ಬೆಲೆಯೇರಿಕೆಯಿಂದ ತತ್ತರಿಸಿರುವ ಜನರಿಗೆ ಏರ್ಟೆಲ್ ಹೊರೆ ; ಎಲ್ಲ ರೀತಿಯ ಕರೆ, ಡೇಟಾ ಯೋಜನೆಗಳಿಗೆ ಶೇ.25ರಷ್ಟು ಹೆಚ್ಚಳ

22-11-21 06:11 pm       Headline Karnataka News Network   ದೇಶ - ವಿದೇಶ

ದಿನವಹಿ ವಸ್ತುಗಳ ಬೆಲೆಯೇರಿಕೆಯಿಂದ ಜನರು ಬಸವಳಿದಿರುವಾಗಲೇ ದೇಶದ ಅತ್ಯಂತ ಜನಪ್ರಿಯ ದೂರವಾಣಿ ಸೇವಾ ಸಂಸ್ಥೆ ಭಾರ್ತಿ ಏರ್ಟೆಲ್, ವಾಯ್ಸ್ ಕರೆ ಮತ್ತು ಡೇಟಾ ದರಗಳನ್ನು ಶೇ.25ರಷ್ಟು ಹೆಚ್ಚಿಸಿದೆ.

ನವದೆಹಲಿ, ನ.22: ದಿನವಹಿ ವಸ್ತುಗಳ ಬೆಲೆಯೇರಿಕೆಯಿಂದ ಜನರು ಬಸವಳಿದಿರುವಾಗಲೇ ದೇಶದ ಅತ್ಯಂತ ಜನಪ್ರಿಯ ದೂರವಾಣಿ ಸೇವಾ ಸಂಸ್ಥೆ ಭಾರ್ತಿ ಏರ್ಟೆಲ್, ವಾಯ್ಸ್ ಕರೆ ಮತ್ತು ಡೇಟಾ ದರಗಳನ್ನು ಶೇ.25ರಷ್ಟು ಹೆಚ್ಚಿಸಿದೆ. ಅನ್ ಲಿಮಿಟೆಡ್ ವಾಯ್ಸ್ ಕರೆ ಸೇರಿದಂತೆ ವಿವಿಧ ಯೋಜನೆಗಳ ದರವನ್ನು ಹೆಚ್ಚಿಸಲಾಗಿದ್ದು, ನ.26ರಿಂದ ಹೊಸ ದರ ಜಾರಿಗೆ ಬರಲಿದೆ.

ಎಂಟ್ರಿಲೆವೆಲ್ ವಾಯ್ಸ್ ಕರೆ ಮತ್ತು ಅನ್ ಲಿಮಿಟೆಡ್ ವಾಯ್ಸ್ ಕರೆ ಮತ್ತು ಡೇಟಾ ಸೌಲಭ್ಯದ ಪ್ಲಾನ್ ಮೇಲೆ ಶೇ.25ರಷ್ಟು ಹೆಚ್ಚಳ ಮಾಡಲಾಗಿದೆ. 28 ದಿನಗಳ ವಾಯ್ಸ್ ಕರೆ ಸೌಲಭ್ಯಕ್ಕೆ 79 ಇದ್ದುದನ್ನು ರೂ. 99ಕ್ಕೆ ಏರಿಸಲಾಗಿದೆ. ಇದರಲ್ಲಿ ಶೇ.50ರಷ್ಟು ಹೆಚ್ಚುವರಿ ಟಾಕ್ ಟೈಮ್, 200 ಎಂಬಿ ಡೇಟಾ, ವಾಯ್ಸ್ ದರ ಒಂದು ಪೈಸೆ- ಸೆಕೆಂಡಿಗೆ ಹೆಚ್ಚುವರಿಯಾಗಿ ದೊರೆಯಲಿದೆ. ಕಳೆದ ಜುಲೈನಲ್ಲಿ ರೂ.49ರ ಕನಿಷ್ಠ ಪ್ರೀಪೈಯ್ಡ್ ಪ್ಲಾನನ್ನು ಏರ್ಟೆಲ್ ರದ್ದು ಮಾಡಿತ್ತು.

ಅನ್ ಲಿಮಿಟೆಡ್ ವಾಯ್ಸ್ ಕರೆ ಸೌಲಭ್ಯವನ್ನು ಪರಿಷ್ಕರಿಸಿ, 149ರಿಂದ 179ಕ್ಕೆ ಹೆಚ್ಚಿಸಲಾಗಿದೆ. ಇದರಲ್ಲಿ 28 ದಿನಗಳ ಅನ್ ಲಿಮಿಟೆಡ್ ವಾಯ್ಸ್ ಕರೆ ಸೌಲಭ್ಯ, ನೂರು ಎಸ್ಎಂಎಸ್, 2 ಜಿಬಿ ಡೇಟಾ ದೊರೆಯಲಿದೆ. 2498 ರೂ. ಮೊತ್ತದ ಯೋಜನೆಯನ್ನು ಪರಿಷ್ಕರಿಸಿ, 2999ಕ್ಕೆ ಏರಿಸಲಾಗಿದೆ. ಈ ಯೋಜನೆಯ ಅವಧಿ 365 ದಿನ ಆಗಿರಲಿದ್ದು, ಅನ್ ಲಿಮಿಟೆಡ್ ವಾಯ್ಸ್ ಕರೆ, ಪ್ರತಿದಿನ ನೂರು ಎಸ್ಎಂಎಸ್ ಮತ್ತು ಪ್ರತಿದಿನ 2ಜಿಬಿ ಡೇಟಾ ದೊರೆಯಲಿದೆ.

ಡೇಟಾ ಟಾಪ್ ಅಪ್ ಯೋಜನೆಗಳಲ್ಲಿ ಈಗಿರುವ ರೂ.48ರ 3ಜಿಬಿ ಡೇಟಾ ಯೋಜನೆಗೆ ರೂ.58 ಮಾಡಲಾಗಿದೆ. 12 ಜಿಬಿ ಡಾಟಾ ಯೋಜನೆಯ ದರವನ್ನು ರೂ.98ರ ಬದಲು 118ಕ್ಕೆ ಹೆಚ್ಚಿಸಲಾಗಿದೆ. 50 ಜಿಬಿ ಸಿಗುವ ಡಾಟಾ ಯೋಜನೆಯನ್ನು 251 ರೂ. ಬದಲಿಗೆ 301ಕ್ಕೆ ಹೆಚ್ಚಿಸಲಾಗಿದೆ.

Airtel has announced complete revision in its prepaid mobile tariffs in India. These new tariffs will come into effect from November 26. A minimum price increase of Rs. 20 has been announced on prepaid plans, while some packs see a price hike of up to Rs. 501 as well. Airtel says that this price hike has been introduced to enable a reasonable return on capital that allows for a financially healthy business model. In the past, Airtel has maintained that the average revenue per user (ARPU) needs to be at Rs. 200 and ultimately at Rs. 300.