ಬ್ರೇಕಿಂಗ್ ನ್ಯೂಸ್
24-11-21 05:26 pm HK news Desk ದೇಶ - ವಿದೇಶ
ನವದೆಹಲಿ, ನ.24: ಬ್ಯಾಂಕ್ ಅಥವಾ ಫೈನಾನ್ಸ್ ಸಂಸ್ಥೆಗಳಲ್ಲಿ ಅರ್ಜೆಂಟ್ ಲೋನ್ ಸಿಗಬೇಕಿದ್ದರೆ ತಿಪ್ಪರಲಾಗ ಹಾಕಿದ್ರೂ ಸಿಗೋದಿಲ್ಲ. ಅದಕ್ಕಾಗಿ ನೂರೆಂಟು ದಾಖಲೆ, ಅಡಮಾನದ ಬಗ್ಗೆ ಮಾಹಿತಿ ಕೇಳುತ್ತಾರೆ. ಇದಲ್ಲದೆ, ಹತ್ತಾರು ಅರ್ಜಿ, ಪತ್ರಗಳಿಗೆ ಸಹಿ ಹಾಕಬೇಕಾಗುತ್ತದೆ. ಇದೇ ಕಾರಣಕ್ಕೆ ಭಾರತದಲ್ಲಿ ಆನ್ಲೈನ್ ಲೋನ್ ಏಪ್ಸ್ ಭಾರೀ ವೇಗದಲ್ಲಿ ಜನಪ್ರಿಯ ಆಗುತ್ತಿವೆ. ಯಾವುದೇ ಅಡಮಾನ, ದಾಖಲೆ ಪತ್ರಗಳೇ ಇಲ್ಲದೆ ಲೋನ್ ಕೊಡುವ ಕಾರಣಕ್ಕೆ ಜನರು ಮಾರುಹೋಗುತ್ತಿದ್ದಾರೆ. ಆದರೆ, ಭಾರತದಲ್ಲಿ ಸಾವಿರಕ್ಕೂ ಹೆಚ್ಚು ಈ ರೀತಿಯ ಲೋನ್ ಏಪ್ಸ್ ಇದ್ದು ಇತ್ತೀಚೆಗೆ ಆರ್ ಬಿಐ ಈ ಪೈಕಿ 600ಕ್ಕೂ ಹೆಚ್ಚು ಲೋನ್ ಏಪ್ಸ್ ಗಳನ್ನು ಅಕ್ರಮ ಎಂದು ಘೋಷಣೆ ಮಾಡಿದೆ.
ಭಾರತದಲ್ಲಿ ಚಾಲ್ತಿಯಲ್ಲಿರುವ ಲೋನ್ ಏಪ್ಸ್ ಗಳಲ್ಲಿ 3ನೇ ಎರಡರಷ್ಟು ಚೀನಾ ಮೂಲದವುಗಳು. ಎರಡು ವರ್ಷಗಳ ಕೊರೊನಾ ಲಾಕ್ಡೌನ್ ಬಳಿಕ ಈ ರೀತಿಯ ಲೋನ್ ಏಪ್ಸ್ ಗಳ ಹಾವಳಿಯೂ ಭಾರೀ ವೇಗದಲ್ಲಿ ಹೆಚ್ಚಿದ್ದು, ಅಷ್ಟೇ ವೇಗದಲ್ಲಿ ಇವುಗಳ ನಿಜ ಬಣ್ಣವೂ ಹೊರಬಿದ್ದಿದೆ. ಲೋನ್ ಏಪ್ಸ್ ಹೆಸರಲ್ಲಿ ಯಾವುದೇ ಅಡಮಾನ ಇಲ್ಲದೆ, ಸಾಲ ನೀಡುವ ಈ ಏಪ್ಸ್ ಗಳ ಅಸಲಿ ಬಣ್ಣ ಕೇಳಿದರೆ ನಿಜಕ್ಕೂ ಹೌಹಾರುತ್ತೀರಿ..
ಲೋನ್ ಏಪ್ಸ್ ಕಾರ್ಯ ನಿರ್ವಹಣೆ ಹೇಗೆ ?
ಸಾಮಾನ್ಯವಾಗಿ ಭಾರತದಲ್ಲಿ ಬಹುತೇಕ ಮಂದಿ ಆಂಡ್ರಾಯ್ಡ್ ಮೊಬೈಲ್ ಬಳಕೆ ಮಾಡುತ್ತಾರೆ. ಆಂಡ್ರಾಯ್ಡ್ ಮೊಬೈಲ್ ಬಳಸುವ ಮತ್ತು ಕಡಿಮೆ ಸಂಬಳದ ಮಂದಿಯನ್ನೇ ಟಾರ್ಗೆಟ್ ಮಾಡಿಕೊಂಡಿರುವ ಈ ಏಪ್ಸ್ ಕಂಪನಿಗಳು ಜನರನ್ನು ಸುಲಭದಲ್ಲಿ ಬಲಿಗೆ ಬೀಳಿಸುತ್ತದೆ. ಫ್ರೀ ಲೋನ್, ಫಾಸ್ಟ್ ಲೋನ್, ಡೈರೆಕ್ಟ್ ಕ್ಯಾಶ್ ಈ ರೀತಿಯ ಕೀ ವರ್ಡ್ ಗಳಲ್ಲಿ ನಿಮಗೆ ಲೋನ್ ಬೇಕಾ ಎಂದು ಕೇಳಿ, ಅದರ ಜೊತೆಗೆ ಒಂದು ಲಿಂಕ್ ಅನ್ನು ಮೆಸೇಜ್ ಮಾಡುತ್ತದೆ. ಅದನ್ನು ಒತ್ತಿದ ಕೂಡಲೇ ನಿಮ್ಮನ್ನು ಮುಂದಿನ ಹೆಜ್ಜೆ ಇಡಲು ಅಲ್ಲಿಂದಲೇ ಸೂಚನೆ ಬರುತ್ತದೆ.
ಈ ರೀತಿಯ ನೂರಾರು ಲೋನ್ ಏಪ್ಸ್ ಗಳು ಗೂಗಲ್ ಸ್ಟೋರ್ ನಲ್ಲಿದ್ದು, ನಿಮ್ಮನ್ನು ಏಪ್ಸ್ ಡೌನ್ಲೋಡ್ ಮಾಡಲು ಹೇಳುತ್ತದೆ. ಕೇವಲ ಪಾನ್ ಕಾರ್ಡ್, ಆಧಾರ್ ಕಾರ್ಡ್ ಪ್ರತಿ ಕೇಳುವ ಈ ಏಪ್ಸ್ ಗಳು ನಿಮಗೆ ಬೇರಾವುದೇ ಖಾತರಿಯನ್ನೂ ನೀಡದೆ ಲೋನ್ ನೀಡುತ್ತದೆ. ನಿಮಗೆ ಬರುವ ಮೆಸೇಜ್ ನಲ್ಲಿ ಕೇವಲ 0.98 ಶೇಕಡಾ ಬಡ್ಡಿ ಎಂದೂ ಹೇಳುವುದರಿಂದ ಜನರು ಸಹಜವಾಗೇ ಮರುಳಾಗಿ ಇದರಲ್ಲಿ ಲೋನ್ ಪಡೆಯುತ್ತಿದ್ದಾರೆ.
ಒಂದೇ ಕ್ಲಿಕ್ ನಲ್ಲಿ ನಿಮ್ಮ ಮಾಹಿತಿ ಸೋರಿಕೆ
ನೀವು ಈ ರೀತಿಯ ಲೋನ್ ಏಪ್ಸ್ ಡೌನ್ಲೋಡ್ ಮಾಡಿದ ಕೂಡಲೇ, ನಿಮ್ಮ ಫೋನಲ್ಲಿರುವ ಎಲ್ಲ ಮಾಹಿತಿಗಳೂ ತನ್ನಿಂತಾನೇ ಏಪ್ ಸರ್ವರ್ ಗೆ ರವಾನೆಯಾಗುತ್ತದೆ. ಅಂದರೆ, ಈ ರೀತಿಯ ಏಪ್ಸ್ ಗಳು ನಿಮ್ಮ ಮೊಬೈಲಿನಲ್ಲಿರುವ ಎಲ್ಲವನ್ನೂ ಕದ್ದು ಬಿಡುತ್ತದೆ. ಗ್ಯಾಲರಿಯಲ್ಲಿರುವ ಫೋಟೋಗಳು, ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿರುವ ನಂಬರ್ ಗಳು, ನಿಮ್ಮ ಮೊಬೈಲಿನಲ್ಲಿರುವ ಅಪ್ಲಿಕೇಶನ್ ಗಳು, ನಿಮ್ಮ ಆಪ್ತರು ಯಾರು, ಸಾಮಾನ್ಯವಾಗಿ ಹೆಚ್ಚು ಕರೆ ಮಾಡಿ ಮಾತನಾಡುವ ವ್ಯಕ್ತಿಗಳು ಇತ್ಯಾದಿ ಎಲ್ಲ ಮಾಹಿತಿಯೂ ಲೋನ್ ಏಪ್ಸ್ ಕೈಸೇರುತ್ತದೆ. ಇವ್ಯಾವುದೂ ನೀವು ಲೋನ್ ಪಡೆಯುವ ಸಂದರ್ಭದಲ್ಲಿ ಗಮನಕ್ಕೆ ಬಂದಿರುವುದಿಲ್ಲ. I Agree ಎನ್ನುವ ಷರತ್ತಿಗೆ ನೀವು ಮೊದಲೇ ಒಪ್ಪಿಗೆ ನೀಡಿಯೇ ಎಂಟ್ರಿ ಆಗಿರುತ್ತೀರಿ. ಸುಲಭದಲ್ಲಿ ಸಾಲ ಸಿಗುವ ಧಾವಂತದಲ್ಲಿ ಇದನ್ನು ನೋಡುವ ವ್ಯವಧಾನವೂ ಇರುವುದಿಲ್ಲ ಬಿಡಿ.
ಮೊದಲಾಗಿ, ಈ ರೀತಿಯ ಯಾವುದೇ ಲೋನ್ ಏಪ್ಸ್ ಗಳು ಭಾರತದ ಆರ್ ಬಿಐ ಅಧೀನದಲ್ಲಿ ಬರುವ ಹಣಕಾಸು ಸಂಸ್ಥೆಗಳಲ್ಲ. ಹೀಗಾಗಿ ಆರ್ ಬಿಐ ನೀತಿ- ನಿಮಯಗಳು ಈ ಲೋನ್ ಏಪ್ಸ್ ಗಳಿಗೆ ಪರಿಣಾಮ ಬೀರುವುದಿಲ್ಲ. ಈ ಕಂಪನಿಗಳು ನೀಡುವ ಕಡಿಮೆ ಬಡ್ಡಿದರದ ಆಮಿಷದ ಅಸಲಿ ಬಣ್ಣ ನಾವು ಪಡೆಯೋ ಸಾಲದ ಬಾಬ್ತನ್ನು ಕಟ್ಟುವ ಸಂದರ್ಭದಲ್ಲಿಯೇ ಅರಿವಿಗೆ ಬರುತ್ತದೆ. ಕಂಪನಿಗಳು ಹೇಳುವ 0.98 ಶೇಕಡಾ ಬಡ್ಡಿ ಎನ್ನುವುದು ಒಂದು ದಿನಕ್ಕೆ ವಿಧಿಸುವ ಶೇಕಡಾವಾರು ಬಡ್ಡಿ ಮೊತ್ತ ಆಗಿರುತ್ತದೆ. ಇದರ ಪ್ರಕಾರ, ವಾರ್ಷಿಕ ಬಡ್ಡಿ ದರ ಸರಿಸುಮಾರು 66 ಶೇಕಡಾ ಆಗಿರುತ್ತದೆ. ಹೀಗೆ ಥರಾವರಿ ಬಡ್ಡಿಯನ್ನು ಸೇರಿಸಿ, ಚಕ್ರಬಡ್ಡಿ ರೂಪದಲ್ಲಿ ನಮ್ಮಲ್ಲಿ ಹಣವನ್ನು ಪೀಕಿಸಲಾಗುತ್ತದೆ. ಆದರೆ, ಯಾವುದೇ ಅಡಮಾನ ಇಲ್ಲದೆ, ಹಣ ಪೀಕಿಸುವುದು ಹೇಗೆ ಎನ್ನುವುದು ನಿಮ್ಮ ಪ್ರಶ್ನೆ ಆಗಿರಬಹುದು.
ನಿಮಗೇ ಅರಿವಿಲ್ಲದೆ ಬ್ಲಾಕ್ಮೇಲ್ ತಂತ್ರ
ಅದಕ್ಕಾಗಿಯೇ ಅದು ನಿಮ್ಮ ಮೊಬೈಲಿನಿಂದ ಮೊದಲೇ ಎಲ್ಲ ಮಾಹಿತಿಗಳನ್ನೂ ಕದ್ದು ಸ್ಟೋರ್ ಮಾಡಿರುತ್ತದೆ. ನೀವು ನಿಗದಿತ ಅವಧಿಯಲ್ಲಿ ಹಣ ಪಾವತಿ ಮಾಡದೇ ಇದ್ದರೆ, ನೇರವಾಗಿ ನಿಮ್ಮ ಫೋಟೋ ಜೊತೆಗೆ ಫ್ರಾಡ್ ಅನ್ನುವ ಗುರುತು ಹಾಕಿ, ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್ ನಲ್ಲಿರುವ ಎಲ್ಲರಿಗೂ ಕಳಿಸುತ್ತದೆ. ಜೊತೆಗೆ, ನಿಮ್ಮ ಅರೆಬೆತ್ತಲೆ ಅಥವಾ ಯುವತಿಯರ ಜೊತೆಗಿರುವ ಫೋಟೋಗಳು ಗ್ಯಾಲರಿಯಲ್ಲಿದ್ದರೆ ಅದನ್ನು ಹೆಕ್ಕಿತೆಗೆದು ಫ್ರಾಡ್ ಎಂದು ಮಾರ್ಕ್ ಹಾಕಿ, ರವಾನೆ ಮಾಡುತ್ತದೆ. ಇದಲ್ಲದೆ, ನಿಮಗೆ ಸರಣಿ ರೂಪದಲ್ಲಿ ಫೋನ್ ಕರೆಗಳೂ ಬರುತ್ತವೆ. ಈಮೂಲಕ ನಿಮ್ಮನ್ನು ಬ್ಲಾಕ್ಮೇಲ್ ಮಾಡುವ ದಂಧೆಯೂ ಇದರ ಹಿಂದಿರುತ್ತದೆ. ಆಧಾರ್ ಮತ್ತು ಪಾನ್ ಕಾರ್ಡ್ ನಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್ ಲಿಂಕ್ ಆಗಿರುವುದರಿಂದ ನಿಮ್ಮದೆಲ್ಲವೂ ಲೋನ್ ಏಪ್ಸ್ ಕಂಪನಿ ಬಳಿ ಇರುತ್ತದೆ. ನಿಮ್ಮ ಖಾತೆಯಲ್ಲಿರುವ ಹಣದ ಬಗ್ಗೆಯೂ ಅದಕ್ಕೆ ಮಾಹಿತಿ ಇರುತ್ತದೆ.
ಚೀನಾದಲ್ಲಿ ಈ ತಂತ್ರ ಭಾರೀ ಫೇಮಸ್
ಚೀನಾದಲ್ಲಿ ಈ ರೀತಿಯ ಲೋನ್ ಏಪ್ಸ್ ಗಳು ಬಹು ಜನಪ್ರಿಯ. ಕಳೆದ ಒಂದು ವರ್ಷದಲ್ಲಿ ಭಾರತದಲ್ಲಿಯೂ ಈ ಏಪ್ಸ್ ಗಳು ಚಾಲ್ತಿಗೆ ಬಂದಿದ್ದು, ಜನರನ್ನು ತಮ್ಮೆಡೆಗೆ ಸೆಳೆದುಕೊಂಡಿವೆ. ಆರ್ ಬಿಐ ನೀತಿ ಪ್ರಕಾರ, ವರ್ಷಕ್ಕೆ 36 ಶೇಕಡಕ್ಕಿಂತ ಮೀರಿ ಬಡ್ಡಿ ಪಡೆಯುವಂತಿಲ್ಲ. ಅದರ ಜೊತೆಗೆ 18 ಪರ್ಸೆಂಟ್ ಜಿಎಸ್ಟಿ ತೆರಿಗೆಯೂ ಇರುತ್ತದೆ. ಆದರೆ, ಈ ಏಪ್ಸ್ ಗಳು ಅದಕ್ಕಿಂತ ಹೆಚ್ಚು ಬಡ್ಡಿ ವಿಧಿಸಿ, ಬ್ಲಾಕ್ಮೇಲ್ ತಂತ್ರ ಬಳಸಿ ಲೋನ್ ಹೆಸರಲ್ಲಿ ಹೈರಾಣು ಮಾಡುತ್ತವೆ. ಎಲ್ಲೋ ನಿಗೂಢ ಜಾಗದಲ್ಲಿ ಕುಳಿತೇ ಈ ರೀತಿಯ ವಹಿವಾಟು ನಡೆಯುತ್ತದೆ ಎನ್ನುವುದು ಇದರ ಹಿಂದಿನ ಮಾಯಾಜಾಲ.
ಬೆತ್ತಲೆ ಫೋಟೋಗೆ ಸಿಗಲಿದೆ ಸುಲಭ ಸಾಲ !
ನೀವು ಮಹಿಳೆಯರು, ಯುವತಿಯರಾಗಿದ್ದರೆ, ಅರ್ಜೆಂಟ್ ಹಣ ಬೇಕೆಂದು ಕೇಳಿದರೆ ಕೆಲವು ಲೋನ್ ಏಪ್ಸ್ ಗಳಲ್ಲಿ ಈ ರೀತಿಯ ವಿಚಿತ್ರ ಆಫರ್ ಕೂಡ ಇರುತ್ತದೆ. ನೀವೊಮ್ಮೆ ನಗ್ನಳಾಗಿ ವಿಡಿಯೋ ಕರೆ ಮಾಡಬೇಕೆಂದು ಆಫರ್ ಬರುತ್ತದೆ. ನಗ್ನಳಾಗಿರುವ ಫೋಟೋಗಳನ್ನು ಕಳಿಸಿಕೊಟ್ಟರೆ ಕೆಲವೇ ಗಂಟೆಗಳಲ್ಲಿ ನೀವು ಕೇಳಿದಷ್ಟು ಲೋನ್ ನಿಮ್ಮ ಬ್ಯಾಂಕ್ ಖಾತೆಗೆ ಬಂದು ಬೀಳುತ್ತದೆ. ಬೇರಾವುದೇ ಅಡಮಾನವನ್ನೂ ಅವರು ಕೇಳುವುದಿಲ್ಲ. ಆದರೆ, ನೀವು ಈ ರೀತಿಯ ಏಪ್ಸ್ ಡೌನ್ಲೋಡ್ ಮಾಡಿದ ಕೂಡಲೇ ನಿಮ್ಮ ಮಾಹಿತಿಗಳನ್ನು ಕದ್ದು ಸ್ಟೋರ್ ಮಾಡಿರುತ್ತದೆ. ನಿಮ್ಮ ಸಾಲದ ಅವಧಿ ಮುಗಿಯುತ್ತಲೇ, ನ್ಯೂಡ್ ಲೋನ್ ಏಪ್ಸ್ ತಮ್ಮ ಜಾಲ ಬೀಸುತ್ತದೆ. ಅಲ್ಲಿಂದ ಕೊಡೋ ಗಡುವಿಗೆ ಹಣ ಕಟ್ಟಿದರೆ ಆಯ್ತು. ಇಲ್ಲಾಂದ್ರೆ, ನೀವು ಕಳಿಸಿರುವ ನಗ್ನ ಫೋಟೋಗಳನ್ನು ನಿಮ್ಮ ಕಾಂಟ್ಯಾಕ್ಟ್ ಲಿಸ್ಟಲ್ಲಿರುವ ಎಲ್ಲರಿಗೂ ರವಾನಿಸುತ್ತದೆ. ನಿಮ್ಮ ಮೊಬೈಲಿನ ವಾಟ್ಸಾಪ್ ಗುರುತಿನಲ್ಲಿ ನಿಮ್ಮದೇ ನಗ್ನ ಫೋಟೋ ಅಚ್ಚೊತ್ತುವಂತೆ ಮಾಡುತ್ತದೆ.
ಕೇಳಿದರೆ, ಅದ್ಭುತ ಅನ್ನುವಂತಿರುವ ಈ ಮಾಯಾಜಾಲದ ಲೋನ್ ಏಪ್ಸ್ ಲೋಕ ದೇಶದೆಲ್ಲೆಡೆ ಹರಡಿಕೊಂಡಿದೆ. ಈ ರೀತಿ ಲೋನ್ ಏಪ್ಸ್ ನಲ್ಲಿ ಬ್ಲಾಕ್ಮೇಲ್ ಆಗಿರುವ ಬಗ್ಗೆ, ವಂಚನೆ ಆಗಿರುವ ಬಗ್ಗೆ ನೀವು ಯಾವುದೇ ಕಡೆ ದೂರು ಕೊಡುವಂತಿಲ್ಲ. ದೂರು ಕೊಟ್ಟರೂ, ಅದನ್ನು ಪತ್ತೆ ಮಾಡುವುದು, ಅದರ ಹಿಂದಿರುವ ಮಂದಿಯನ್ನು ಪತ್ತೆ ಮಾಡುವುದು ಕಷ್ಟದ ಕೆಲಸ. ಯಾಕಂದ್ರೆ, ನಾನ್ ಬ್ಯಾಂಕಿಂಗ್ ಫೈನಾನ್ಸ್ ಕಂಪನಿ ಹೆಸರಲ್ಲಿ ನಾಮಕೆವಾಸ್ತೆ ರಿಜಿಸ್ಟರ್ ಆಗಿದ್ದರೂ, ಅದರ ಹ್ಯಾಂಡಲಿಂಗ್ ಪೂರ್ತಿಯಾಗಿ ಚೀನಾದಲ್ಲಿರುತ್ತದೆ. 2020ರ ಜನವರಿಯಿಂದ 2021ರ ಎಪ್ರಿಲ್ ವರೆಗಿನ ಅವಧಿಯಲ್ಲಿ ಭಾರತದಲ್ಲಿ ಈ ರೀತಿಯ ಬ್ಲಾಕ್ಮೇಲ್ ಗೆ ತುತ್ತಾಗಿ 2500ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಇದರಿಂದ ಎಚ್ಚೆತ್ತ ಆರ್ ಬಿಐ, ಈ ಬಗ್ಗೆ ಪರಿಶೀಲನೆ ಮಾಡುವುದಕ್ಕಾಗಿಯೇ ಒಂದು ತಂಡವನ್ನು ನೇಮಿಸಿದೆ. ಈ ಸೈಬರ್ ತಜ್ಞರ ತಂಡ ಈಗ 600ಕ್ಕೂ ಹೆಚ್ಚು ಲೋನ್ ಏಪ್ಸ್ ಗಳನ್ನು ಕಾನೂನು ಬಾಹಿರ ಎಂದು ಘೋಷಿಸಿದ್ದು, ಜನರು ಬಳಕೆ ಮಾಡದಂತೆ ಸೂಚನೆ ನೀಡಿದೆ. ಮನಿ ವೀವ್, ಮನಿ ಕಂಟ್ರೋಲ್, ಮನಿ ಟ್ಯಾಪ್, ಲೋನ್ ಟ್ಯಾಪ್, ಕ್ಯಾಶ್ ಬೀನ್, ಕ್ರೆಡಿಟ್ ಬೀನ್ ಹೀಗೆ ನೂರಾರು ಮಾದರಿಯ ಕೀ ವರ್ಡ್ ಆಧರಿಸಿ ಈ ಲೋನ್ ಏಪ್ಸ್ ಇದ್ದು, ಯಾವುದು ನಕಲಿ, ಯಾವುದು ಅಸಲಿ ಅನ್ನುವುದನ್ನು ಪತ್ತೆ ಮಾಡುವುದೇ ಸಾಧ್ಯವಾಗದ ಕೆಲಸ.
Fake money lending Chinese Apps launched in India, blackmail clients of personal photos and information. Lakhs of Indians have been duped of their “investment” and their sensitive data stolen through malicious “quick earning” apps running in the garb of an online multi-level marketing campaign.
01-05-25 01:48 pm
Bangalore Correspondent
Dk Suresh, Pavitra, wife Video: ಡಿ.ಕೆ ಬ್ರದರ್...
01-05-25 01:08 pm
MA Saleem, DGP-IGP, Prashanth Thakur, Police:...
30-04-25 05:08 pm
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
02-05-25 03:52 am
Mangaluru Staff
Suhas Shetty murder, Mangalore Bandh: ಸುಹಾಸ್...
02-05-25 03:29 am
Mangalore, Kudupu Murder case, MLA Bharath Sh...
01-05-25 09:29 pm
Mangalore Kudupu Murder Case, Update, Police:...
01-05-25 05:38 pm
Ramanath Rai, Kudupu Murder case, SIT: ಧರ್ಮಾಧ...
01-05-25 04:01 pm
01-05-25 10:06 pm
Mangalore Correspondent
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am