ಬಿಪಿನ್ ರಾವತ್ ಬಗ್ಗೆ ಅವಹೇಳನ ; ಮುಸ್ಲಿಮರ ಬಗ್ಗೆ ಬೇಸರಗೊಂಡು ಹಿಂದು ಧರ್ಮಕ್ಕೆ ಮತಾಂತರ ಆಗಲು ನಿರ್ಧರಿಸಿದ ಖ್ಯಾತ ನಿರ್ದೇಶಕ

11-12-21 04:31 pm       HK Desk news   ದೇಶ - ವಿದೇಶ

ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ ಅಲಿ ಅಕ್ಬರ್ ಹಿಂದು ಧರ್ಮಕ್ಕೆ ಮತಾಂತರ ಆಗಲು ನಿರ್ಧರಿಸಿದ್ದಾರೆ.

ತಿರುವನಂತಪುರ, ಡಿ.11 : ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ ಅಲಿ ಅಕ್ಬರ್ ಹಿಂದು ಧರ್ಮಕ್ಕೆ ಮತಾಂತರ ಆಗಲು ನಿರ್ಧರಿಸಿದ್ದಾರೆ. ಬಿಪಿನ್ ರಾವತ್ ಸಾವಿನ ಬಗ್ಗೆ ಮುಸ್ಲಿಂ ಸಮುದಾಯದ ಕೆಲ ವ್ಯಕ್ತಿಗಳು ಸಂಭ್ರಮಿಸುವ ಪೋಸ್ಟ್ ಹಾಕಿದ್ದನ್ನು ವಿರೋಧಿಸಿ, ಆಲಿ ಅಕ್ಬರ್ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.

ಈ ಬಗ್ಗೆ ಫೇಸ್ಬುಕ್ ಪೇಜ್ ನಲ್ಲಿ ವಿಡಿಯೋ ಪ್ರಕಟಿಸಿರುವ ಆಲಿ ಅಕ್ಬರ್, ರಕ್ಷಣಾ ಪಡೆಗಳ ಮುಖ್ಯಸ್ಥರ ಸಾವಿನ ಬಗ್ಗೆ ಕೆಲವು ಮುಸ್ಲಿಂ ವ್ಯಕ್ತಿಗಳು ಖುಷಿ ವ್ಯಕ್ತಪಡಿಸಿದ್ದನ್ನು ಖಂಡಿಸಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿದ್ದಾರೆ. ನಾನು ಮತ್ತು ನನ್ನ ಹೆಂಡತಿ ಹಿಂದು ಧರ್ಮಕ್ಕೆ ಮತಾಂತರ ಆಗುತ್ತಿದ್ದೇವೆ. ಬಿಪಿನ್ ರಾವತ್ ಬಗ್ಗೆ ಅಗೌರವ ಸೂಚಿಸಿದ್ದು ನನಗೆ ನೋವುಂಟು ಮಾಡಿದೆ. ಇದನ್ನು ಖಂಡಿಸಿ, ಮುಸ್ಲಿಂ ಆಚರಣೆ, ನಂಬಿಕೆಗಳನ್ನು ಕೈಬಿಡುವುದಾಗಿ ಹೇಳಿದ್ದಾರೆ.

ಆಲಿ ಅಕ್ಬರ್ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು ಮುಸ್ಲಿಂ ಸಮುದಾಯದವರಿಂದ ವಿರೋಧ ವ್ಯಕ್ತವಾಗಿದೆ. ಹಲವಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲಿ ಅಕ್ಬರ್ 90ರ ದಶಕದಿಂದ ಮಲಯಾಳಂ ಚಿತ್ರರಂಗದಲ್ಲಿದ್ದು, ಖ್ಯಾತ ನಿರ್ದೇಶಕರಾಗಿ ಗುರುತಿಸಲ್ಪಟ್ಟಿದ್ದಾರೆ. 12ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿ, ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಗಳಿಸಿದ್ದಾರೆ.

ಅಲಿ ಅಕ್ಬರ್ ಈ ಹಿಂದೆ ರಾಜ್ಯ ಬಿಜೆಪಿ ಸಮಿತಿಯ ಸದಸ್ಯರಾಗಿದ್ದರು. ಆನಂತರ, ನಾಯಕತ್ವದ ವಿಚಾರದಲ್ಲಿ ಅಸಮಾಧಾನಗೊಂಡು ಸಕ್ರಿಯ ರಾಜಕಾರಣದಿಂದ ಹಿಂದೆ ಸರಿದಿದ್ದರು.

Condemning the disrespectful reactions by some to the news of the death of Chief of Defence Staff General Bipin Rawat in a chopper crash, Kerala filmmaker Ali Akbar said he has lost faith in religion and will convert to Hinduism along with his wife. Earlier in a video, Ali Akbar had expressed his contempt for those who reacted with smiling emoticons to posts about General Bipin Rawat's death. On Wednesday, he declared that he had lost faith in the religion. Now, he and his wife Lucyamma are set to become Hindus.