬಸ್ಸಿನ ಮೇಲೇರಿ ಕುಳಿತಿದ್ದರು. ಬಳಿಕ ನೀರಿನ ಪ್ರವಾಹಕ್ಕೆ ಸಿಲುಕಿ ಬಸ್ ಪಲ್ಟಿಯಾಗಿದ್ದು ಜನರು ನೀರು ಪಾಲಾಗಿದ್ದಾರೆ.‌

ಇದೇ ವೇಳೆ, ಪ್ರವಾಹ ಪೀಡಿತ ಪ್ರದೇಶಕ್ಕೆ ರಕ್ಷಣಾ ಕಾರ್ಯಕರ್ತರನ್ನು ಕರೆದೊಯ್ಯುತ್ತಿದ್ದ ಬಸ್‌ ನೀರಿಗೆ ಬಿದ್ದು ಅಪಘಾತಕ್ಕೀಡಾಗಿವೆ. ಅದರಲ್ಲಿದ್ದವರು ಎಷ್ಟು ಮಂದಿ ನೀರುಪಾಲಾಗಿದ್ದಾರೆಂಬ ಮಾಹಿತಿ ಇಲ್ಲ.

ಎನ್ ಡಿ ಆರ್ ಎಫ್, ಭಾರತೀಯ ಸೇನೆ, ವಾಯುಪಡೆಯಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇಂದು ಮಧ್ಯಾಹ್ನ ಸಿಎಂ ಜಗನ್ಮೋಹನ ರೆಡ್ಡಿ ಪ್ರವಾಹ ಪೀಡಿತ ಪ್ರದೇಶದಲ್ಲಿ ಏರಿಯಲ್ ಸರ್ವೆ ನಡೆಸಲಿದ್ದಾರೆ. ಪರಿಸ್ಥಿತಿ ಬಗ್ಗೆ ಪ್ರಧಾನಿ ಮೋದಿ ನಿಗಾ ಇಟ್ಟಿದ್ದಾರೆ.

At least 25 people lost their lives and 100 went missing after three buses of Andhra Pradesh Road Transport Corporation (APSRTC) were stuck in floods triggered by heavy rains in Kadapa district on Friday, November 19. Rescue workers pulled out 12 bodies and were searching for the missing people in the Rajampet area. The buses were stuck in flood waters in Mandpalle, Akepadu and Nandalur villages. The passengers along with drivers and conductors had climbed on the top of the buses. While some were rescued by the local residents, 30 people were feared washed away.