ಬ್ರೇಕಿಂಗ್ ನ್ಯೂಸ್
22-11-21 06:20 pm Headline Karnataka News Network ದೇಶ - ವಿದೇಶ
ನವದೆಹಲಿ, ನ.22: ಭಾರತೀಯ ವಾಯುಪಡೆಯ ಗ್ರೂಪ್ ಕ್ಟಾಪ್ಟನ್ ಆಗಿ ಇತ್ತೀಚೆಗೆ ಭಡ್ತಿ ಪಡೆದಿರುವ, ಬಾಲಾಕೋಟ್ ವೈಮಾನಿಕ ದಾಳಿಯ ಹೀರೋ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ವೀರಚಕ್ರ ಪ್ರಶಸ್ತಿಯಿಂದ ಪುರಸ್ಕೃತರಾಗಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ವರ್ಧಮಾನ್ ಅವರಿಗೆ ವೀರಚಕ್ರ ಪುರಸ್ಕಾರ ಪ್ರದಾನ ಮಾಡಿದರು.
ಕಳೆದ 2019ರ ಫೆಬ್ರವರಿಯಲ್ಲಿ ಭಾರತ ಸರಕಾರ ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ಉಗ್ರರ ಶಿಬಿರಗಳಿಗೆ ಏರ್ ಸ್ಟ್ರೈಕ್ ಮಾಡಿತ್ತು. ಆ ಸಂದರ್ಭದಲ್ಲಿ ಪಾಕಿಸ್ಥಾನದ ಫೈಟರ್ ಜೆಟ್ ಅನ್ನು ತಮ್ಮ ಮಿಗ್ -21 ವಿಮಾನದಲ್ಲಿ ಬೆನ್ನಟ್ಟಿ ಹೋಗಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್, ಫೈಟರ್ ಜೆಟ್ಟನ್ನು ಹೊಡೆದುರುಳಿಸಿದ್ದರು. ಅಲ್ಲದೆ, ಪಾಕಿಸ್ಥಾನದ ವಾಯುಗಡಿ ದಾಟಿ ಹೋಗಿದ್ದರಿಂದ ಸೇನೆಯ ಪ್ರತಿದಾಳಿಗೆ ಸಿಲುಕಿ ಮಿಗ್ ವಿಮಾನ ನೆಲಕ್ಕುರುಳುತ್ತಿದ್ದಂತೆ ಪ್ಯಾರಾಚೂಟ್ ನಲ್ಲಿ ಹಾರಿದ್ದ ಅಭಿನಂದನ್ ಪಾಕಿಸ್ಥಾನ ಸೇನೆಗೆ ಸೆರೆಸಿಕ್ಕಿದ್ದರು.
ಆಬಳಿಕ ಭಾರತ ಸರಕಾರ ಮತ್ತು ಅಂತಾರಾಷ್ಟ್ರೀಯ ಸಮುದಾಯದ ತೀವ್ರ ಒತ್ತಡದ ಹಿನ್ನೆಲೆಯಲ್ಲಿ ಪಾಕ್ ಸರಕಾರ ಅಭಿನಂದನ್ ವರ್ಧಮಾನ್ ಅವರನ್ನು ಮಾರ್ಚ್ 1ರಂದು ಸುರಕ್ಷಿತವಾಗಿ ಬಿಟ್ಟುಕಳಿಸಿತ್ತು. ದಾಳಿಯ ಸಂದರ್ಭದಲ್ಲಿ ತನ್ನ ಪ್ರಾಣ ಲೆಕ್ಕಿಸದೆ ವೀರೋಚಿತ ಪ್ರದರ್ಶನ ನೀಡಿದ್ದ ವರ್ಧಮಾನ್, ಭಾರತ ಮಾತ್ರವಲ್ಲದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಪ್ರಶಂಸೆಗೆ ಪಾತ್ರರಾಗಿದ್ದರು. ಅಲ್ಲದೆ, ಅಮೆರಿಕ ಮೂಲದ ಎಫ್-16 ಫೈಟರ್ ಜೆಟ್ಟನ್ನು ಸಾಮಾನ್ಯ ಮಿಗ್ ವಿಮಾನದಲ್ಲಿ ಹಾರಿ, ಹೊಡೆದುರುಳಿಸಿದ್ದು ಹುಬ್ಬೇರುವಂತೆ ಮಾಡಿತ್ತು.
ಸಾಹಸದ ಕಾರ್ಯಕ್ಕಾಗಿ ಅಭಿನಂದನ್ ಅವರಿಗೆ ಭಾರತ ಸರಕಾರ ಇತ್ತೀಚೆಗೆ ವೀರಚಕ್ರ ಪ್ರಶಸ್ತಿ ಘೋಷಣೆ ಮಾಡಿತ್ತು. ಇದೀಗ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ರಾಷ್ಟ್ರಪತಿ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ವಿಂಗ್ ಕಮಾಂಡರ್ ಆಗಿದ್ದ ಅಭಿನಂದನ್ ಅವರಿಗೆ ತಮ್ಮ ಸಾಹಸದ ಪ್ರದರ್ಶನಕ್ಕಾಗಿ ನ.3ರಂದು ಗ್ರೂಪ್ ಕ್ಯಾಪ್ಟನ್ ಆಗಿ ಭಡ್ತಿ ನೀಡಲಾಗಿತ್ತು. ಗ್ರೂಪ್ ಕ್ಯಾಪ್ಟನ್ ಹುದ್ದೆ ಭಾರತೀಯ ಸೇನೆಯಲ್ಲಿ ಕರ್ನಲ್ ಹುದ್ದೆಗೆ ಸಮನಾಗಿದೆ.
Indian Air Force ace pilot Group Captain Abhinandan Varthaman was awarded the Vir Chakra by President Ram Nath Kovind in an investiture ceremony today. Abhinandan Varthaman was recently promoted to the rank of Group Captain. Abhinandan Varthaman shot down a Pakistani F-16 fighter aircraft during aerial combat on February 27 a day after the Balakot airstrike.
12-09-25 08:26 pm
HK News Desk
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 09:25 pm
Mangalore Correspondent
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
Mangalore Police, Sudheer Reddy: ಶಾಂತಿ ಕಾಪಾಡಲ...
12-09-25 12:58 pm
12-09-25 05:31 pm
Udupi Correspondent
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm
ಅಮೆರಿಕ ಅಧ್ಯಕ್ಷರ ಆಪ್ತ, ಬಲಪಂಥೀಯ ಕಾರ್ಯಕರ್ತ ಚಾರ್ಲ...
11-09-25 02:25 pm
Mangalore Police, Communial Case, Arrest, Cri...
08-09-25 10:34 pm